newsfirstkannada.com

ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ; ದೇಶದಲ್ಲೇ ದೊಡ್ಡ ಬೆಂಚ್​​​ ಮಾರ್ಕ್​ ಎಂದ ಸಚಿವ ಎಂಬಿ ಪಾಟೀಲ್​​

Share :

Published June 20, 2024 at 9:10pm

Update June 20, 2024 at 9:15pm

    ಬಹುನಿರೀಕ್ಷಿತ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ

    ಸರ್ಕಾರದ ಜೊತೆ ಕೈ ಜೋಡಿಸಿದ EIB ಮತ್ತು KfW ಬ್ಯಾಂಕ್​​ಗಳು

    ಇಂದು ಸಚಿವ ಎಂ.ಬಿ ಪಾಟೀಲರ ನೇತೃತ್ವದಲ್ಲಿ ಮಹತ್ವದ ಸಭೆ

ಬೆಂಗಳೂರು: ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ ಕೆಲಸಗಳು ಶರವೇಗದಲ್ಲಿ ಸಾಗುತ್ತಿವೆ. ಯೋಜನೆಗೆ ಅಗತ್ಯವಿರುವಷ್ಟು ಅನುದಾನ ನೀಡಲು ವಿಶ್ವದ ಅತಿದೊಡ್ಡ ಬಹುಪಕ್ಷೀಯ ಹಣಕಾಸು ಸಂಸ್ಥೆ ಯುರೋಪಿಯನ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ (EIB) ಒಪ್ಪಿಗೆ ನೀಡಿದೆ. ಇದರ ಜೊತೆಗೆ ಮತ್ತೊಂದು ಪ್ರಮುಖ ಸಾಲದಾತ ಬ್ಯಾಂಕ್ ಆಗಿರೋ ಜರ್ಮನಿಯ KfW ಡೆವಲಪ್‌ಮೆಂಟ್ ಬ್ಯಾಂಕ್ ಕೂಡ ಸಾಲ ಒಪ್ಪಂದಕ್ಕೆ ಸಹಿ ಹಾಕಿದೆ. ಇದರ ಭಾಗವಾಗಿ ಎರಡು ಬ್ಯಾಂಕ್​ಗಳ ಫಂಡಿಂಗ್​ ಏಜೆನ್ಸಿಗಳು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ದಿ ಸಚಿವರಾದ ಎಂ.ಬಿ ಪಾಟೀಲ ಅವರೊಂದಿಗೆ ಸಭೆ ನಡೆಸಿವೆ.

ಇನ್ನು, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ದಿ ಸಚಿವರಾದ ಎಂ.ಬಿ ಪಾಟೀಲ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಯೋಜನೆ ಬಗ್ಗೆ ಕೂಲಂಕಷವಾಗಿ ಚರ್ಚಿಸಲಾಗಿದೆ. ನಿಗದಿತ ಸಮಯದೊಳಗೆ ಯೋಜನೆ ಮುಗಿಸಲು ಅಗತ್ಯವಿರೋ ಸಹಾಯ ಮಾಡುವುದಾಗಿ ಯುರೋಪಿಯನ್ ಒಕ್ಕೂಟದ ಹೂಡಿಕೆ ಬ್ಯಾಂಕ್ ಮತ್ತು ಜರ್ಮನಿಯ KfW ಡೆವಲಪ್‌ಮೆಂಟ್ ಬ್ಯಾಂಕ್ ಫಂಡಿಂಗ್​ ಏಜೆನ್ಸಿಗಳು ಭರವಸೆ ನೀಡಿವೆ ಎಂದು ತಿಳಿದು ಬಂದಿದೆ.

ಸಭೆ ಬಳಿಕ ಮಾತಾಡಿದ ಸಚಿವ ಎಂ.ಬಿ ಪಾಟೀಲ್​ ಅವರು, ಇದು 148 ಕಿಲೋ ಮೀಟರ್​​ಗಳ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಯಾಗಿದೆ. ಇದು ಭಾರತದಲ್ಲೇ ಪ್ರಥಮ ಯೋಜನೆ. ಕನ್ನಡಿಗರ ಹಿತಾಸಕ್ತಿಯಿಂದ ಯೋಜನೆ ಬಹಳ ಮಹತ್ವ ಪಡೆದುಕೊಂಡಿದ್ದು, ಇದು ದೇಶದಲ್ಲೇ ದೊಡ್ಡ ಬೆಂಚ್​​ ಮಾರ್ಕ್​ ಸೆಟ್​ ಮಾಡಲಿದೆ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ; ದೇಶದಲ್ಲೇ ದೊಡ್ಡ ಬೆಂಚ್​​​ ಮಾರ್ಕ್​ ಎಂದ ಸಚಿವ ಎಂಬಿ ಪಾಟೀಲ್​​

https://newsfirstlive.com/wp-content/uploads/2024/06/MB-Patil.jpg

Load More