newsfirstkannada.com

Breaking: ನಿಯಂತ್ರಣ ತಪ್ಪಿ ರೈಲು ಹಳಿಯ ಮೇಲೆ ಬಿದ್ದ ಬಸ್​; ನಾಲ್ವರು ಸಾವು, ಹಲವರು ಗಂಭೀರ

Share :

06-11-2023

    30ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದ ಬಸ್​ ಅಪಘಾತ

    ನಿಯಂತ್ರಣ ತಪ್ಪಿ ರೈಲು ಹಳಿಯ ಮೇಲೆ ಬಸ್​ ಪಲ್ಟಿ

    ಅಪಘಾತದಲ್ಲಿ ನಜ್ಜುಗುಜ್ಜಾದ ಬಸ್​, ಪೊಲೀಸರಿಂದ ತನಿಖೆ ಶುರು

ಬಸ್​ವೊಂದು ನಿಯಂತ್ರಣ ತಪ್ಪಿ ರೈಲು ಹಳಿಯ ಮೇಲೆ ಬಿದ್ದು ನಾಲ್ವರು ಸ್ಥಳದಲ್ಲೇ ಸಾವನಪ್ಪಿದ ಘಟನೆ ರಾಜಸ್ಥಾನದ ದೌಸಾದಲ್ಲಿ ನಡೆದಿದೆ. ಘಟನೆಯಲ್ಲಿ ಹಲವರು ಗಂಭೀರ ಗಾಯಗೊಂಡಿದ್ದಾರೆ.

ಬಸ್​ಲ್ಲಿ 30ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದು, ಪ್ರಯಾಣದ ವೇಳೆ ದೌಸಾದ ಸರ್ಕಲ್​ ಬಳಿ ನಿಯಂತ್ರಣ ತಪ್ಪಿದೆ. ಪರಿಣಾಮ ರೈಲು ಹಳಿಯ ಮೇಲೆ ಉರುಳಿ ಬಿದ್ದು, ನಜ್ಜುಗುಜ್ಜಾಗಿದೆ.

ದೌಸಾದ ಜಿಲ್ಲಾ ಮ್ಯಾಜಿಸ್ಟ್ರೇಟ್​​ ರಾಜ್​ಕುಮಾರ್​​ ಕಸ್ವಾ, ‘‘ಬಸ್​ ಅಪಘಾತದಲ್ಲಿ 28 ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ವರು ಮೃತಪಟ್ಟಿದ್ದಾರೆ. ಗಾಯಗೊಂಡವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಅಪಘಾತದ ನಡೆಯಲು ಏನು ಕಾರಣವೆಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ’’ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking: ನಿಯಂತ್ರಣ ತಪ್ಪಿ ರೈಲು ಹಳಿಯ ಮೇಲೆ ಬಿದ್ದ ಬಸ್​; ನಾಲ್ವರು ಸಾವು, ಹಲವರು ಗಂಭೀರ

https://newsfirstlive.com/wp-content/uploads/2023/11/rajasthan.jpg

Load More