ಯೋಗಿ ಮಾದರಿಯಲ್ಲೇ ಖಟ್ಟರ್ ಖಡಕ್ ಆದೇಶ
ಅಕ್ರಮವಾಗಿ ನಿರ್ಮಿಸಿದ್ದ 250 ಮನೆಗಳು ನೆಲಸಮ
ಗಲಾಟೆಯಲ್ಲಿ ಒಟ್ಟು 6 ಮಂದಿ ದಾರುಣ ಸಾವು
ಹರಿಯಾಣ ಹಿಂಸಾಚಾರ ಆರೋಪ ವಿರುದ್ಧ ಬುಲ್ಡೋಜರ್ ಅಸ್ತ್ರ ಪ್ರಯೋಗ ಆಗಿದೆ. ಹಿಂಸಾಚಾರ ನಡೆದ ಘಟನಾ ಸ್ಥಳ ನುಹ್ ಪಟ್ಟಣದಿಂದ ಸುಮಾರು 20 ಕಿಲೋ ಮೀಟರ್ ದೂರದಲ್ಲಿರುವ ತೌರು ಎಂಬಲ್ಲಿ ಸರ್ಕಾರದ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಮನೆಗಳ ಮೇಲೆ ಬುಲ್ಡೋಜರ್ ಹತ್ತಿಸಲಾಗಿದೆ.
ಮುಖ್ಯಮಂತ್ರಿ ಮನೋಹರ್ ಲಾಕ್ ಖಟ್ಟರ್ ಆದೇಶದಂತೆ ಬುಲ್ಡೋಜರ್ ಅಸ್ತ್ರ ಪ್ರಯೋಗ ಮಾಡಲಾಗಿದೆ. ಅಂದು ನಡೆದ ಹಿಂಸಾಚಾರಕ್ಕೆ ಇಲ್ಲಿ ಅಕ್ರಮವಾಗಿ ನೆಲೆಸಿರುವ ಕೆಲವು ಕಿಡಿಗೇಡಿಗಳೇ ಕಾರಣ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ.
ನುಹ್ ಜಿಲ್ಲೆಯ ತೌರು ಎಂಬಲ್ಲಿ ಸರ್ಕಾರದ ಭೂಮಿಯಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದರು. ಸುಮಾರು 250ಕ್ಕೂ ಹೆಚ್ಚು ಮನೆಗಳನ್ನು ಅಕ್ರಮವಾಗಿ ವಲಸಿಗರು ಕಟ್ಟಿಕೊಂಡು ಇದ್ದಾರೆ. ಇವುಗಳ ಮೇಲೆ ಹರಿಯಾಣ ಸರ್ಕಾರ ಕ್ರಮ ತೆಗೆದುಕೊಂಡಿದೆ. ಬಿಗಿ ಪೊಲೀಸ್ ಭದ್ರತೆಯಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ.
ಇನ್ನು ಅಕ್ರಮವಾಗಿ ನೆಲೆಸಿರುವವ ವಿರುದ್ಧ ಕ್ರಮ ಮತ್ತು ಇತ್ತೀಚೆಗೆ ನುಹ್ನಲ್ಲಿ ನಡೆದ ಹಿಂಸಾಚಾರ ಸಂಬಂಧ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಜುಲೈ 31 ರಂದು ನುಹ್ ಜಿಲ್ಲೆಯಲ್ಲಿ ಬಜರಂಗದಳ ಕಾರ್ಯಕರ್ತರು ‘ಜಲಾಭಿಷೇಕ ಯಾತ್ರೆ’ಯನ್ನು ಕೈಗೊಂಡಿದ್ದರು. ಈ ಯಾತ್ರೆ ಮೇಲೆ ಅನ್ಯಕೋಮಿನ ಕೆಲವು ಕಡಿಗೇಡಿಗಳು ಕಲ್ಲೆಸೆದು ಹಿಂಸಾಚಾರಕ್ಕೆ ಕಾರಣರಾಗಿದ್ದರು. ಅದಾದ ಬಳಿಕ ಭಾರೀ ದೊಡ್ಡ ಮಟ್ಟದಲ್ಲಿ ಹಿಂಸಾಚಾರ ಉಂಟಾಗಿತ್ತು. 6 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಪ್ರಕರಣ ಸಂಬಂಧ, 176 ಆರೋಪಿಗಳನ್ನು ಬಂಧಿಸಿದ್ದಾರೆ. 90 ಮಂದಿಯನ್ನು ವಶಕ್ಕೆ ಪಡೆದು 41 ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ