ಜಮೀನು ವಿಚಾರಕ್ಕೆ ಅಣ್ಣ-ತಂಗಿ ಮಧ್ಯೆ ವಾರ್
ಸಹೋದರಿಗೆ ಮನಬಂದಂತೆ ಹೊಡೆದ ಅಣ್ಣ..!
ಚನ್ನಪಟ್ಟಣದ ಕೆರೆದೊಡ್ಡಿ ಗ್ರಾಮದಲ್ಲಿ ಘಟನೆ
ರಾಮನಗರ: ಆಸ್ತಿಗಾಗಿ ಏನ್ ಬೇಕಾದ್ರೂ ಆಗಿ ಬಿಡುತ್ತೆ ನೋಡಿ. ಒಂದೇ ಒಂದು ಆಸ್ತಿ ಎಂಥವರನ್ನೂ ದೂರ ಮಾಡಿಬಿಡುತ್ತೆ. ಒಡಹುಟ್ಟಿದವರು ದಾಯಾದಿಗಳಾಗಿ ಬಿಡ್ತಾರೆ. ಕಟುಕರಾಗಿಬಿಡ್ತಾರೆ, ಕ್ರೂರಿಗಳಾಗಿಬಿಡ್ತಾರೆ. ಇದಕ್ಕೆ ಸಾಕ್ಷಿಯೇ ಈ ಸ್ಟೋರಿ!
ತಂಗಿ ಅನ್ನೋದನ್ನೂ ನೋಡದೇ ಈ ಕಟುಕ ಸಹೋದರ ಕೋಲಲ್ಲಿ ಹೊಡೆಯುತ್ತಿದ್ದಾನೆ. ಪಾಪಾ ಮಹಿಳೆ ಎಷ್ಟೇ ಬಿಟ್ಟುಬಿಡಿ ಎಂದು ಬೇಡಿಕೊಂಡರೂ ಬಿಟ್ಟಿಲ್ಲ. ಕಿರುಚಾಡಿದ್ರೂ ಪರಿಪರಿಯಾಗಿ ಬೇಡಿದ್ರೂ ಬಿಡಲಿಲ್ಲ ಈ ಪಾಪಿ. ಕೊನೆಗೂ ಸ್ವಂತ ತಂಗಿಯನ್ನೇ ಆಸ್ತಿಗಾಗಿ ಕಾಲಲ್ಲಿ ತುಳಿದು ಕೋಲಲ್ಲಿ ಹೊಡೆದು ದರ್ಪ ಮರೆದಿದ್ದಾನೆ.
ಜಮೀನು ವಿಚಾರಕ್ಕೆ ಕಿರಿಕ್
ಇದು ನಡೆದಿದ್ದು ಮತ್ತೆಲ್ಲೂ, ಬದಲಿಗೆ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಕುರಿದೊಡ್ಡಿ ಗ್ರಾಮದಲ್ಲಿ. ಜಮೀನು ವಿಚಾರಕ್ಕೆ ತಂಗಿ ಹಾಗೂ ಸಹೋದರ ನಡುವೆ ಗಲಾಟೆ ನಡೆದಿದೆ. ರೊಚ್ಚಿಗೆದ್ದ ಸಹೋದರ ರಾಜಣ್ಣ ತನ್ನ ಸಹೋದರಿಗೆ ಕಾಲಿನಿಂದ ತುಳಿದು, ದೊಣ್ಣೆಯಿಂದ ಹೊಡೆದು ದರ್ಪ ತೋರಿದ್ದಾನೆ.
ಮನೆಯಲ್ಲಿ ಯಾರು ಇಲ್ಲದ ವೇಳೆ ಏಕಾಏಕಿ ನುಗ್ಗಿದ ಸಹೋದರ ರಾಜಣ್ಣ ತನ್ನ ಸಹೋದರಿಗೆ ಮನಬಂದಂತೆ ಹೊಡೆದು ಹಲ್ಲೆ ಮಾಡಿದ್ದಾನೆ. ಹಲ್ಲೆ ಮಾಡಿದ್ದಲ್ಲದೆ ಕೊಲೆ ಬೆದರಿಕೆ ಹಾಕಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ