newsfirstkannada.com

ಸಿಎಂ ಸಿದ್ದರಾಮಯ್ಯಗೆ ಸವಾಲ್​​ ಎಸೆದ ಬಿಎಸ್​​ವೈ.. ಹೋರಾಟದ ಎಚ್ಚರಿಕೆ ಕೊಟ್ರು!

Share :

22-06-2023

  10 ಕೆಜಿ ಅಕ್ಕಿ ಕೊಡದಿದ್ದರೆ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ಎಚ್ಚರಿಕೆ

  ಐದು ಗ್ಯಾರಂಟಿ ಜಾರಿಗೊಳಿಸಿ, ಇಲ್ಲ ಅಧಿಕಾರಿ ಬಿಡಿ ಎಂದ ಬಿಎಸ್​​ವೈ!

  ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಎಸ್​​ ಯಡಿಯೂರಪ್ಪ ಕೆಂಡಾಮಂಡಲ

ದಾವಣಗೆರೆ: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​​ ಸರ್ಕಾರದ ವಿರುದ್ಧ ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಗುಡುಗಿದರು. ಇಂದು ನಡೆದ ದಾವಣಗೆರೆ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತಾಡಿದ ಯಡಿಯೂರಪ್ಪ ಐದು ಗ್ಯಾರಂಟಿಗಳನ್ನು ಜಾರಿ ಮಾಡಿ, ಇಲ್ಲವೇ ಅಧಿಕಾರ ಬಿಟ್ಟು ತೊಲಗಿ ಎಂದು ಕೆಂಡಕಾರಿದರು.

ಸಿಎಂ ಸಿದ್ದರಾಮಯ್ಯ ಅವರೇ ಭರವಸೆ ನೀಡಿದಂತೆ 10 ಕೆಜಿ ಅಕ್ಕಿ ಕೊಡಿ. ಚುನಾವಣೆ ಸಂದರ್ಭದಲ್ಲಿ ಮನೆ ಮನೆಗೆ ಗ್ಯಾರಂಟಿ ಕಾರ್ಡ್​ಗಳನ್ನು ಹಂಚಿದ್ದೀರಿ. ಹೀಗಾಗಿ ನಿಮಗೆ ಸಾಕಷ್ಟು ಸಂಖ್ಯೆಯಲ್ಲಿ ಜನ ವೋಟ್​ ಮಾಡಿದರು. ಇದರ ಪರಿಣಾಮ ನಿರೀಕ್ಷೆಗೂ ಮೀರಿ ಗೆದ್ದಿದ್ದೀರಿ. ರಾಜ್ಯದಲ್ಲಿ ಅಧಿಕಾರವೂ ಹಿಡಿದಿದ್ದೀರಿ. ಕೊಟ್ಟ ಮಾತಿನಂತೆ ಯಾವುದೇ ಕಂಡೀಷನ್​ ಹಾಕದೆ ಗ್ಯಾರಂಟಿ ಜಾರಿಗೊಳಿಸಿ ಎಂದು ಬಿಎಸ್​​ವೈ ಸವಾಲ್​ ಹಾಕಿದರು.

ಜುಲೈ 4ರಂದು ರಾಜ್ಯಪಾಲರ ಭಾಷಣ ಇದೆ. ರಾಜ್ಯಪಾಲರ ಭಾಷಣದ ಬಳಿಕ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ಮಾಡುತ್ತೇವೆ. ಅಧಿವೇಶನ ಮುಗಿಯುವ ತನಕ ಗಾಂಧಿ ಪ್ರತಿಮೆ ಮುಂದೆ ಹೋರಾಟ ಮುಂದುವರಿಯಲಿದೆ. ಇದಕ್ಕೆ ನಮ್ಮ ಎಲ್ಲಾ ಶಾಸಕರ ಸಾಥ್​ ಬೇಕು ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಎಂ ಸಿದ್ದರಾಮಯ್ಯಗೆ ಸವಾಲ್​​ ಎಸೆದ ಬಿಎಸ್​​ವೈ.. ಹೋರಾಟದ ಎಚ್ಚರಿಕೆ ಕೊಟ್ರು!

https://newsfirstlive.com/wp-content/uploads/2023/06/BS-Yediyurappa-3.jpg

Load More