ಭಾರತದ ತಂಡದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸಾಧನೆ ಅಪಾರ
ಅಭ್ಯಾಸ ಮಾಡುವಾಗ ಬೆಳ್ಳಿಯ ಬ್ಯಾಟ್ ಗಿಪ್ಟ್ ನೀಡಿದ ಶ್ರೀಲಂಕನ್ ಬೌಲರ್
ಬೆಳ್ಳಿಯ ಬ್ಯಾಟ್ ಮೇಲೆ ಏನೇನು ಬರೆದಿದೆ?, ಇದಕ್ಕೆ ವಿರಾಟ್ ಏನು ಹೇಳಿದ್ರು?
ಸದ್ಯ ವಿಶ್ವ ಕ್ರಿಕೆಟ್ ಸಾಮ್ರಾಜ್ಯದಲ್ಲಿ ಭಾರತದ ತಂಡದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅಪಾರವಾದ ಸಾಧನೆ ಮಾಡಿದ್ದಾರೆ. ತಮ್ಮ ಅದ್ಭುತವಾದ ಬ್ಯಾಟಿಂಗ್ ಶೈಲಿಯಿಂದ ಕ್ರಿಡಾಂಗಾಣದಲ್ಲಿ ಚಿತ್ತಾರ ಮೂಡಿಸಿ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ 76 ಶತಕಗಳನ್ನು ಸಿಡಿಸಿದ್ದಾರೆ. ಸಚಿನ್ ನಂತರದ ಅಗ್ರ ಕ್ರಮಾಂಕದಲ್ಲಿ ಸ್ಥಾನ ಪಡೆದಿದ್ದಾರೆ. ಇಂತಹ ಕ್ರಿಕೆಟ್ ವೀರನಿಗೆ ಶ್ರೀಲಂಕಾದ ನೆಟ್ ಬೌಲರ್ವೊಬ್ಬ 76 ಶತಕಗಳ ಮಾಹಿತಿ ಒಳಗೊಂಡ ಬೆಳ್ಳಿಯ ಬ್ಯಾಟ್ ಗಿಫ್ಟ್ ಮಾಡಿದ್ದಾರೆ.
ಸದ್ಯ ಶ್ರೀಲಂಕಾದಲ್ಲಿ ನಡೆಯುತ್ತಿರುವ 2023 ಏಷ್ಯಾಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಹೇಗೆಲ್ಲ ಬ್ಯಾಟ್ ಬೀಸಬೇಕು ಎಂದು ಅಭ್ಯಾಸ ಮಾಡುತ್ತಿದ್ದರು. ಈ ವೇಳೆ ಶ್ರೀಲಂಕಾದ ನೆಟ್ ಬೌಲರ್ ಆದ ಚಂದ್ರಮೋಹನ್ ಕ್ರಿಶಾಂತ್ ಅವರು ಕಿಂಗ್ ಕೊಹ್ಲಿಗೆ ಬೆಳ್ಳಿಯ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನು ಸಂತಸದಿಂದ ಸ್ವೀಕಾರ ಮಾಡಿದ ವಿರಾಟ್, ನೆಟ್ ಬೌಲರ್ ಗಿಫ್ಟ್ಗೆ ಫುಲ್ ಫಿದಾ ಆಗಿದ್ದಾರೆ.
ಬೆಳ್ಳಿ ಬ್ಯಾಟ್ ನೀಡಿರುವ ಕ್ರಿಶಾಂತ್ ಹೇ ಚಾಂಪಿಯನ್ ಶೀಘ್ರದಲ್ಲೇ 100ನೇ ಸೆಂಚುರಿ ಸಿಡಿಸುತ್ತಿಯಾ ಎಂದು ನನಗೆ ಹೋಪ್ ಇದೆ. ಆಲ್ ದೀ ಬೆಸ್ಟ್ ಎಂದು ಹೇಳಿದ್ದಾರೆ. ಇದಕ್ಕೆ ರಿಪ್ಲೇ ಮಾಡಿರುವ ವಿರಾಟ್ ಕೊಹ್ಲಿ ಡೋಂಟ್ ವರೀ ಎಂದು ಹೇಳಿದ್ದಾರೆ.
Sri Lankan Net bowler Krishan gifted a silver bat to Virat Kohli.#INDvPAKpic.twitter.com/uZ1acmMozf
— Don Cricket 🏏 (@doncricket_) September 11, 2023
ನೆಟ್ ಬೌಲರ್ ಆಗಿರುವ ಚಂದ್ರಮೋಹನ್ ಕ್ರಿಶಾಂತ್ ಅವರು ವಿರಾಟ್ಗೆ ಗಿಫ್ಟ್ ಮಾಡಲೆಂದೇ ಮೊದಲೇ ನಿರ್ಧರಿಸಿ ಮೂರು ತಿಂಳಿನಿಂದ ಈ ಬೆಳ್ಳಿಯ ಬ್ಯಾಟ್ ಅನ್ನು ತಯಾರಿಸಲಾಗಿದೆಯಂತೆ. ವಿರಾಟ್ ಕೊಹ್ಲಿಯ ಬಿಗ್ ಫ್ಯಾನ್ ನಾನು. ಕೊನೆಯದಾಗಿ 2017ರಲ್ಲಿ ಮೀಟ್ ಆಗಿದ್ದೆ. ಅದಾದ ಬಳಿಕ ಇದೀಗ ಏಷ್ಯಾಕಪ್ನಲ್ಲಿ ನೆಟ್ ಬೌಲರ್ ಆಗಿ ಭೇಟಿಯಾಗಿದ್ದೇನೆ. ಕೆಲವೊಂದು ಮ್ಯಾಚ್ಗಳಲ್ಲಿ ವಿರಾಟ್ ರನ್ಗಳನ್ನ ಅದ್ಭುತವಾಗಿ ಚೇಸ್ ಮಾಡಿದ್ದಾರೆ. ಹೀಗಾಗಿ ಅವರ ಬ್ಯಾಟಿಂಗ್ ಸಾಧನೆಯ ಪ್ರಶಂಸೆ ವ್ಯಕ್ತಪಡಿಸಲು ಹಾಗೂ ಅವರ ಕ್ರಿಕೆಟ್ ಉತ್ಸಾಹ ಇನ್ನಷ್ಟು ಹೆಚ್ಚಾಗಲೆಂದು ಗಿಫ್ಟ್ ಮಾಡಿದ್ದೇನೆ ಎಂದು ಕ್ರಿಶಾಂತ್ ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ