ಟೈಟಲ್ಗೆ ತಕ್ಕನಾದ ಕನ್ನಡ ಸೀರಿಯಲ್ ಬೃಂದಾವನ
ಕೂಡು ಕುಟುಂಬದ ಸಿಹಿ-ಕಹಿ ಹೇಳೋ ಸೀರಿಯಲ್ ಇದು
ಸೂಪರ್ ಹಿಟ್ ಸೀರಿಯಲ್ಸ್ ಕೊಟ್ಟವರು ಇದರ ಡೈರೆಕ್ಟರ್!
ಬೃಂದಾವನ.. ಟೈಟಲ್ಗೆ ತಕ್ಕನಾಗಿ ಸೀರಿಯಲ್ ಅದ್ಧೂರಿಯಾಗಿದೆ. ಕೂಡು ಕುಟುಂಬದ ಸಿಹಿ-ಕಹಿ ನಲಿವನ್ನ ಬಿತ್ತರಿಸುತ್ತಿದೆ. ಸೂಪರ್ ಹಿಟ್ ಧಾರಾವಾಹಿಗಳನ್ನ ನಿರ್ಮಿಸಿ, ನಿರ್ದೇಶಿಸಿರುವ ರಾಮ್ಜಿ ಅವರ ಗರಡಿಯ ಅದ್ಭುತ ಕತೆ ಬೃಂದಾವನ.
ಸದ್ಯ ಕೂಡು ಕುಟುಂಬದ ಕಲ್ಪನೇ ಇಲ್ಲದ ಕಾಲ ಇದು. ನಾನು ನನ್ನ ಸಂಸಾರ ಅನ್ನೋರಿಗೆ ಬೃಂದಾವನ ಮನರಂಜನೆಯ ಜೊತೆಗೆ ಸಿಹಿಯಾದ ಅನುಭವ ನೀಡಲಿದೆ. ಮೊದಲ ಸಂಚಿಕೆಯಲ್ಲೇ ವೀಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶ್ವಸ್ವಿಯಾಗಿದೆ ಬೃಂದಾವನ. ಇಂತಹದ್ದೊಂದು ಕತೆ ಅವಶ್ಯಕತೆ ಇತ್ತು. ಕತೆಯ ಕಲ್ಪನೆ ಸುಂದರವಾಗಿದೆ ಅಂತೆಲ್ಲಾ ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೂ ಬೃಂದಾವನ ಇಂಟ್ರಡ್ಯೂಸ್ ಮಾಡಿದ್ದು ನಟ ಲವ್ಲಿ ಸ್ಟಾರ್ ಪ್ರೇಮ್. ಕೂಡು ಕುಟುಂಬನ ವೀಕ್ಷಕರಿಗೆ ವಿಭಿನ್ನ ರೀತಿಯಲ್ಲಿ ಪರಿಚಯಿಸಿ ಕೊಟ್ಟರು.
ಇನ್ನೂ ಬೃಂದಾವನದ ನಾಯಕಿ ಯಾರು ಎಂಬುದನ್ನ ಸಸ್ಪೆನ್ಸ್ ಆಗಿಯೇ ಇಟ್ಟಿದ್ದ ತಂಡ, ಮೊದಲ ಸಂಚಿಕೆಯಲ್ಲಿ ರಿವೀಲ್ ಮಾಡಿದೆ. ನಾಯಕಿ ಪುಷ್ಪ ಪಾತ್ರ ಮಾಡ್ತಿರೋದು ದಾಸಪುರಂದ ಧಾರಾವಾಹಿಯಲ್ಲಿ ನಟಿಸಿದ್ದ ಅಮೂಲ್ಯ ಭಾರದ್ವಾಜ್ ಬೃಂದಾವನದ ಸೊಸೆಯಾಗಿ ಬರ್ತಿದ್ದಾರೆ.
ಕನ್ನಡತಿಯನ್ನ ನೆನಪಿಸುವಂತಿರೋ ಸುಧಾಮೂರ್ತಿ ಪಾತ್ರ. ಅನಾರೋಗ್ಯಕ್ಕೆ ತುತ್ತಾಗುವ ಅಜ್ಜಿಗೆ ಮೊಮ್ಮಗನ ಮದುವೆ ನೋಡಬೇಕೆನ್ನುವ ಆಸೆ. ಅಜ್ಜಿ ಆಸೆ ಈಡೇರಿಸಲು ಸದಾ ತುಡಿಯುವ ಕುಟುಂಬ. ಪ್ರತಿ ಸಂಸಾರದ ದೈನ್ಯಂದಿನ ಸರಳ ಸುಂದರ ಕತೆ ಹೇಳುವಂತಿದೆ ಸೀರಿಯಲ್ನ ಎಳೆ.
ಇನ್ನೂ ಮೊಮ್ಮಗ ಆಕಾಶ್ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುತ್ತಾನೆ. ಬೃಂದಾವನದ ಮುದ್ದಿನ ಮಗ. ಅಜ್ಜಿ ಅಂದ್ರೆ ಪ್ರಾಣ ಆಕಾಶ್ಗೆ. ಅವಳಿಗಾಗಿ ಏನ್ ಬೇಕಾದ್ರು ಮಾಡಲು ಸಿದ್ಧ. ಅಜ್ಜಿ ಖುಷಿಗೆ 22ನೇ ವರ್ಷಕ್ಕೆ ಮದುವೆ ಆಗಲು ಸಜ್ಜಾಗಿದ್ದಾನೆ ಆಕಾಶ್. ಹುಡುಗಿನೂ ಸಿಕ್ಕಿದ್ದು, ಆಕಾಶನ ಮದುವೆ ಸಂಭ್ರಮಕ್ಕೆ ರೆಡಿಯಾಗ್ತಿದೆ ಕುಟುಂಬ.
ಮದುವೆ ಅಂದ್ಮೇಲೆ ನೂರೆಂಟು ವಿಘ್ನಗಳು, ಮನಸ್ತಾಪ ಸಹಜ. ನಾಯಕಿ ಕುಟುಂಬದಲ್ಲಿ ಅಣ್ಣ-ಅತ್ತಿಗೆನೇ ಎಲ್ಲಾ. ಆದ್ರೇ ಅತ್ತಿಗೆಗೆ ನಾದಿನಿ ಪುಷ್ಪಾ ಕಂಡ್ರೆ ಅಸಡ್ಡೆ. ದ್ವೇಷ-ಜಗಳದ ಸದ್ದೇ ಇಲ್ಲದ ಕೂಡು ಕುಟುಂಬ ಬೃಂದಾವನ. ಈ ಎರಡು ವೈರುದ್ಯವಿರುವ ಕುಟುಂಬಗಳು ಹೇಗೆ ಸಂಬಂಧ ಬೆಳಸ್ತಾರೆ? ವಿಘ್ನಗಳನ್ನೆಲ್ಲ ಮೀರಿ ಮೊಮ್ಮಗನ ಮದುವೆ ಮಾಡ್ತಾರ ಸುಧಾಮೂರ್ತಿ ಅನ್ನೋದು ಬೃಂದಾವನದ ಸದ್ಯದ ಸಾರಾಂಶ.
ಒಟ್ನಲ್ಲಿ ನೂರಾರು ಕಲಾವಿದರು, ತಂತ್ರಜ್ಞರು ಕೆಲಸ ಮಾಡ್ತಿರೋ ಬೃಂದಾವನ ಹೈ ಬಜೆಟ್ನಲ್ಲಿ ನಿರ್ಮಾಣ ಆಗ್ತಿರೋ ಕೆಲವೇ ಕೆಲವು ಸೀರಿಯಲ್ಗಳಲ್ಲಿ ಒಂದು. ಅಷ್ಟೇ ದೊಡ್ಡಮಟ್ಟದಲ್ಲಿ ಯಶಸ್ವಿಯಾಗಲಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ