newsfirstkannada.com

ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ಪತ್ನಿ ಎಂದು ಹಣೆಪಟ್ಟಿ ಕಟ್ಟಿಕೊಂಡ ಮಹಿಳೆ ನಿಧನ; ಇವರ ಹಿನ್ನೆಲೆ ಏನು?

Share :

19-11-2023

    ಬುಧ್ನಿ ಮೆಜಾನ್ ಜವಾಹರ್ ಲಾಲ್ ನೆಹರುರನ್ನು ಮದುವೆ ಆಗಿದ್ದೇಗೆ..?

    ಡಿಸೆಂಬರ್ 6, 1959ರಲ್ಲಿ ಪಂಟೇಲ್ ಅಣೆಕಟ್ಟು ಉದ್ಘಾಟನೆ ಮಾಡಿದ್ದರು!

    ತಾನು ಮಾಡದ ತಪ್ಪಿಗೆ 85 ವರ್ಷಗಳಿಂದ ಶಿಕ್ಷೆ ಅನುಭವಿಸುತ್ತಿದ್ದ ಮಹಿಳೆ ಇವರು

ಜಾರ್ಖಂಡ್​ನ ಪಂಚೇಟ್ ಅಣೆಕಟ್ಟನ್ನು ಉದ್ಘಾಟಿಸಿದ್ದ ಬುಡಕಟ್ಟು ಸಮುದಾಯದ ಬುಧ್ನಿ ಮೆಜಾನ್ (85) ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ಪತ್ನಿ ಎಂದು ಹಣೆಪಟ್ಟಿ ಕಟ್ಟಿಕೊಂಡು ಎಲ್ಲರಿಂದ ಶಿಕ್ಷೆಗೆ ಗುರಿಯಾಗಿದ್ದ ಬುಧ್ನಿ ಮೆಜಾನ್ ಅವರು ಬಹು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಹೀಗಾಗಿ ಅವರನ್ನು ಜಾರ್ಖಂಡ್‌ನ ನಿರ್ಸಾದ ಪಂಚೇಟ್ ಹಿಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಶುಕ್ರವಾರ ರಾತ್ರಿ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ.

ಬುಧ್ನಿ ಮೆಜಾನ್ ಅವರು ಜವಾಹರ್ ಲಾಲ್ ನೆಹರು ಮದುವೆ ಆಗಿದ್ದು ಹೇಗೆ..?

ಪಶ್ಚಿಮ ಬಂಗಾಳದ ಮೂಲದ ಬುಧ್ನಿ ಮೆಜಾನ್ ಅವರು 15 ವರ್ಷದವರಾಗಿದ್ದಾಗ, ಮಾಜಿ ಪ್ರಧಾನಿ ದಿವಂಗತ ಜವಾಹರ್ ಲಾಲ್ ನೆಹರು ಅವರ ಕೋರಿಕೆಯ ಮೇರೆಗೆ ಡಿಸೆಂಬರ್ 6, 1959ರಲ್ಲಿ ಪಂಟೇಲ್ ಅಣೆಕಟ್ಟನ್ನು ಉದ್ಘಾಟನೆ ಮಾಡಿದ್ದರು. ಈ ವೇಳೆ ನೆಹರು ಅವರು ಆಕೆಯ ಕೊರಳಿಗೆ ಹೂವಿನ ಹಾರ ಹಾಕಿ ಸನ್ಮಾನ ಮಾಡಿದ್ದರು. ಇದು ಅವರ ಬಾಳಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿತ್ತು. ಇನ್ನೂ ಬುಡಕಟ್ಟು ಸಂಪ್ರದಾಯದಲ್ಲಿ ಒಂದು ಮಹಿಳೆಗೆ ಪುರುಷ ಕೊರಳಿಗೆ ಹೂವಿನ ಹಾರ ಹಾಕುತ್ತಾರೋ ಅವರಿಗೆ ಮದುವೆ ಆಗಿದಂತೆ. ಬುಧ್ನಿ ಮೆಜಾನ್ ಅವರ ಬಾಳಲ್ಲಿ ಕೂಡ ಹೀಗೆ ಆಗಿ ಹೋಗಿದೆ. ಬುಧ್ನಿ ಮೆಜಾನ್ ಅವರ ಕೊರಳಿಗೆ ಹೂವಿನ ಹಾರ ಹಾಕಿ ಸನ್ಮಾನ ಮಾಡಿದ್ದರು. ಇದನ್ನು ನೋಡಿದ ಅಲ್ಲಿನ ಜನರು ಪಂಚಾಯಿತಿ ಸೇರಸಿ ಬುಡಕಟ್ಟು ಸಮುದಾಯ 1959ರಿಂದ ಬುಧ್ನಿ ಅವರನ್ನು ಜವಾಹರ್‌ಲಾಲ್ ನೆಹರು ಅವರ ಪತ್ನಿ ಎಂದು ಘೋಷಿಸಿತು. ಆದಿವಾಸಿಗಳಲ್ಲದ ವ್ಯಕ್ತಿಯನ್ನು ವಿವಾಹವಾಗಿದ್ದಕ್ಕೆ ಸಮುದಾಯದಿಂದಲೇ ಬುಧ್ನಿರನ್ನು ಉರಿನಿಂದ ಬಹಿಷ್ಕಾರ ಹಾಕಲಾಗಿತ್ತು. ಬುಧ್ನಿ ಮೆಜಾನ್ ಅವರು ಮಾಡದ ತಪ್ಪಿಗೆ 85 ವರ್ಷಗಳಿಂದ ಶಿಕ್ಷೆ ಅನುಭವಿಸುತ್ತಿದ್ದರು. 64 ವರ್ಷಗಳಿಂದ ಈ ಕಳಂಕದಲ್ಲಿ ಜೀವನ ನಡೆಸಿದ್ದರು.

ಬಳಿಕ ಬುಧ್ನಿ ಅವರೇ ಉದ್ಘಾಟನೆ ಮಾಡಿದ ಪಂಟೇಲ್ ಅಣೆಕಟ್ಟ ಸ್ಥಳದಲ್ಲಿ ಅವರಿಗೆ ಕೆಲಸ ಕೊಟ್ಟಿದ್ದರು. ದಿನ ಕಳೆದಂತೆ ಅಲ್ಲಿನ ಕಾರ್ಮಿಕರು ಬುಧ್ನಿ ಅವರನ್ನು ಕೆಲಸದಿಂದ ಹೊರಹಾಕಿದ್ದರು. ಇನ್ನೂ ಈ ವಿಚಾರ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಗಮನಕ್ಕೂ ತರಲಾಗಿತ್ತು. ಅಲ್ಲದೇ ತಾವು ಕೆಲಸ ಮಾಡುತ್ತಿದ್ದ ಕಂಪನಿಯಿಂದ ಹೊರಹಾಕಿದ್ದನ್ನು ತಿಳಿಸಿದ್ದರು. ಬಳಿಕ ರಾಜೀವ್ ಗಾಂಧಿ ಅವರು ಅದೇ ಕಂಪನಿಯಲ್ಲಿ ಅವರನ್ನು ವಾಪಸ್ ಕೆಲಸಕ್ಕೆ ಸೇರಿಸಿದ್ದರು. ಇದಾದ ಬಳಿಕ 85 ವರ್ಷದ ಬುಧ್ನಿ ಮೆಜಾನ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬಳಿ ಬಂದು ನಮ್ಮ ಮಗಳಿಗೆ ಉದ್ಯೋಗ ಕೊಡಿಸಬೇಕು ಎಂದು ಬೇಡಿಕೊಂಡಿದ್ದರಂತೆ ಎಂದು ವರದಿ ಮೂಲಕ ತಿಳಿದು ಬಂದಿದೆ. ಆದರೆ ಇದಾದ ಕೆಲವು ದಿನಗಳ ಬಳಿಕ ಬುಧ್ನಿ ಮೆಜಾನ್ ಅವರು ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆಗೆ ಫಲಿಸದೇ ಮೃತಪಟ್ಟಿದ್ದಾರೆ. ಸದ್ಯ ಸಿಐಎಸ್ಎಫ್ ಯೋಧರು ಬುಧ್ನಿ ಮೆಜಾನ್ ಅವರ ಪಾರ್ಥಿವ ಶರೀರಕ್ಕೆ ಪುಷ್ಪನಮನ ಮೂಲಕ ಶ್ರದ್ಧಾಂಜಲಿಯನ್ನು ಸಲ್ಲಿಸಿದರು. ಬಳಿಕ ಪಾರ್ಥಿವ ಶರೀರದ ಮೆರವಣಿಗೆ ನಡೆಸಿ, ಪಂಚೇಟ್ ಘಾಟ್​ನಲ್ಲಿ ಅಂತ್ಯಕ್ರಿಯೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ಪತ್ನಿ ಎಂದು ಹಣೆಪಟ್ಟಿ ಕಟ್ಟಿಕೊಂಡ ಮಹಿಳೆ ನಿಧನ; ಇವರ ಹಿನ್ನೆಲೆ ಏನು?

https://newsfirstlive.com/wp-content/uploads/2023/11/wife-1.jpg

Load More