newsfirstkannada.com

27 ವರ್ಷ ಒಂದು ದಿನವೂ ಕೆಲಸಕ್ಕೆ ರಜೆ ಇಲ್ಲ.. ದಾಖಲೆ ಬರೆದ ಈ ಭೂಪನಿಗೆ ಕೋಟಿ, ಕೋಟಿ ಬಹುಮಾನ

Share :

17-08-2023

    27 ವರ್ಷ ನಿರಂತರ ಕಾಯಕದಲ್ಲಿ ದಾಖಲೆ ಬರೆದ ಕ್ಯಾಶಿಯರ್!

    ಒಂದು ದಿನವೂ ಕೆಲಸಕ್ಕೆ ಲೇಟ್ ಆಗಿ ಬಂದಿಲ್ಲ, ಚಕ್ಕರ್ ಹಾಕಿಲ್ಲ

    ಈ ನಿಷ್ಟಾವಂತ ಕೆಲಸಗಾರನಿಗೆ ಕೋಟ್ಯಾಂತರ ರೂಪಾಯಿ ಗಿಫ್ಟ್‌

ಲಾಸ್ ವೇಗಾಸ್: ಅಬ್ಬಾ ನಿಜಕ್ಕೂ ಇದು ಶಾಕಿಂಗ್ ಸುದ್ದಿ. ಯಾರೇ ಆಗಲಿ ವಾರಪೂರ್ತಿ ಕೆಲಸ ಮಾಡಿದ್ರೆ ಒಂದು ದಿನವಾದ್ರೂ ವಿಶ್ರಾಂತಿ ಬೇಕೇ ಬೇಕು ಅಂತಾ ಬಯಸುತ್ತಾರೆ. ಅದು ಸಹಜ ಕೂಡ. ಎಷ್ಟೋ ಮಂದಿ ವೀಕೆಂಡ್ ಬಂದ್ರೆ ಸಾಕು ಅಂತಾ ಕಾಯುತ್ತಾ ಇರ್ತಾರೆ. ರಜೆ ಇಲ್ಲದೇ ಕೆಲಸ ಮಾಡೋಕೆ ಸಾಧ್ಯವೇ ಇಲ್ಲ ಅಂತಾ ಹೇಳುತ್ತಾರೆ. ಆದ್ರೆ ಇಲ್ನೋಡಿ ಈ ವ್ಯಕ್ತಿ ಒಂದಲ್ಲ, ಎರಡಲ್ಲ ಬರೋಬ್ಬರಿ 27 ವರ್ಷ ಒಂದು ದಿನವೂ ತನ್ನ ಕೆಲಸಕ್ಕೆ ಚಕ್ಕರ್ ಹಾಕಿಲ್ಲ. ಅಬ್ಬಾ.. ಯಾರಪ್ಪಾ ಈ ಮಹಾನುಭಾವ ಅಂತಾ ಯೋಚ್ನೆ ಮಾಡೋರಿಗೆ ಈ ಸ್ಟೋರಿ ಇಷ್ಟವಾಗುತ್ತೆ. ಈ ವ್ಯಕ್ತಿ ಸತತ 27 ವರ್ಷ ಒಂದು ದಿನವೂ ರಜಾ ತೆಗೆದುಕೊಳ್ಳದೇ ಹೊಸ ದಾಖಲೆ ಬರೆದಿದ್ದಾನೆ.

ಸತತ 27 ವರ್ಷ ಈ ವ್ಯಕ್ತಿಯ ಹೆಸ್ರು ಕೆವಿನ್ ಫೋರ್ಡ್. ಬರ್ಗರ್‌ ಕಿಂಗ್‌ ಕಂಪನಿಯಲ್ಲಿ ಕ್ಯಾಶಿಯರ್ ಮತ್ತು ಕುಕ್ ಆಗಿ ಕೆಲಸ ಮಾಡುತ್ತಿದ್ದಾನೆ. ಅಮೆರಿಕಾದ ಲಾಸ್ ವೇಗಾಸ್‌ನಲ್ಲಿರುವ ಮೆಕ್‌ಕಾರನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಇವನ ಕಾಯಕ. ಈತ 27 ವರ್ಷದಲ್ಲಿ ಒಂದು ದಿನವೂ ಕೆಲಸಕ್ಕೆ ಲೇಟ್ ಆಗಿ ಬಂದಿಲ್ಲ. ಹುಷಾರಿಲ್ಲ ಅಂತಾ ಒಂದು ದಿನವೂ ಚಕ್ಕರ್ ಹಾಕಿಲ್ಲ ಅನ್ನೋದು ಮತ್ತೊಂದು ವಿಶೇಷ. ಇವನು 27 ವರ್ಷ ಒಂದು ದಿನವೂ ರಜೆ ತೆಗೆದುಕೊಳ್ಳದೇ ಕೆಲಸ ಮಾಡಿರೋದು ಇಡೀ ವಿಶ್ವದ ಗಮನ ಸೆಳೆದಿದೆ. ಕೆವಿನ್ ಫೋರ್ಡ್ ನಿಷ್ಟಾವಂತ ಕೆಲಸವನ್ನು ನೋಡಿ ಬಹಳಷ್ಟು ಮಂದಿ ಕೋಟ್ಯಾಂತರ ರೂಪಾಯಿ ಹಣವನ್ನು ದೇಣಿಗೆಯಾಗಿ ಕೊಡುತ್ತಿದ್ದಾರೆ.

ಕೆವಿನ್ ಫೋರ್ಡ್‌ ಕಾಯಕ ನಿಷ್ಟೆಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಆನ್‌ಲೈನ್‌ನಲ್ಲಿ ಕೆವಿನ್ ಪೋರ್ಡ್‌ಗೆ ಬಹಳಷ್ಟು ಗಿಫ್ಟ್‌ಗಳನ್ನು ಜನ ಕಳುಹಿಸಿದ್ದಾರೆ. ಜನ ಪ್ರೀತಿಯಿಂದ ಕಳುಹಿಸಿರೋ ಗಿಫ್ಟ್ ನೋಡಿ ಕೆವಿನ್ ಫೋರ್ಡ್ ಸಂತಸ ವ್ಯಕ್ತಪಡಿಸಿದ್ದಾರೆ. ಈ ಉಡುಗೊರೆಗಳ ಜೊತೆಗೆ ಕೆವಿನ್ ಫೋರ್ಡ್‌ ಹೆಸರಲ್ಲಿ ಒಟ್ಟು 3.50 ಕೋಟಿ ರೂಪಾಯಿಗೂ ಅಧಿಕ ದೇಣಿಗೆ ಸಂಗ್ರಹವಾಗಿದೆ.

ಇದನ್ನೂ ಓದಿ: ವಿಮಾನದಲ್ಲಿ ಮುಖ್ಯ ಪೈಲೆಟ್​​ಗೆ ಸಡನ್​ ಹಾರ್ಟ್​ ಅಟ್ಯಾಕ್.. 271 ಪ್ರಯಾಣಿಕರು ಬದುಕಿ ಬಂದಿದ್ದೇ ಪವಾಡ..!

27 ವರ್ಷದ ಹಿಂದೆ ಕೆವಿನ್ ಫೋರ್ಡ್‌ ಕುಟುಂಬ ಬಹಳಷ್ಟು ಕಷ್ಟದಲ್ಲಿತ್ತು. ಇದರ ಜೊತೆಗೆ ಅಕ್ಕನನ್ನು ಬೆಳೆಸುವ ಜವಾಬ್ದಾರಿ ಈತನ ಹೆಗಲೇರಿತ್ತು. ಬರ್ಗರ್‌ ಕಿಂಗ್ ಕಂಪನಿಯಲ್ಲಿ ಕೆಲಸ ಆರಂಭಿಸಿದ ಕೆವಿನ್ ಫೋರ್ಡ್ 27 ವರ್ಷ ಒಂದು ದಿನವೂ ರಜೆಯೇ ಹಾಕಿಲ್ಲ. ಇದೀಗ ನಿವೃತ್ತಿಯ ಯೋಚನೆಯಲ್ಲಿರೋ ಕೆವಿನ್ ಫೋರ್ಡ್‌ಗೆ ಅಭಿಮಾನಿಗಳು ಕೋಟ್ಯಾಂತರ ರೂಪಾಯಿ ದೇಣಿಗೆ ಕೊಟ್ಟು ಅಭಿನಂದನೆ ಸಲ್ಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

27 ವರ್ಷ ಒಂದು ದಿನವೂ ಕೆಲಸಕ್ಕೆ ರಜೆ ಇಲ್ಲ.. ದಾಖಲೆ ಬರೆದ ಈ ಭೂಪನಿಗೆ ಕೋಟಿ, ಕೋಟಿ ಬಹುಮಾನ

https://newsfirstlive.com/wp-content/uploads/2023/08/Kevin-Ford.jpg

Load More