newsfirstkannada.com

ಎಮ್ಮೆ ನಿನಗೆ ಸಾಟಿಯಿಲ್ಲ.. ತಲೆ ಕೆಡಿಸಿದ್ದ ಪ್ರಕರಣದ ನಿರ್ಧಾರವನ್ನು ಕೊನೆಗೆ ಎಮ್ಮೆಗೆ ಬಿಟ್ಟ ಪೊಲೀಸರು!

Share :

Published July 5, 2024 at 1:23pm

  ಇದು ಎಮ್ಮೆ ಕೇಸ್​.. ತಲೆ ಕೆಡಿಸಿಕೊಂಡಿದ್ದ ಪಂಚಾಯತ್​

  ಕೊನೆಗೆ ಪೊಲೀಸ್​​ ಠಾಣೆ ಮೆಟ್ಟಿಲೇರಿದ ಎಮ್ಮೆ ಪ್ರಕರಣ

  ಪ್ರಕರಣ ಭೇದಿಸಲು ಸಖತ್​ ಉಪಾಯ ಮಾಡಿದ ಪೊಲೀಸರು

ನಾಪತ್ತೆಯಾದ ಎಮ್ಮೆಯೊಂದನ್ನು ಮಾಲೀಕನ ಮನೆಗೆ ಸೇರಿಸಲು ಪೊಲೀಸರು ವಿಭಿನ್ನ ಪ್ರಯೋಗ ಮಾಡಿದ ಘಟನೆಯೊಂದು ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಪ್ರತಾಪಗಢದಲ್ಲಿ ಈ ಘಟನೆ ನಡೆದಿದೆ.

ಪ್ರತಾಪಗಢದ ಮಹೇಶ್​​ಗಂಜ್​ ಪೊಲೀಸ್​​​ ಠಾಣಾ ವ್ಯಾಪ್ತಿಯಲ್ಲಿ ಎಮ್ಮೆಯೊಂದು ಮಾಲೀಕನಿಂದ ತಪ್ಪಿಸಿಕೊಂಡಿತ್ತು. ನಂದಲಾಲ್​ ಎಂಬವರ ಎಮ್ಮೆ ಪುರೆ ಹರಿಕೇಶ್​ ಗ್ರಾಮಕ್ಕೆ ದಾರಿ ತಪ್ಪಿ ಹೋಗಿತ್ತು. ದಾರಿ ತಪ್ಪಿ ಬಂದ ಎಮ್ಮೆಯನ್ನ ಹನುಮಾನ್​ ಸರೋಜ್​ ಎಂಬಾತ ಹಿಡಿದಿದ್ದನು.

ಇದನ್ನೂ ಓದಿ: ಕಬಿನಿ ಭರ್ತಿಯಾಗಲು 3 ಅಡಿ ಬಾಕಿ! ಆಲಮಟ್ಟಿಗೆ ಬಂತು ನೀರೇ ನೀರೂ; ಜಲಾಶಯಗಳ ನೀರಿನ ಮಟ್ಟ ಹೀಗಿದೆ

ಪೊಲೀಸ್​ ಠಾಣೆ ಮೆಟ್ಟಿಲೇರಿದ ಪ್ರಕರಣ

ನಂದಲಾಲ್​ ತನ್ನ ಕಾಣೆಯಾದ ಎಮ್ಮೆಗಾಗಿ ಮೂರು ದಿನಗಳಿಂದ ಹುಡುಕಾಡಿದ್ದಾನೆ. ಕೊನೆಗೆ ಹನುಮಾನ್​ ಸರೋಜ್​ ಎಂಬಾತನ ಬಳಿ ತನ್ನ ಎಮ್ಮೆ ಇರುವುದನ್ನು ಪತ್ತೆಹಚ್ಚಿದ್ದಾನೆ. ಆದರೆ ಆತನ ಬಳಿ ಹೋಗಿ ಕೇಳಿದಾಗ ಎಮ್ಮೆ ತನ್ನದೆಂದು ಹೇಳಿದ್ದಲ್ಲದೆ, ಕೊಡಲು ನಿರಾಕರಿಸಿದ್ದಾನೆ. ಕೊನೆಗೆ ಈ ಪ್ರಕರಣ ಪಂಚಾಯತ್​ಗೆ ತಲುಪಿದೆ. ಆದರೆ ಪಂಚಾಯತ್​ನಲ್ಲಿ ಈ ಪ್ರಕರಣ ಭೇದಿಸಲು ಸಾಧ್ಯವಾಗದೆ ಕೊನೆಗೆ ಪೊಲೀಸ್​ ಠಾಣೆ ಮೆಟ್ಟಿಲೇರಿದೆ.

ಇದನ್ನೂ ಓದಿ: ಬತ್ತಿ ಬರಡಾಗಿದ್ದ ತುಂಗಭದ್ರೆಗೆ ಬಂತು ಜೀವಕಳೆ.. ಏರಿಕೆ ಕಂಡ ಜಲಾಶಯದ ನೀರಿನ ಮಟ್ಟ! ಇಂದು ಎಷ್ಟಿದೆ ಗೊತ್ತಾ?

ಎಂಥಾ ಉಪಾಯ!

ಮಹೇಶ್​​ಗಂಜ್​ ಪೊಲೀಸ್​​​ ಕೊನೆಗೆ ಇಬ್ಬರನ್ನು ಠಾಣೆಗೆ ಕರೆಸಿ ವಿಚಾರಿಸಿದ್ದಾರೆ. ಹಲವು ಗಂಟೆಗಳ ಕಾಲ ವಿಚಾರಿಸಿದರೂ ಇಬ್ಬರು ಎಮ್ಮೆ ತಮ್ಮದೆಂದು ಹೇಳಿಕೊಂಡಿದ್ದಾರೆ. ಕೊನೆಗೆ ಈ ಪ್ರಕರಣದಿಂದ ತಲೆಕೆಟ್ಟ ಪೊಲೀಸರು ವಿವಾದವನ್ನು ಬಗೆಹರಿಸಲು ಉಪಾಯವೊಂದನ್ನು ಮಾಡಿದ್ದಾರೆ.

ಇದನ್ನೂ ಓದಿ: ವರದಕ್ಷಿಣೆ ಕಿರುಕುಳ ಆರೋಪ, ವಿವಾಹಿತೆ ಟೆಕ್ಕಿ ಆತ್ಮಹ*.. ಆಕೆಯ ಸಾವಿಗೆ ಪತಿ, ಮೈದುನಾ ಕಾರಣರಾದ್ರಾ?

ಪೊಲೀಸರ ಉಪಾಯದಂತೆ ಮಾಲೀಕನನ್ನು ಹುಡುಕುವ ಜವಾಬ್ದಾರಿ ಎಮ್ಮೆಗೆ ಬಿಟ್ಟಿದ್ದಾರೆ. ನಂದಲಾಲ್​ ಮತ್ತು ಹನುಮಾನ್​ ಇಬ್ಬರು ತಮ್ಮ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ನಿಲ್ಲಲು ಹೇಳಿದ್ದಾರೆ. ಬಳಿಕ ಪೊಲೀಸರು ಎಮ್ಮೆಯನ್ನು ಬಿಟಗ್ಟಿದ್ದಾರೆ. ಕೊನೆಗೆ ಎಮ್ಮೆ ಮಾಲೀಕ ನಂದಲಾಲ್​ ಕಡೆ ಮುಖಮಾಡಿ ಆತನೊಂದಿಗೆ ಮನೆಯತ್ತ ಹೊರಟಿದೆ. ಅಲ್ಲಿಗೆ ಪ್ರಕರಣ ಇತ್ಯರ್ಥವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಮ್ಮೆ ನಿನಗೆ ಸಾಟಿಯಿಲ್ಲ.. ತಲೆ ಕೆಡಿಸಿದ್ದ ಪ್ರಕರಣದ ನಿರ್ಧಾರವನ್ನು ಕೊನೆಗೆ ಎಮ್ಮೆಗೆ ಬಿಟ್ಟ ಪೊಲೀಸರು!

https://newsfirstlive.com/wp-content/uploads/2024/07/Buffalo.jpg

Load More