newsfirstkannada.com

Share :

01-06-2023

    ಬಸ್​​, ಬೈಕ್​ ನಡುವೆ ಭೀಕರ ಅಪಘಾತ

    ಸ್ಥಳದಲ್ಲೇ ಓರ್ವ ಸಾವು, ಮೂವರ ಸ್ಥಿತಿ ಗಂಭೀರ

    ಘಟನಾ ಸ್ಥಳಕ್ಕೆ ಪೊಲೀಸ್​ ಅಧಿಕಾರಿಗಳು ಭೇಟಿ

ಬೆಳಗಾವಿ: ಸರ್ಕಾರಿ ಬಸ್ ಹಾಗೂ ಬೈಕ್​​ ನಡುವೆ ಭೀಕರ ಅಪಘಾತ ಸಂಭವಿಸಿ ಓರ್ವ ಸಾವನ್ನಪ್ಪಿರೋ ಘಟನೆ ಖಾನಾಪುರ ತಾಲೂಕಿನ ಗೋಳಿಹಳ್ಳಿ ಗ್ರಾಮದ ಬಳಿ ನಡೆದಿದೆ. ಯಲ್ಲಪ್ಪ ವಣ್ಣೂರ (25) ಮೃತ ದುರ್ದೈವಿ.

ಮೃತ ವ್ಯಕ್ತಿಯು ಕಡತನ ಬಾಗೇವಾಡಿ ನಿವಾಸಿ. ಕಡತನ ಬಾಗೇವಾಡಿಯಿಂದ ಅಳ್ನಾವರ ಕಡೆಗೆ ಬೈಕ್‌ನಲ್ಲಿ ಇಬ್ಬರು ಮಕ್ಕಳು ಸೇರಿ ನಾಲ್ಕು ಜನ ಸಂಚಾರ ಮಾಡುತ್ತಿದ್ದರು. ಇದೇ ವೇಳೆ ಶಿರಸಿಯಿಂದ ಬೆಳಗಾವಿಯತ್ತ ಬರುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಬೈಕ್​​ ಮೇಲೆ ಇದ್ದ ನಾಲ್ಕು ಮಂದಿಗೆ ಗಂಭೀರ ಗಾಯಗಳಾಗಿವೆ.

ಕೂಡಲೇ ಸ್ಥಳೀಯರು ಖಾನಾಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಯಲ್ಲಪ್ಪ ವಣ್ಣೂರ ಮೃತಪಟ್ಟಿದ್ದಾರೆ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ನಂದಗಡ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More