newsfirstkannada.com

×

Breaking: ಪ್ರಯಾಣಿಸುತ್ತಿದ್ದ ಬಸ್​ನಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ; ಓರ್ವ ಸಾವು, 30 ಜನರಿಗೆ ಗಾಯ

Share :

Published November 11, 2023 at 7:54am

Update November 11, 2023 at 8:03am

    ಪ್ರಯಾಣಿಕರಿದ್ದ ಬಸ್​ನಲ್ಲಿ ಕಾಣಿಸಿಕೊಂಡ ಬೆಂಕಿ

    ಬೆಂಕಿಯಿಂದ ರಕ್ಷಿಸಿಕೊಳ್ಳಲು ಜಿಗಿದ ಪ್ರಯಾಣಿಕರು

    ಮೇದಿನಿಪುರ್​​ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ16ರಲ್ಲಿ ನಡೆದ ಘಟನೆ

ಕೋಲ್ಕತ್ತಾ: ಪ್ರಯಾಣಿಕರಿದ್ದ ಬಸ್​ಗೆ ಬೆಂಕಿ ತಗುಲಿ ಓರ್ವ ಮೃತಪಟ್ಟ ಘಟನೆ ಪಶ್ಚಿಮ ಬಂಗಾಳದ ಮೇದಿನಿಪುರ್​​ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ16ರಲ್ಲಿ ನಡೆದಿದೆ. ಈ ಘಟನೆಯಲ್ಲಿ 30 ಮಂದಿ ಗಾಯಗೊಂಡಿದ್ದಾರೆ.

ಶುಕ್ರವಾರದಂದು ತಡರಾತ್ರಿ ಬಸ್​​ಗೆ ಬೆಂಕಿ ತಗುಲಿದೆ. ಬಸ್ ಕೋಲ್ಕತ್ತಾದ ಬಾಘುಘಾಟ್​​ನಿಂದ​ ಒಡಿಶಾದ ಪಾರಾದೀಪ್​ಗೆ ಪ್ರಯಾಣಿಸುತ್ತಿತ್ತು. ಈ ವೇಳೆ ಬಸ್​ಗೆ ಬೆಂಕಿ ತಗುಲಿದೆ.

ಸಂಜೆ 5 ಗಂಟೆಗೆ ವೇಳೆಗೆ ಬಸ್​ ಕೋಲ್ಕತ್ತಾದಿಂದ ಹೊರಟಿದೆ. 10 ಗಂಟೆಯ ವೇಳೆಗೆ ಪಶ್ವಿಮ ಬಂಗಾಳದ ಮಾಧಬ್​ಪುರ ಪ್ರದೇಶವನ್ನು ತಲುಪಿದೆ. ಎಸಿ ಬಸ್​ ಇದಾಗಿದ್ದು, 10 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಓರ್ವ ಹತನಾಗಿದ್ದಾನೆ. 30 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking: ಪ್ರಯಾಣಿಸುತ್ತಿದ್ದ ಬಸ್​ನಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ; ಓರ್ವ ಸಾವು, 30 ಜನರಿಗೆ ಗಾಯ

https://newsfirstlive.com/wp-content/uploads/2023/11/Bus-Fire.jpg

Load More