newsfirstkannada.com

WATCH: ಬಿಜೆಪಿ ಪ್ರತಿಭಟನೆಯಿಂದ ಕಾಂಗ್ರೆಸ್‌ಗೆ ಡಬಲ್ ಲಾಭ.. ಡಿಸಿಎಂ ಡಿ.ಕೆ ಶಿವಕುಮಾರ್ ಯಾಕ್ ಹಿಂಗೆ ಹೇಳಿದ್ರು?

Share :

04-07-2023

    ಸದನದ ಒಳಗೂ, ಹೊರಗೂ ಹೋರಾಟ ಮಾಡೋದು ಒಳ್ಳೆಯದು

    ರಾಜ್ಯದ ಜನ ರೆಸ್ಟ್ ಮಾಡಲಿ ಅಂತಾ ಬಿಟ್ಟಿದ್ದಾರೆ ಅವರು ರೆಸ್ಟ್ ಮಾಡ್ಲಿ

    BS ಯಡಿಯೂರಪ್ಪನವರಿಗೆ ಒಳ್ಳೆಯದಾಗಲಿ ಎಂದ ಡಿ.ಕೆ ಶಿವಕುಮಾರ್

ರಾಜ್ಯ ಸರ್ಕಾರದ ವಿರುದ್ಧ ಸದನದ ಒಳಗೂ, ಹೊರಗೂ ಹೋರಾಟ ನಡೆಸುತ್ತಿರುವ ಬಿಜೆಪಿ ನಾಯಕರಿಗೆ ಡಿಸಿಎಂ ಡಿಕೆ ಶಿವಕುಮಾರ್ ಸಖತ್ ಟಾಂಗ್ ಕೊಟ್ಟಿದ್ದಾರೆ. ಎರಡೂ ಕಡೆಯೂ ಅವ್ರು ಪ್ರತಿಭಟನೆ ಮಾಡೋದು ಬಹಳ ಒಳ್ಳೆಯದು. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಕಾರ್ಯಕ್ರಮಗಳನ್ನ ಯಡಿಯೂರಪ್ಪ ಪ್ರಚಾರ ಮಾಡ್ತಿದ್ದಾರೆ. ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪನವರಿಗೆ ಒಳ್ಳೆಯದಾಗಲಿ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಬಿಜೆಪಿ ನಾಯಕರ ಪ್ರತಿಭಟನೆಗೆ ಉತ್ತರಿಸಿದ ಡಿ.ಕೆ ಶಿವಕುಮಾರ್ ಅವರು ಅವರಿಗೆ ಶುಭವಾಗಲಿ. ನಮ್ಮ ಸರ್ಕಾರದ ಆಚಾರ, ವಿಚಾರವನ್ನ ಅವರು ಪ್ರಚಾರ ಮಾಡ್ತಿದ್ದಾರೆ. ಅವರು ಏನೇ ಮಾಡಿದ್ರೂ ನಮ್ಮಿಂದ ಯಾವ ಲೋಪ ಕೂಡ ಆಗೋದಿಲ್ಲ. ನಾವು ಜನರಿಗೆ ಏನ್ ಮಾತು ಕೊಟ್ಟಿದ್ದೇವೆ ಆ ಮಾತನ್ನ ಉಳಿಸಿಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಸರ್ಕಾರದ ವಿರುದ್ಧ ಧರಣಿ ಕೂತಿರುವ ಬಿ.ಎಸ್ ಯಡಿಯೂರಪ್ಪನವರಿಗೆ ವಿಶೇಷವಾಗಿ ಶುಭ ಕೋರಿರುವ ಡಿಕೆ ಶಿವಕುಮಾರ್, ನಾವು ಏನಾದರೂ ತಪ್ಪು ಮಾಡಿದ್ರೆ ತಿದ್ದಿಕೊಳ್ಳುತ್ತೇವೆ. ಜನ ರೆಸ್ಟ್ ಮಾಡಲಿ ಅಂತಾ ಬಿಟ್ಟಿದ್ದಾರೆ ಅವರು ರೆಸ್ಟ್ ಮಾಡ್ಲಿ. ಕಾಂಗ್ರೆಸ್ ಕಾರ್ಯಕ್ರಮಗಳನ್ನ ಯಡಿಯೂರಪ್ಪ ಪ್ರಚಾರ ಮಾಡ್ತಿದಾರೆ. ಹಾಗಾಗಿ ಬಿಜೆಪಿಯವರಿಗೆ ಒಳ್ಳೆದಾಗಲಿ, ಶುಭವಾಗಲಿ ಎಂದಿದ್ದಾರೆ.

ಇದೇ ವೇಳೆ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಅವರ ಲಂಚದ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್ ಅವರು ಯಾವ ಲಂಚ ಇಲ್ಲ, ಏನೂ ಇಲ್ಲ. ಅವರಿಗೆ ಚುನಾವಣೆಯಲ್ಲಿ ನಂಬರ್ ಕಡಿಮೆ ಬಂದಿದೆ ಎಂದು ಬೇಜಾರಲ್ಲಿ ಇದ್ದಾರೆ. ದಾಖಲೆಗಳಿದ್ದರೆ ಕುಮಾರಸ್ವಾಮಿ ಅವರು ಲೋಕಾಯುಕ್ತಕ್ಕೆ ದೂರು ನೀಡಲಿ ಎಂದು ಸವಾಲು ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

WATCH: ಬಿಜೆಪಿ ಪ್ರತಿಭಟನೆಯಿಂದ ಕಾಂಗ್ರೆಸ್‌ಗೆ ಡಬಲ್ ಲಾಭ.. ಡಿಸಿಎಂ ಡಿ.ಕೆ ಶಿವಕುಮಾರ್ ಯಾಕ್ ಹಿಂಗೆ ಹೇಳಿದ್ರು?

https://newsfirstlive.com/wp-content/uploads/2023/07/Dk-Shivakumar-4.jpg

Load More