newsfirstkannada.com

ವಿಶ್ವಕಪ್​ ಗೆದ್ದ ಬೆನ್ನಲ್ಲೇ ಕ್ಯಾಪ್ಟನ್​ ರೋಹಿತ್​ಗೆ ಬಿಗ್​ ಶಾಕ್​ ಕೊಟ್ಟ ಬುಮ್ರಾ.. ಏನಾಯ್ತು?

Share :

Published July 4, 2024 at 8:03pm

  2024ರ ಟಿ20 ವಿಶ್ವಕಪ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಬುಮ್ರಾ, ರೋಹಿತ್​​!

  ಟೀಮ್​ ಇಂಡಿಯಾ ರೋಹಿತ್​ ಶರ್ಮಾಗೆ ಶಾಕ್​ ಕೊಟ್ಟ ಸ್ಟಾರ್​ ವೇಗಿ ಬುಮ್ರಾ!

  ಭಾರತ ತಂಡ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಸ್ಟಾರ್​ ವೇಗಿ​​

ಇತ್ತೀಚೆಗೆ ನಡೆದ 2024ರ ಟಿ20 ವಿಶ್ವಕಪ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಮೂವರು ಸ್ಟಾರ್​ ಕ್ರಿಕೆಟಿಗರನ್ನು ಈ ತಿಂಗಳ ಆಟಗಾರ ಪ್ರಶಸ್ತಿಗೆ ಐಸಿಸಿ ನಾಮನಿರ್ದೇಶನ ಮಾಡಿದೆ. ಭಾರತ ತಂಡದ ಕ್ಯಾಪ್ಟನ್​​ ರೋಹಿತ್​ ಶರ್ಮಾ, ಸ್ಟಾರ್​ ಬೌಲರ್​​ ಜಸ್ಪ್ರೀತ್ ಬುಮ್ರಾ ಮತ್ತು ಅಫ್ಘಾನ್​ ತಂಡದ ವಿಕೆಟ್​ ಕೀಪರ್​ ಬ್ಯಾಟರ್ ಆಗಿರೋ ರಹಮಾನುಲ್ಲಾ ಗುರ್ಬಾಜ್ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.

ಇನ್ನು, ಟೀಮ್​ ಇಂಡಿಯಾ ಟಿ20 ವಿಶ್ವಕಪ್​ ಗೆಲ್ಲಲು ಕ್ಯಾಪ್ಟನ್​ ರೋಹಿತ್​ ಶರ್ಮಾ ಮತ್ತು ಸ್ಟಾರ್​ ವೇಗಿ ಬೂಮ್ರಾ ಪಾತ್ರ ಹೆಚ್ಚಿದೆ. ಅದರಲ್ಲೂ ಟಿ20 ವಿಶ್ವಕಪ್‌ನಲ್ಲಿ ರೋಹಿತ್‌ ಶರ್ಮಾ ಭಾರತ ತಂಡವನ್ನು ಚಾಂಪಿಯನ್​​ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಬರೋಬ್ಬರಿ 17 ವರ್ಷಗಳ ಬಳಿಕ ಟೀಮ್​ ಇಂಡಿಯಾ ಟಿ20 ವಿಶ್ವಕಪ್​ ಗೆಲ್ಲಿಸಿಕೊಟ್ಟಿದ್ದಾರೆ.

ರೋಹಿತ್​ ಇಡೀ ಟೂರ್ನಿಯಲ್ಲಿ ಬರೋಬ್ಬರಿ 257 ರನ್​​ ಚಚ್ಚಿದ್ರು. ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​​​ 150ಕ್ಕೂ ಹೆಚ್ಚಿದೆ. ಜತೆಗೆ ಆವರೇಜ್​​​ 36 ಇದೆ. ಆಸ್ಟ್ರೇಲಿಯಾದ ವಿರುದ್ಧ ಗಳಿಸಿದ 92 ರನ್​ ಲೀಡಿಂಗ್​ ಸ್ಕೋರ್​ ಆಗಿದೆ.

ಬುಮ್ರಾ ತಾನು ಆಡಿದ 8 ಪಂದ್ಯಗಳಲ್ಲಿ ಕೇವಲ 4.17ರ ಎಕಾನಮಿ ಜತೆ 8.26ರ ಸರಾಸರಿಯಲ್ಲಿ 15 ವಿಕೆಟ್‌ ಪಡೆದಿದ್ರು. ಬುಮ್ರಾ ಅವರಿಗೆ ಮ್ಯಾನ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ನೀಡಲಾಗಿದೆ. ಬುಮ್ರಾ ರೋಹಿತ್​​ ಜತೆಗೆ ಐಸಿಸಿ ತಿಂಗಳ ‘ಜೂನ್’ ಪ್ರಶಸ್ತಿ ಗೆಲ್ಲಲು ಪೈಪೋಟಿ ನೀಡುವ ಮೂಲಕ ಶಾಕ್​ ಕೊಟ್ಟಿದ್ದಾರೆ.

ಇದನ್ನೂ ಓದಿ: I’m So Sorry: ರೋಹಿತ್​ ಮುಂದೆಯೇ ಹಾರ್ದಿಕ್​​ ಪಾಂಡ್ಯಗೆ ಕ್ಷಮೆ ಕೇಳಿದ ಫ್ಯಾನ್ಸ್​​​!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ವಿಶ್ವಕಪ್​ ಗೆದ್ದ ಬೆನ್ನಲ್ಲೇ ಕ್ಯಾಪ್ಟನ್​ ರೋಹಿತ್​ಗೆ ಬಿಗ್​ ಶಾಕ್​ ಕೊಟ್ಟ ಬುಮ್ರಾ.. ಏನಾಯ್ತು?

https://newsfirstlive.com/wp-content/uploads/2024/07/Bumrah_Rohit.jpg

Load More