newsfirstkannada.com

Btech ವಿದ್ಯಾರ್ಥಿನಿ ಸಾವಿಗೆ ಕಾರಣನಾಗಿದ್ದ ಕಳ್ಳನ ಎನ್​ಕೌಂಟರ್ ಮಾಡಿ ಬೀಸಾಡಿದ ಪೊಲೀಸರು..!

Share :

30-10-2023

    ಮೊಬೈಲ್ ಕಳ್ಳನ ಎನ್​​ಕೌಂಟರ್ ಮಾಡಿದ ಪೊಲೀಸ್

    ಜೀತೇಂದ್ರ ಅಲಿಯಾಸ್ ಜೀತು ಎಂಬಾತನ ಎನ್​ಕೌಂಟರ್

    19 ವರ್ಷ ವಿದ್ಯಾರ್ಥಿನಿಯ ಸಾವಿಗೆ ಕಾರಣನಾಗಿದ್ದ ಕಿರಾತಕ

19 ವರ್ಷದ ವಿದ್ಯಾರ್ಥಿನಿ ಸಾವನ್ನಪ್ಪಿರುವ ಪ್ರಕರಣದಲ್ಲಿ 28 ವರ್ಷದ ಕ್ರಿಮಿನಲ್​​​ ಹಿನ್ನೆಲೆಯುಳ್ಳ ವ್ಯಕ್ತಿಯನ್ನು ಪೊಲೀಸರು ಎನ್​​ಕೌಂಟರ್ ಮಾಡಿ ಬೀಸಾಡಿದ್ದಾರೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ.. ಜೀತೇಂದ್ರ ಅಲಿಯಾಸ್ ಜೀತು ಎಂಬಾತನನ್ನು ಎನ್​ಕೌಂಟರ್ ಮಾಡಲಾಗಿದೆ.

ಈತ ಘಾಜಿಯಾಬಾದ್​​​ನ ಮಸೂರಿ ಪ್ರದೇಶದ ಮಿಶಲ್ ಗರ್ರಿಯ ನಿವಾಸಿಯಾಗಿದ್ದ. ನಿನ್ನೆ ಬೆಳಗ್ಗೆ ಎನ್​​ಕೌಂಟರ್ ಆಗಿದ್ದಾನೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ. ಎಬಿಇಎಸ್​​ ಕಾಲೇಜಿನ ಬಿಟೆಕ್ ವಿದ್ಯಾರ್ಥಿನಿ ಕೀರ್ತಿ, ಕಳೆದ ಶುಕ್ರವಾರ ತನ್ನ ಸ್ನೇಹಿತೆ ದಿಕ್ಷಾ ಜಿಂದಲ್ ಜೊತೆ ಆಟೋ ಮೂಲಕ ಮನೆಗೆ ಹೋಗುತ್ತಿದ್ದರು. ಈ ವೇಳೆ ಕಳ್ಳರು ಕೀರ್ತಿಯ ಫೋನ್ ಕದಿಯಲು ಯತ್ನಿಸಿದಾಗ ಆಕೆ ಆಟೋದಿಂದ ಬಿದ್ದು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಳು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಸೆರೆ ಹಿಡಿಯಲು ಪ್ಲಾನ್ ಮಾಡಿದ್ದರು. ಅಂತೆಯೇ ಏರಿಯಾ ಒಂದರಲ್ಲಿ ಬೈಕ್​ನಲ್ಲಿ ಹೋಗ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ನೋಡಿದ್ದಾರೆ. ಅನುಮಾನಗೊಂಡ ಪೊಲೀಸರು ಬೈಕ್ ನಿಲ್ಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಕ್ಯಾರೇ ಎನ್ನದ ಆರೋಪಿಗಳು, ಪರಾರಿಯಾಗಲು ಮುಂದಾಗಿದ್ದಾರೆ. ಆಗ ಪೊಲೀಸರು ಆರೋಪಿಗಳನ್ನು ಹಿಡಿಯಲು ಯತ್ನಿಸಿದಾಗ ಹಲ್ಲೆಗೆ ಮುಂದಾಗಿದ್ದರು. ಪೊಲೀಸರು ಜೀವ ಉಳಿಸಿಕೊಂಡು ಆರೋಪಿಗಳ ಬಂಧನಕ್ಕೆ ಯತ್ನಿಸಿದ್ದ ವೇಳೆ, ಓರ್ವ ಕಳ್ಳನಿಗೆ ಗುಂಡೇಟು ಬಿದ್ದಿತ್ತು. ಇನ್ನಿಬ್ಬರು ಅಲ್ಲಿಂದ ಎಸ್ಕೇಪ್ ಆಗಲು ಯಶಸ್ವಿಯಾಗಿದ್ದರು. ಗಾಯಗೊಂಡ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Btech ವಿದ್ಯಾರ್ಥಿನಿ ಸಾವಿಗೆ ಕಾರಣನಾಗಿದ್ದ ಕಳ್ಳನ ಎನ್​ಕೌಂಟರ್ ಮಾಡಿ ಬೀಸಾಡಿದ ಪೊಲೀಸರು..!

https://newsfirstlive.com/wp-content/uploads/2023/10/Student.jpg

Load More