ನೀನೊಬ್ಬನೇ ಸೋತಿಲ್ಲ.. ಈ ಬಾರಿ ಅನೇಕರನ್ನ ಜನ ಕೈ ಹಿಡಿಯಲಿಲ್ಲ
ಒಗ್ಗಟ್ಟಿನಲ್ಲಿ ಹೋದ್ರೆ ಮಾತ್ರ ನಾವು ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯ
ನಿನ್ನ ಬಹಿರಂಗ ಹೇಳಿಕೆಯಿಂದ ನಾಳೆ ನನಗೂ ಕೇಳುವವರು ಇರುತ್ತಾರೆ
ಬೆಂಗಳೂರು: ವಿಧಾನಸಭಾ ಚುನಾವಣೆ ಬಳಿಕ ರಾಜ್ಯ ಬಿಜೆಪಿಯಲ್ಲಿ ಸೋಲಿಗೆ ಕಾರಣ ಹುಡುಕೋ ಕೆಲಸ ಆಗಬೇಕಿತ್ತು. ಆದರೆ ಹೀನಾಯ ಸೋಲಿಗೆ ಹೊಣೆಗಾರರು ಯಾರು ಅನ್ನೋದ್ರ ಬಗ್ಗೆ ಹೆಚ್ಚು ಚರ್ಚೆ ಆಗ್ತಿದೆ. ಬಿಜೆಪಿಯ ಘಟಾನುಘಟಿ ನಾಯಕರೇ ಬಹಿರಂಗ ಹೇಳಿಕೆ ಕೊಟ್ಟು ಪಕ್ಷವನ್ನೇ ಮುಜುಗರಕ್ಕೀಡು ಮಾಡಿದ್ದಾರೆ. ಈ ರೀತಿ ರೆಬೆಲ್ ಆದವರಲ್ಲಿ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಮುಂದಿನ ಸಾಲಿನಲ್ಲಿ ನಿಂತಿದ್ದರು. ರೇಣುಕಾಚಾರ್ಯ ಕೊಟ್ಟ ಹೇಳಿಕೆಗಳು ಅಲ್ಲೋಲ, ಕಲ್ಲೋಲವನ್ನೇ ಸೃಷ್ಟಿಸಿತ್ತು.
ರೆಬೆಲ್ ರೇಣುಕಾಚಾರ್ಯ ಅವರು ಆಕ್ರೋಶದಲ್ಲಿ ಬಹಿರಂಗ ಹೇಳಿಕೆ ಕೊಟ್ಟಿದ್ದು ಸ್ವಪಕ್ಷದವರ ವಿರೋಧಕ್ಕೆ ಕಾರಣವಾಗಿತ್ತು. ಬಹಿರಂಗ ಹೇಳಿಕೆಗಳಿಂದ ರೇಣುಕಾಚಾರ್ಯ ಮೇಲೆ ಪಕ್ಷದ ನಾಯಕರು ಕೆಂಗಣ್ಣು ಬೀರಿದ್ದರು. ಈ ಹಿನ್ನೆಲೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ರೇಣುಕಾಚಾರ್ಯರನ್ನೇ ತಮ್ಮ ಮನೆಗೆ ಕರೆದು ಬುದ್ಧಿವಾದ ಹೇಳಿದ್ದಾರೆ. ತಮ್ಮ ಮಾನಸ ಪುತ್ರ ಎಂದೇ ಕರೆಸಿಕೊಳ್ಳುವ ಶಿಷ್ಯ ರೇಣುಕಾಚಾರ್ಯಗೆ ಗುರು ಪಾಠ ಮಾಡಿದ್ದಾರೆ. ಮತ್ತೆ ಎಲ್ಲೂ ಬಹಿರಂಗ ಹೇಳಿಕೆ ನೀಡಿದಂತೆ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ ಎನ್ನಲಾಗಿದೆ.
ಶಿಷ್ಯನಿಗೆ ಗುರುವಿನ 10 ಪಾಠ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ