newsfirstkannada.com

9 ಅಡಿ ಉದ್ದ, ಬರೋಬ್ಬರಿ 1,500 ಕೆಜಿ ತೂಕ; 9 ಕೋಟಿ ಬೆಲೆ ಬಾಳೋ ಈ ಕೋಣದ ಸ್ಪೆಷಾಲಿಟಿ ಏನು ಗೊತ್ತಾ?

Share :

28-06-2023

    ಉದಯಪುರ ಕಿಸಾನ್ ಕುಂಭೋತ್ಸವದಲ್ಲಿ ಯುವರಾಜನ ದರ್ಬಾರ್

    ಹರಿಯಾಣ ಮೂಲದ ಕರ್ಮವೀರ್‌ ಎಂಬ ರೈತ ಈ ಕೋಣದ ಒಡೆಯ

    ಈ ಕೋಣ ಯಾವ ತಳಿಯದ್ದು? ಯಾಕಿಷ್ಟು ಡಿಮ್ಯಾಂಡ್ ಇದೆ ಗೊತ್ತಾ?

ಉದಯಪುರ: 9 ಅಡಿ ಉದ್ದ, 6 ಅಡಿ ಎತ್ತರ, ತೂಕ ಬರೋಬ್ಬರಿ 1500 ಕೆ.ಜಿ. ಈ ಕೋಣದ ಹೆಸರು ಯುವರಾಜ್‌. ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರೋ ಕಿಸಾನ್ ಕುಂಭೋತ್ಸವದಲ್ಲಿ ಈ ಯುವರಾಜ ಎಲ್ಲರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದ್ದಾನೆ. ಅಷ್ಟೇ ಅಲ್ಲ, ಇಲ್ಲಿಗೆ ಬಂದವರು ಬರೋಬ್ಬರಿ 9 ಕೋಟಿ ರೂಪಾಯಿ ಕೊಟ್ರೂ ಈ ಕೋಣವನ್ನು ಖರೀದಿಸೋದು ಕಷ್ಟವಾಗಿದೆ.

ಕೃಷಿ ಕ್ಷೇತ್ರದ ಹೊಸ ಮತ್ತು ಆಧುನಿಕ ತಂತ್ರಜ್ಞಾನಗಳನ್ನು ರೈತರಿಗೆ ಪರಿಚಯಿಸುವ ಉದ್ದೇಶದಿಂದ ಉದಯಪುರದಲ್ಲಿ ಕಿಸಾನ್ ಕುಂಭೋತ್ಸವವನ್ನು ಆಯೋಜಿಸಲಾಗಿದೆ. ಈ ಕುಂಭೋತ್ಸವದಲ್ಲಿ ಯುವರಾಜ ಕೋಣ ಎಲ್ಲರ ಗಮನ ಸೆಳೆದಿದೆ. ರೈತರನ್ನು ತನ್ನತ್ತ ಸೆಳೆಯಲು ಯುವರಾಜ ಎಂಬ 9 ಕೋಟಿ ರೂಪಾಯಿ ಮೌಲ್ಯದ ಕೋಣವನ್ನು ಪ್ರದರ್ಶಿಸಲಾಗುತ್ತಿದೆ. ಅಧಿಕ ಸಂಖ್ಯೆಯಲ್ಲಿ ರೈತರನ್ನು ಜಾತ್ರೆಗೆ ಕರೆತರುವುದು ಹಾಗೂ ಪಶುಪಾಲನೆಯ ಬಗ್ಗೆ ಅರಿವು ಮೂಡಿಸುವುದು ಯುವರಾಜನಿಂದ ಸಾಧ್ಯವಾಗುತ್ತಿದೆ.

9 ಕೋಟಿ ಯುವರಾಜನ ಹಿನ್ನೆಲೆ ಏನು?
ಉದಯಪುರ ಕಿಸಾನ್ ಕುಂಭದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿರೋ ಯುವರಾಜ ವಿಶ್ವವಿಖ್ಯಾತಿಯಾಗಿದೆ. ಈ ಕೋಣದ ಬೆಲೆ ಬರೋಬ್ಬರಿ 9 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಯುವರಾಜ ಕೋಣ ಮುರ್ರಾ ತಳಿಯದ್ದಾಗಿದೆ. ಈ ತಳಿಯ ಕೋಣಗಳು ಮೂರು ಎಮ್ಮೆಗಳಿಗೆ ಸಮನಾಗಿರುತ್ತದೆ.

ಇದನ್ನು ಹರಿಯಾಣದ ಕರ್ಮವೀರ್‌ ಎಂಬ ರೈತ ನೋಡಿಕೊಳ್ಳುತ್ತಾರೆ. ಯುವರಾಜ್‌ನನ್ನು ಖರೀದಿಸಲು ಜನರು 9 ಕೋಟಿಗೂ ಹೆಚ್ಚಿನ ಹಣ ಕೊಡಲು ಸಿದ್ಧರಿದ್ದಾರೆ. ಆದರೆ ಯುವರಾಜ್‌ನ ಮಾಲೀಕ ಕರ್ಮವೀರ್ ಈ ಕೋಣವನ್ನು ತನ್ನ ಸ್ವಂತ ಮಗುವಿನಂತೆ ಪ್ರೀತಿಸುತ್ತೇನೆ. ಯುವರಾಜ್‌ನನ್ನು ಮಾರಾಟ ಮಾಡಲು ನಾನು ಎಂದಿಗೂ ಯೋಚಿಸುವುದಿಲ್ಲ ಎಂದು ಹೇಳುತ್ತಾರೆ. ಮುರ್ರಾ ತಳಿಯ ಈ ಕೋಣಗಳ ವೀರ್ಯಕ್ಕೆ ಸಾಕಷ್ಟು ಬೇಡಿಕೆಯಿದ್ದು, ಯುವರಾಜ್ ಕೋಣವನ್ನು ಇದಕ್ಕಾಗಿ ಬಹಳ ವರ್ಷಗಳಿಂದ ಸಾಕಿಕೊಂಡು ಬರಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

9 ಅಡಿ ಉದ್ದ, ಬರೋಬ್ಬರಿ 1,500 ಕೆಜಿ ತೂಕ; 9 ಕೋಟಿ ಬೆಲೆ ಬಾಳೋ ಈ ಕೋಣದ ಸ್ಪೆಷಾಲಿಟಿ ಏನು ಗೊತ್ತಾ?

https://newsfirstlive.com/wp-content/uploads/2023/06/buffalo-3.jpg

Load More