ಬಿಜೆಪಿ ಮುಖಂಡ ಬಿಟಿಎಸ್ ನಾಗರಾಜ್ನಿಂದ ಭೀಕರ ಕೃತ್ಯ
ತನ್ನ ಶಿಷ್ಯ ಬಾಬು ಎಂಬುವವರಿಗೆ ಬಟನ್ ಚಾಕುವಿನಿಂದ ಇರಿತ
ಬಿಟಿಎಸ್ ನಾಗರಾಜ್ ಹುಡುಕಾಟಕ್ಕೆ ಅಖಾಡಕ್ಕಿಳಿದ ಖಾಕಿ ಪಡೆ
ಬೆಂಗಳೂರು: ಬಿನ್ನಿಪೇಟೆ ವಾರ್ಡ್ನ ಬಿಜೆಪಿ ಮಾಜಿ ಕಾರ್ಪೊರೇಟರ್ ತನ್ನ ಶಿಷ್ಯನಿಗೆ ಚಾಕುವಿನಿಂದ ಇರಿದಿರೋ ದಾರುಣ ಘಟನೆ ಬಸವೇಶ್ವರನಗರದ ಸಾರಾ ಗೋವಿಂದು ಒಡೆತನದ ಫ್ರೆಂಡ್ಸ್ ಕ್ಲಬ್ನಲ್ಲಿ ನಡೆದಿದೆ. ಬಾಬು (45) ಹಲ್ಲೆಗೊಳಗಾದ ವ್ಯಕ್ತಿ.
ಬಿಜೆಪಿ ಮುಖಂಡ ಬಿಟಿಎಸ್ ನಾಗರಾಜ್ ಎಂಬುವವರು ಈ ಕೃತ್ಯ ಎಸಗಿದ್ದಾರೆ. ತನ್ನ ಶಿಷ್ಯ ಬಾಬು ಎಂಬುವವರಿಗೆ ಬಟನ್ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದಾನೆ. ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಕೆ ಸಿ ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಚಿಕಿತ್ಸೆ ಪಡೆದುಕೊಂಡು ಬಾಬು ವಾಪಸ್ ಆಗಿದ್ದಾರೆ. ಇದೇ ಬಾಬು, ಬಿಜೆಪಿ ಮುಖಂಡ ಬಿಟಿಎಸ್ ನಾಗರಾಜುವಿನ ಎಲ್ಲಾ ವ್ಯವಹಾರಗಳನ್ನ ನೋಡಿಕೊಳ್ಳುತ್ತಿದ್ದನಂತೆ.
ಸದ್ಯ ಹಲ್ಲೆ ಮಾಡಿ ಎಸ್ಕೇಪ್ ಆದ ಬಿಟಿಎಸ್ ನಾಗರಾಜು ಮೇಲೆ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಆರೋಪಿ ನಾಗರಾಜುಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಕುಟುಂಬ ಸಮೇತ ಬಿಟಿಎಸ್ ನಾಗರಾಜದ ಎಸ್ಕೇಪ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ