Advertisment

ಡಬಲ್​ ಡೆಕ್ಕರ್​ ಬಸ್​-ಕಾರಿನ ನಡುವೆ ಭೀಕರ ಅಪಘಾತ.. 7 ಮಂದಿ ಸಾವು

author-image
AS Harshith
Updated On
ಡಬಲ್​ ಡೆಕ್ಕರ್​ ಬಸ್​-ಕಾರಿನ ನಡುವೆ ಭೀಕರ ಅಪಘಾತ.. 7 ಮಂದಿ ಸಾವು
Advertisment
  • ರಾತ್ರಿ ಸುಮಾರು 12.30ರ ವೇಳೆಗೆ ನಡೆದ ದುರ್ಘಟನೆ
  • ಎಕ್ಸ್​ಪ್ರೆಸ್​​ ವೇನಲ್ಲಿ ಸಂಚರಿಸುವಾಗ ಬಸ್​ -ಕಾರು ಮುಖಾಮುಖಿ
  • ಬಸ್​​ನಲ್ಲಿದ್ದ ಸುಮಾರು 20-25 ಮಂದಿಗೆ ಗಾಯ.. ಪರಿಸ್ಥಿತಿ ಹೇಗಿದೆ?

ಡಬಲ್​ ಡೆಕ್ಕರ್​ ಬಸ್​ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ 7 ಜನರು ಸಾವನ್ನಪ್ಪಿದ ಘಟನೆ ನಡೆದಿದೆ. ರಾತ್ರಿ ಸುಮಾರು 12.30ರ ವೇಳೆ ಈ ದುರ್ಘಟನೆ ನಡೆದಿದ್ದು, ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ.

Advertisment

ಉತ್ತರ ಪ್ರದೇಶದ ಇಟಾವಾದಲ್ಲಿ ಈ ಘಟನೆ ನಡೆದಿದೆ. ಆಗ್ರಾ-ಲಖನೌ ಎಕ್ಸ್​ಪ್ರೆಸ್​​ ವೇನಲ್ಲಿ ಸಂಚರಿಸುವಾಗ ಬಸ್​ ಮತ್ತು ಕಾರಿನ ನಡುವೆ ಅಪಘಾತವಾಗಿದೆ. ಮಾಹಿತಿ ಪ್ರಕಾರ, ರಾತ್ರಿ ವೇಳೆ ಕಾರು ಚಾಲಕ ವಿರುದ್ಧ ದಿಕ್ಕಿ ಬಂದ ಕಾರಣ ಈ ಅಪಘಾತ ನಡೆದಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಏಲಿಯನ್​ಗಾಗಿ ದೇವಾಲಯವನ್ನೇ ನಿರ್ಮಿಸಿದ ವ್ಯಕ್ತಿ.. ಅದರ ಶಕ್ತಿ ಎಂಥದ್ದು ಗೊತ್ತಾ?

ಡಬಲ್​​ ಡೆಕ್ಕರ್​ ಬಸ್​​ ರಾಯ್​ ಬರೇಲಿಯಿಂದ ದೆಹಲಿ ಕಡೆಗೆ ಸಂಚರಿಸುತ್ತಿತ್ತು. ಬಸ್​ನಲ್ಲಿ 60 ಜನ ಪ್ರಯಾಣಿಕರಿದ್ದರು. ಅವರಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ. ಸುಮಾರು 20-25 ಮಂದಿಗೆ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisment

ಇದನ್ನೂ ಓದಿ: Rain Effects: ನೀರಿನಲ್ಲಿ ಕೊಚ್ಚಿ ಹೋದ ಬಾಲಕಿ, ನದಿಗೆ ಬಿದ್ದ ಬೈಕ್.. ಓರ್ವನ ರಕ್ಷಣೆ, ಮತ್ತೋರ್ವ ನಾಪತ್ತೆ

ಇನ್ನು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸಾವನ್ನಪ್ಪಿದ್ದಾರೆ. ಒಟ್ಟು 7 ಮಂದಿ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment