newsfirstkannada.com

‘ಜೈ ಶ್ರೀರಾಮ್‌.. ನಾನಿಲ್ಲಿ ಒಬ್ಬ ಹಿಂದೂ ಆಗಿ ಬಂದಿದ್ದೇನೆ..’ ಇಂಗ್ಲೆಂಡ್ ಪ್ರಧಾನಿ ರಿಶಿ ಸುನಕ್ ಹೇಳಿಕೆ

Share :

16-08-2023

  ಮೊರಾರಿ ‘ರಾಮ ಕಥಾ’ದಲ್ಲಿ ಭಾಗಿಯಾಗಿ ಮಾತು

  ಕೆಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮ

  ಶ್ರೀರಾಮ ನನಗೆ ಸ್ಫೂರ್ತಿ ನೀಡುತ್ತಾನೆ ಎಂದ ಸುನಕ್

ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಇಂಗ್ಲೆಂಡ್​​ ಕೇಂಬ್ರಿಡ್ಜ್ ಯೂನಿವರ್ಸಿಟಿಯಲ್ಲಿ ಮೊರಾರಿ ಬಾಪು ಅವರ ರಾಮಕಥಾ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಈ ಸಮಾರಂಭದಲ್ಲಿ ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಭಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿರುವ ಅವರು, ನಾನಿಲ್ಲಿಗೆ ಪ್ರಧಾನಿಯಾಗಿ ಬಂದಿಲ್ಲ. ಒಬ್ಬ ಹಿಂದೂ ಆಗಿ ಬಂದಿದ್ದೇನೆ. ಭಾರತದ ಸ್ವಾತಂತ್ರ್ಯ ಉತ್ಸವದಂದು ಕೆಂಬ್ರಿಡ್ಜ್​ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಮೊರಾರಿ ಬಾಪು ಅವರ ‘ರಾಮಕಥಾ’ದಲ್ಲಿ ಭಾಗಿಯಾಗುತ್ತಿರೋದಕ್ಕೆ ತುಂಬಾ ಖುಷಿ ಆಗುತ್ತಿದೆ. ಜೊತೆಗೆ ನನ್ನನ್ನು ಆಹ್ವಾನ ಮಾಡಿರೋದಕ್ಕೆ ಅಬಾರಿ ಆಗಿದ್ದೇನೆ. ನಾನಿಲ್ಲಿ ಇಂಗ್ಲೆಂಡ್ ಪ್ರಧಾನಿಯಾಗಿ ಬಂದಿಲ್ಲ. ಓರ್ವ ಹಿಂದೂ ಆಗಿ ಇಲ್ಲಿಗೆ ಬಂದಿದ್ದೇನೆ ಎಂದರು.

ಮೊರಾರಿ ಬಾಪು ನಂಬಿಕೆ ವೈಯಕ್ತಿಕವಾಗಿದೆ. ಆದರೆ ಅವರ ಜೀವನದ ಪ್ರತಿಯೊಂದು ಅಂಶವೂ ಕೂಡ ಮಾರ್ಗದರ್ಶನ ನೀಡುತ್ತದೆ ಎಂದರು. ವಿಡಿಯೋದಲ್ಲಿ ರಿಶಿ ಸುನಕ್ ‘ಜೈ ಶ್ರೀರಾಮ್’ ಎಂದು ನಮಸ್ಕಾರ ಮಾಡೋದನ್ನು ಕಾಣಬಹುದಾಗಿದೆ. ಬಾಪು ಅವರ ರಾಮ ಕಥಾ ಕೇಳಿಸಿಕೊಂಡು ಹೋಗುವುದರ ಜೊತೆಗೆ ಭಗವದ್ಗೀತ ಮತ್ತು ಹನುಮಾನ್ ಚಾಲಿಸಾವನ್ನೂ ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳುತ್ತೇನೆ. ಶ್ರೀರಾಮ ಕೂಡ ಜೀವನದಲ್ಲಿ ನನಗೆ ಸ್ಫೂರ್ತಿ ನೀಡುತ್ತಾನೆ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಜೈ ಶ್ರೀರಾಮ್‌.. ನಾನಿಲ್ಲಿ ಒಬ್ಬ ಹಿಂದೂ ಆಗಿ ಬಂದಿದ್ದೇನೆ..’ ಇಂಗ್ಲೆಂಡ್ ಪ್ರಧಾನಿ ರಿಶಿ ಸುನಕ್ ಹೇಳಿಕೆ

https://newsfirstlive.com/wp-content/uploads/2023/08/RAM_KATHA.jpg

Load More