ಸಿಎಂ 14ನೇ ಬಜೆಟ್ನಲ್ಲಿ ಬಂಪರ್ ಕೊಡುಗೆ
ಗ್ಯಾರಂಟಿ ಹೊರೆ ಮಧ್ಯೆಯೂ ಕೊಡುಗೆ ಭಾಗ್ಯ
ಆ್ಯಸಿಡ್ ಸಂತ್ರಸ್ತೆಯರಿಗೆ 5 ಲಕ್ಷ ಬಡ್ಡಿ ರಹಿತ ಸಾಲ
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮಂಡಿಸಿರೋ 14ನೇ ಬಜೆಟ್ನಲ್ಲಿ ಹೆಚ್ಚು ಕೊಡುಗೆಗಳನ್ನ ನೀಡ್ತಾರೆ ಅನ್ನೋ ನಿರೀಕ್ಷೆ ಜನಸಾಮಾನ್ಯರಲ್ಲಿ ಜಾಸ್ತಿಯೇ ಇತ್ತು. ಗ್ಯಾರಂಟಿಗಳ ಹೊರೆಯ ನಡುವೆಯೂ ತಕ್ಕಮಟ್ಟಿಗೆೆ ನಿರೀಕ್ಷೆಗಳನ್ನ ಈಡೇರಿಸೋ ಪ್ರಯತ್ನ ಮಾಡಿದ್ದಾರೆ. ಕೆಲ ವರ್ಗಗಳ ವಿಚಾರದಲ್ಲಿ ಉದಾರತೆ ತೋರಿರುವ ಸಿದ್ದರಾಮಯ್ಯ ವಿಶೇಷ ಕೊಡುಗೆಗಳನ್ನ ಘೋಷಿಸಿದ್ದಾರೆ.
14ನೇ ಬಜೆಟ್ನಲ್ಲಿ ಕೊಡುಗೆಗಳ ಮಹಾಪೂರ
ಹೊಸ ಸರ್ಕಾರದ ಮೊದಲ ಬಜೆಟ್. ಅದ್ರಲ್ಲೂ ಸಿಎಂ ಸಿದ್ದರಾಮಯ್ಯರ 14ನೇ ಬಜೆಟ್ ಅಂದಮೇಲೆ ನಿರೀಕ್ಷೆ ಬೆಟ್ಟದಷ್ಟಿತ್ತು. ಎಲ್ಲರ ಚಿತ್ತ ಇದ್ದಿದ್ದು ಕೊಡುಗೆಗಳ ಮೇಲೆ. ಅದ್ರಂತೆ ಸಿದ್ದರಾಮಯ್ಯ ಬಜೆಟ್ನಲ್ಲಿ ಅಪಾರ ಕೊಡುಗೆಗಳನ್ನ ನೀಡಿದ್ದಾರೆ.
ಆ್ಯಸಿಡ್ ದಾಳಿ ಸಂತ್ರಸ್ತೆಯರಿಗೆ 5 ಲಕ್ಷ ಬಡ್ಡಿ ರಹಿತ ಸಾಲ
ಆ್ಯಸಿಡ್ ಸಂತ್ರಸ್ತೆಯರಿಗೆ ಸ್ವಾವಲಂಬಿಯಾಗಿ ಬದುಕಲು ಅವಕಾಶ ಕಲ್ಪಿಸಲಾಗಿದ್ದು, 5 ಲಕ್ಷ ಬಡ್ಡಿ ರಹಿತ ಸಾಲ ಸೌಲಭ್ಯ ಸಿಗಲಿದೆ. ಸ್ವಿಗ್ಗಿ, ಝೊಮ್ಯಾಟೋ ಸಿಬ್ಬಂದಿಗೆ 4 ಲಕ್ಷ ವಿಮಾ ಸೌಲ್ಯಭ್ಯ ಘೋಷಿಸಲಾಗಿದೆ. ಇದರ ಜೊತೆಗೆ ಹಮಾಲರಿಗೆ ಬೆನ್ನೆಲುಬಾಗಿ ನಿಂತಿರೋ ಸರ್ಕಾರ, ಹಮಾಲರು ಮರಣ ಹೊಂದಿದ್ರೆ, ಅವರ ಶಸಂಸ್ಕಾರಕ್ಕೆ 25,000 ರೂಪಾಯಿ ನೀಡೋದಾಗಿ ತಿಳಿಸಿದೆ. ಅಲ್ಲದೆ, ಪತ್ರಕರ್ತರ ಮಾಸಾಶನವನ್ನೂ ಸಿಎಂ 12 ಸಾವಿರಕ್ಕೆ ಏರಿಸಿದ್ದಾರೆ.
ಸಿಎಂ ‘ಕೊಡುಗೆ’
ತವರೂ ಜಿಲ್ಲೆಗೆ ಹೆಚ್ಚು ಒತ್ತು ನೀಡಿರೋ ಸಿಎಂ, ನಾಡ ದೇವತೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸುವ ಸಲುವಾಗಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವುದಾಗಿ ಘೋಷಿಸಿದ್ದಾರೆ. ರಾಜ್ಯಕ್ಕೆ ಒಂದು ಫಿಲ್ಮ್ಸಿಟಿ ಬೇಕು ಎಂಬ ಚಿತ್ರರಂಗದವರ ಬಹುವರ್ಷಗಳ ಬೇಡಿಕೆಗೆ ಬಜೆಟ್ನಲ್ಲಿ ಒಪ್ಪಿಗೆ ಮುದ್ರೆ ಸಿಕ್ಕಿದ್ದು, ಮೈಸೂರಿನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಅಸ್ತು ಎಂದಿದ್ದಾರೆ. ಮೈಸೂರಲ್ಲಿ AR, VR ತಂತ್ರಜ್ಞಾನದ ವಸ್ತು ಸಂಗ್ರಹಾಲಯ ನಿರ್ಮಾಣಕ್ಕೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ಇದರ ಜೊತೆ ಜೊತೆಗೆ ಹಂಪಿ, ನಂದಿ ಬೆಟ್ಟ, ಬಾದಾಮಿ ಗುಹೆಗಳಲ್ಲಿ, ಬೀದರ್ ಕೋಟೆ, ಗೋಲ್ ಗುಂಬಜ್, ಕಿತ್ತೂರು ಕೋಟೆಯಲ್ಲಿ 3D ಪ್ರೊಜೆಕ್ಷನ್, ನೈಟ್ ಶೋಗೆ ವ್ಯವಸ್ಥೆ ಇರಲಿದೆ.
ಇನ್ನೂ, ವಿಪತ್ತು ನಿರ್ವಹಣೆಗಾಗಿ ಹೊಸ ಏರ್ಸ್ಟ್ರಿಪ್ಗಳನ್ನು ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ತುರ್ತು ಸಂದರ್ಭದಲ್ಲಿ ಪ್ರವಾಸಿಗರ ರಕ್ಷಣೆಗಾಗಿ ಧರ್ಮಸ್ಥಳ, ಕೊಡಗು, ಚಿಕ್ಕಮಗಳೂರಿನಲ್ಲಿ ಈ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಡಾ. ರಾಜ್ ಕುಮಾರ್ ಸ್ಮಾರಕದ ಬಳಿ ವಸ್ತು ಸಂಗ್ರಹಾಲಯ ನಿರ್ಮಾಣಕ್ಕೂ ತೀರ್ಮಾನಿಸಲಾಗಿದೆ. ಅಲ್ಲದೆ, ಸಸಿಹಿತ್ಲು ಬೀಚ್ನಲ್ಲಿ ಅಂತರಾಷ್ಟ್ರೀಯ ಸರ್ಫಿಂಗ್ ತಾಣ ಸ್ಥಾಪನೆಗೂ ಬಜೆಟ್ನಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಕಣ್ಣಿನ ಸಮಸ್ಯೆ ಇದ್ದವರಿಗೆ ಕನ್ನಡಕ ವಿತರಣೆ ಮೂಲಕ ಸರ್ಕಾರ ಆಶಾಕಿರಣವಾಗಿ ನಿಂತಿದೆ. ಆಶಾಕಿರಣ ಕಾರ್ಯಕ್ರಮದಡಿಯಲ್ಲಿ ಕಣ್ಣಿನ ಶಿಬಿರಗಳು, ಪೊರೆ ಶಸ್ತ್ರ ಚಿಕಿತ್ಸೆಗಳನ್ನ ನಡೆಸಲಾಗುತ್ತೆ. ಬೆಂಗಳೂರಲ್ಲೇ 5 ಸಂಚಾರಿ, 6 ಮಹಿಳಾ ಪೊಲೀಸ್ ಠಾಣೆ ಸ್ಥಾಪನೆಗೂ ಸರ್ಕಾರ ಅಸ್ತು ಎಂದಿದೆ.
ಬಂಪರ್ ಕೊಡುಗೆಗಳು
ಪುನೀತ್ ರಾಜ್ಕುಮಾರ್ ಸ್ಮರಣಾರ್ಥ, ಹಠಾತ್ ಹೃದಯಾಘಾತ ಸಂಬಂಧಿ ಸಾವು ತಡೆಯಲು ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಎಇಡಿ ಅಳವಡಿಕೆ ಕ್ರಮ ಕೈಗೊಳ್ಳಲಾಗಿದೆ. ನವದಂಪತಿಗಳಿಗೆ ಬಜೆಟ್ನಲ್ಲಿ ಗುಡ್ನ್ಯೂಸ್ ಸಿಕ್ಕಿದ್ದು, ಆನ್ಲೈನ್ ಮೂಲಕ ವಿವಾಹ ನೋಂದಣಿ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಸ್ವಾವಲಂಬಿ ಸಾರಥಿ ಯೋಜನೆಯಡಿ ಕಾರು ಖರೀದಿಗೆ 4 ಲಕ್ಷ ಸಹಾಯಧನ ನೀಡಲಾಗುವುದು. ಇನ್ನೂ, SC,ST ವಿದ್ಯಾರ್ಥಿಗಳ ವಿದೇಶ ವ್ಯಾಸಂಗಕ್ಕೆ 36 ಕೋಟಿ ಅನುದಾನ ನೀಡಲಾಗುತ್ತೆ. ಅಲ್ಲದೆ, SC,ST ನಿರುದ್ಯೋಗಿಗಳ ಬ್ಯಾಂಕ್ ಸಾಲಕ್ಕೆ ಶೇಕಡ 20ರಷ್ಟು ಸಹಾಯಧನ ಕೊಡಲಾಗುತ್ತೆ.
ವಿಡಿಯೋ ಕಾನ್ಫೆರನ್ಸ್ ಮೂಲಕ ಖೈದಿಗಳನ್ನ ಕೋರ್ಟ್ಗೆ ಹಾಜರು ಪಡಿಸಲು ಅವಕಾಶ ನೀಡಲಾಗಿದೆ. ಇನ್ನೂ, ಉದ್ಯಮ ಶಕ್ತಿ ಯೋಜನೆಯಡಿ 100 ಪೆಟ್ರೋಲ್ ಬಂಕ್ಗಳ ಸ್ಥಾಪನೆ ಮಾಡಲಾಗಿದ್ದು, ಮಹಿಳಾ ಸ್ವಸಹಾಯ ಸಂಘಗಳಿಗೆ ಬಂಕ್ಗಳ ನಿರ್ವಹಣೆ ಜವಾಬ್ದಾರಿ ನೀಡಲಾಗುವುದು. ಒಲಂಪಿಕ್, ಪ್ಯಾರಾಲಿಂಪಿಕ್ ವಿಜೇತರಿಗೆ ಗ್ರೂಪ್ ಎ ದರ್ಜೆಯ ಹುದ್ದೆ ಮತ್ತು ಏಷ್ಯನ್, ಕಾಮನ್ವೆಲ್ತ್ ವಿಜೇತರಿಗೆ ಗ್ರೂಪ್ ಬಿ ದರ್ಜೆಯ ಹುದ್ದೆ ಸಿಗಲಿದೆ.
ತೆರಿಗೆ ಹೊರೆ ಹೊರಿಸಿ ಶಾಕ್ ಕೊಟ್ಟ ಸಿಎಂ ಅದರ ಜೊತೆ ಜೊತೆಗೆ ಕೆಲವು ಕೊಡುಗೆಗಳನ್ನು ನೀಡಿದ್ದಾರೆ. ಆದ್ರೆ, ಅದು ಜನರ ನಿರೀಕ್ಷೆ ಹುಸಿಗೊಳಿಸಿದ್ಯಾ? ಇಲ್ವಾ? ಅನ್ನೋ ಪ್ರಶ್ನೆಗೆ ಅವರೇ ಉತ್ತರ ಕೊಡಬೇಕು. ಇನ್ನೂ, ಇದು ಎಷ್ಟು ಸಹಕಾರಿಯಾಗಲಿದೆ ಅನ್ನೋದು ಮಾತ್ರ ಕೊಡುಗೆಗಳು ಕಾರ್ಯರೂಪಕ್ಕೆ ಬಂದ್ಮೇಲಷ್ಟೇ ಗೊತ್ತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ