5 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ ಮುರುಳಿ, ಕೃತಿಕಾ
ಚಿಕ್ಕ ತಿರುಪತಿಗೆ ಹೋಗಿ ಮದುವೆಯಾಗಿದ್ದ ಯುವಪ್ರೇಮಿ
ಮದುವೆ ಬಳಿಕ ಯುವತಿ ಕುಟುಂಬಸ್ಥರಿಂದ ಕೊಲೆ ಬೆದರಿಕೆ
ಬೆಂಗಳೂರು: ಪ್ರೀತಿಸಿ ಮದುವೆಯಾಗೋದಕ್ಕಿಂತ ಆಮೇಲೆ ತಂದೆ, ತಾಯಿ, ಸಂಬಂಧಿಕರ ಪ್ರೀತಿ ಗೆಲ್ಲೋದು ನಿಜಕ್ಕೂ ಕಷ್ಟ. ಹೀಗೆ ಪೋಷಕರ ವಿರೋಧದಲ್ಲೂ ಮದುವೆಯಾಗಿದ್ದ ಯುವಕನ ಮೇಲೆ ಯುವತಿಯ ಸೋದರ ಮಾವ ಲಾಂಗ್‌ನಿಂದ ಹಲ್ಲೆ ಮಾಡಿರೋ ಘಟನೆ ವರ್ತೂರು ತಿಗಳರ ಬೀದಿಯಲ್ಲಿ ನಡೆದಿದೆ.
ಕಳೆದ ಮಾರ್ಚ್ 29ರಂದು ಮುರುಳಿ(25) ಕೃತಿಕಾ(19) ಅನ್ನೋ ಯುವಪ್ರೇಮಿಗಳು ಚಿಕ್ಕ ತಿರುಪತಿಗೆ ಹೋಗಿ ಮದುವೆಯಾಗಿದ್ದರು. ಇದಾದ ಮೇಲೆ ವರ್ತೂರಿನಲ್ಲಿ ಆರತಕ್ಷತೆ ಕೂಡ ಮಾಡಿಕೊಂಡಿದ್ರು. 5 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ ಮುರುಳಿ ಮತ್ತು ಕೃತಿಕಾ ಮದುವೆಗೆ ಕೃತಿಕಾ ಮನೆಯವರು ಒಪ್ಪಿರಲಿಲ್ಲ. ಪ್ರೀತಿಸಿದ ಹುಡುಗಿಯನ್ನ ಮದುವೆ ಆಗೋ ಬಗ್ಗೆ ಕೃತಿಕಾ ಮನೆಯಲ್ಲಿ ಮುರುಳಿ ಮಾತನಾಡಿದ್ದ. ಆದರೆ ಯುವತಿ ಮನೆಯವರು ಮದುವೆಗೆ ಒಪ್ಪಿರಲಿಲ್ಲ. ಯುವತಿ ಕುಟುಂಬಸ್ಥರ ವಿರೋಧದ ನಡುವೆಯೂ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು.
ಹೂವಿನ ವ್ಯಾಪಾರ ಮಾಡಿಕೊಂಡಿದ್ದ ಮುರುಳಿ ಮನೆಯಲ್ಲೇ ಕೃತಿಕಾ ವಾಸವಿದ್ದಳು. ಮದುವೆ ಬಳಿಕ ಯುವತಿ ಕುಟುಂಬಸ್ಥರಿಂದ ಕೊಲೆ ಬೆದರಿಕೆ ಕೇಳಿ ಬಂದಿದೆ. ಇದೆಲ್ಲಾ ಇದ್ದಿದ್ದೆ ಅಲ್ವಾ ಅಂತಾ ಮುರುಳಿ ಕೂಡ ಸುಮ್ಮನಾಗಿದ್ದ. ಈ ಬೆದರಿಕೆಯ ಆರೋಪ ಪೊಲೀಸ್ ಠಾಣೆ ಮೆಟ್ಟಿಲು ಕೂಡ ಹತ್ತಿತ್ತು. ಆಗ ಯುವತಿ ಕುಟುಂಬಸ್ಥರನ್ನು ಕರೆಸಿದ್ದ ಪೊಲೀಸರು ದಂಪತಿ ತಂಟೆಗೆ ಹೋಗದಂತೆ ಹೇಳಿ ಕಳಿಸಿದ್ದರು. ಅಂದಿನಿಂದ ಯುವತಿ ಕುಟುಂಬಸ್ಥರು ಸೈಲೆಂಟ್ ಆಗಿದ್ದರು.
ಜುಲೈ 11ರ ರಾತ್ರಿ 9.30ಕ್ಕೆ ಮುರುಳಿ ಮೇಲೆ ಲಾಂಗ್‌ನಿಂದ ಹಲ್ಲೆ ಮಾಡಲಾಗಿದೆ. ಮೂವರು ಲಾಂಗ್ ಬೀಸ್ತಿದ್ದಂತೆ ಮುರುಳಿ ಕೈ ಅಡ್ಡ ಕೊಟ್ಟು ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗಿದ್ದಾರೆ. ತಾನು ಕೆಲಸ ಮುಗಿಸಿ ತೆರಳೋ ವೇಳೆ ಕೃತಿಕಾ ಸೋದರ ಮಾವ ನಾಗರಾಜು, ಸಂಬಂಧಿ ಮಂಜುನಾಥ್ ಸೇರಿ ಮೂವರಿಂದ ಹಲ್ಲೆ ನಡೆದಿದೆ ಎನ್ನಲಾಗಿದೆ. ಈ ಘಟನೆ ಸಂಬಂಧ ಮುರುಳಿ ಪತ್ನಿ ಕೃತಿಕಾ ನೀಡಿದ ದೂರಿನ ಮೇಲೆ ವರ್ತೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆರೋಪಿ ಮಂಜುನಾಥ್‌ನನ್ನು ಬಂಧಿಸಿರುವ ವರ್ತೂರು ಪೊಲೀಸರು, ಪ್ರಮುಖ ಆರೋಪಿ ನಾಗರಾಜ್ ಪತ್ತೆಗೆ ಬಲೆ ಬೀಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ