newsfirstkannada.com

ಬಿಜೆಪಿಯಲ್ಲಿ ಬಂಡಾಯದ ಬಿರುಗಾಳಿ; ಬಿಎಸ್​ವೈ ಜತೆ ಅಮಿತ್​​ ಶಾ, ಜೆಪಿ ನಡ್ಡಾ ಮಹತ್ವದ ಮೀಟಿಂಗ್​​!

Share :

02-07-2023

    ಚುನಾವಣೆ ಬಳಿಕ ರಾಜ್ಯ ಬಿಜೆಪಿಯಲ್ಲಿ ಬಂಡಾಯದ ಬಿರುಗಾಳಿ

    ರಾಜ್ಯ ಬಿಜೆಪಿ ನಾಯಕರಿಂದ ದಿನಕ್ಕೊಂದು ಹೇಳಿಕೆ, ಬೀದಿ ಕಾಳಗ!

    BS ಯಡಿಯೂರಪ್ಪ ಜತೆ ಕೇಂದ್ರ ನಾಯಕರು ಮಹತ್ವದ ಮೀಟಿಂಗ್​​

ದೆಹಲಿ: ರಾಜ್ಯ ಬಿಜೆಪಿಯಲ್ಲಿ ಆಂತರಿಕ ಬಂಡಾಯ ಭುಗಿಲೆದ್ದ ಬೆನ್ನಲ್ಲೇ ಮಾಜಿ ಸಿಎಂ ಬಿ.ಎಸ್​​ ಯಡಿಯೂರಪ್ಪ ಅವರನ್ನು ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್​ ಶಾ ದೆಹಲಿಗೆ ಕರೆಸಿಕೊಂಡಿದ್ದಾರೆ. ಈ ಸಂಬಂಧ ಮಾತಾಡಿದ ಬಿ.ಎಸ್​​ ಯಡಿಯೂರಪ್ಪ, ನನ್ನನ್ನು ಜೆಪಿ ನಡ್ಡಾ ಬರಲು ಹೇಳಿದ್ದಾರೆ. ಇಂದು ಸಂಜೆ ನಡ್ಡಾ, ಅಮಿತ್​ ಶಾ ಇಬ್ಬರನ್ನು ಭೇಟಿ ಮಾಡುತ್ತಿದ್ದೇನೆ ಎಂದರು.

ರಾತ್ರಿ 8 ಗಂಟೆಗೆ ಅಮಿತ್​​ ಶಾ, ನಡ್ಡಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದೇನೆ. ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲಿದ್ದೇನೆ. ವಿರೋಧ ಪಕ್ಷದ ನಾಯಕ ಸೇರಿದಂತೆ ಹಲವು ವಿಚಾರಗಳನ್ನು ನನ್ನೊಂದಿಗೆ ಚರ್ಚೆ ಮಾಡುವ ಸಾಧ್ಯತೆ ಇದೆ. ಬಹುತೇಕ ಎಲ್ಲಾ ವಿಚಾರಗಳು ಇಂದು ಚರ್ಚೆ ಆಗಲಿವೆ ಎಂದರು ಬಿಎಸ್​ವೈ.

ನಮ್ಮಲ್ಲಿ ಯಾವುದೇ ಆಂತರಿಕ ಭಿನ್ನಾಭಿಪ್ರಾಯ ಇಲ್ಲ. ಯಾರು ಪಕ್ಷಕ್ಕೆ ಮುಜುಗರ ತರುವ ಹೇಳಿಕೆ ನೀಡಬಾರದು ಎಂದು ಸೂಚನೆ ನೀಡಿದ್ದೇವೆ. ಎಲ್ಲವೂ ಸರಿ ಹೋಗಲಿದೆ. ನಾವೇ ಸರಿ ಮಾಡುತ್ತೇವೆ. ನನ್ನನ್ನು ಯಾರು ಟಾರ್ಗೆಟ್​​ ಮಾಡುತ್ತಿಲ್ಲ. ನನಗೆ ಎಲ್ಲಾ ರೀತಿಯ ಗೌರವ ಸಿಕ್ಕಿದೆ, ಸಂತೋಷವಾಗಿದ್ದೇನೆ ಎಂದು ಹೇಳಿದರು.

ರಾಘವೇಂದ್ರಗೆ ಸಿಗುತ್ತಾ ಸಚಿವ ಸ್ಥಾನ..?

ಕೇಂದ್ರದ ನಾಯಕರು ನನ್ನೊಂದಿಗೆ ಚೆನ್ನಾಗಿ ಇದ್ದಾರೆ. ನನ್ನ ಮಗ ರಾಘವೇಂದ್ರಗೆ ಸಚಿವ ಸ್ಥಾನ ನೀಡುವ ಬಗ್ಗೆ ನಾನು ಪತ್ರಿಕೆಯಲ್ಲಿ ಓದಿದ್ದೇನೆ. ನನಗೆ ಇನ್ಯಾವ ವಿಚಾರವೂ ಗೊತ್ತಿಲ್ಲ, ಈ ಬಗ್ಗೆ ಕೇಂದ್ರದ ನಾಯಕರೇ ತೀರ್ಮಾನ ಮಾಡುತ್ತಾರೆ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿಯಲ್ಲಿ ಬಂಡಾಯದ ಬಿರುಗಾಳಿ; ಬಿಎಸ್​ವೈ ಜತೆ ಅಮಿತ್​​ ಶಾ, ಜೆಪಿ ನಡ್ಡಾ ಮಹತ್ವದ ಮೀಟಿಂಗ್​​!

https://newsfirstlive.com/wp-content/uploads/2023/07/BSY.jpg

Load More