ಬೆಂಕಿಯ ಕೆನ್ನಾಲೆಗೆ ಸೆಕೆಂಡ್ಗಳಲ್ಲಿ ಸುಟ್ಟು ಕರಕಲಾದ 30 ಬಸ್!
ತಿಂಗಳ ಅಂತರದಲ್ಲಿ 3 ಅನಾಹುತ! ಈ ಪಟ್ಟಣಕ್ಕೆ ಏನಾಗಿದೆ?
ಭಾರೀ ದುರಂತದಲ್ಲಿ 40 ಜನ ಕಾರ್ಮಿಕರು ಗ್ರೇಟ್ ಎಸ್ಕೇಪ್
ಬೆಂಗಳೂರು: ಕಳೆದೊಂದು ತಿಂಗಳಿನಿಂದ ಬೆಂಗಳೂರಿನಲ್ಲಿ ಅಗ್ನಿ ಅವಘಡಗಳ ಸಂಖ್ಯೆ ಜಾಸ್ತಿಯಾಗ್ತಿದೆ. ಆನೇಕಲ್ನ ಪಟಾಕಿ ದುರಂತದ ಬಳಿಕ ಬೆಂಗಳೂರಿನ ಪಬ್ ಹೊತ್ತಿ ಉರಿದಿತ್ತು. ಆದ್ರೆ ತಿಂಗಳ ಅಂತರದಲ್ಲೇ ಮತ್ತೊಂದು ಅಗ್ನಿ ಅವಘಡ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಒಂದಲ್ಲ ಎರಡಲ್ಲ ಬರೋಬ್ಬರಿ ಹಲವು ಬಸ್ಗಳು ಧಗಧಗನೇ ಹೊತ್ತಿ ಉರಿದಿವೆ.
ಕಳೆದೊಂದು ತಿಂಗಳಿನಿಂದ ಬೆಂಗಳೂರು ಜನ ಬೆಂಕಿ ಅನ್ನೋ ಪದ ಕೇಳಿದರೇ ಬೆಚ್ಚಿ ಬೀಳುವ ಹಾಗಾಗಿದೆ. ಯಾಕಂದ್ರೆ ಆನೇಕಲ್ನಲ್ಲಿ ಸಂಭವಿಸಿದ ಪಟಾಕಿ ದುರಂತ ಸಿಟಿ ಮಂದಿಯ ನಿದ್ದೆಗೆಡಿಸಿತ್ತು. ಅಷ್ಟರಲ್ಲೇ ಪಬ್ನಲ್ಲಿ ಸಂಭವಿಸಿದ ಅಗ್ನಿ ದುರಂತ ಬೆಂಗಳೂರಿನ ಜನರಿಗೆ ಭಯ ಹುಟ್ಟಿಸಿತ್ತು. ಈ ಎರಡು ಪ್ರಕರಣಗಳ ಗುಂಗಿನಲ್ಲಿರುವಾಗಲೇ ಬೆಂಗಳೂರಲ್ಲಿ ಮತ್ತೊಂದು ಅಗ್ನಿ ದುರಂತ ಸಂಭವಿಸಿದೆ.
ನೋಡ ನೋಡ್ತಿದ್ದಂತೆ ಹೊತ್ತಿ ಉರಿದ 30 ಖಾಸಗಿ ಬಸ್
ಬೆಂಕಿಯ ಕೆನ್ನಾಲಿಗೆಗೆ ಆಕಾಶದೆತ್ತರಕ್ಕೆ ಆವರಿಸಿದ ಹೊಗೆ
ಬೆಳಗ್ಗೆ ಸುಮಾರು 11 ರಿಂದ 11.30 ರ ಸಮಯ. ಬೆಂಗಳೂರಿನ ವೀರಭದ್ರನಗರದಲ್ಲಿ ದಟ್ಟ ಬೆಂಕಿ ಕಾಣಿಸಿಕೊಂಡಿತ್ತು. ಏನೂ ಅಂತ ನೋಡಿದ್ರೆ ಬರೋಬ್ಬರಿ 30 ಬಸ್ಗಳು ಹೊತ್ತಿ ಉರಿದಿದ್ದವು. ವೆಲ್ಡಿಂಗ್ ಕಾರ್ಯ ಮಾಡುತ್ತಿದ್ದಾಗ ಹೊತ್ತಿಕೊಂಡ ಬೆಂಕಿ ಮೊದಲಿಗೆ ಒಂದೇ ಬಸ್ಗೆ ಹೊತ್ತಿಕೊಂಡಿತ್ತು. ಬಳಿಕ ಒಂದಾದ ಮೇಲೆ ಒಂದರಂತೆ 30 ಬಸ್ಗಳಿಗೆ ಬೆಂಕಿ ವ್ಯಾಪಿಸಿತ್ತು. ಪರಿಣಾಮ, ಪಾರ್ಕ್ ಮಾಡಿದ್ದ 60 ಬಸ್ಗಳ ಪೈಕಿ 31 ಬಸ್ಗಳು ಸುಟ್ಟು ಬಸ್ಮವಾಗಿವೆ.
ಹತೋಟಿಗೆ ಬಾರದ ಬೆಂಕಿ.. ಅಗ್ನಿಶಾಮಕ ಸಿಬ್ಬಂದಿ ಹರಸಾಹಸ
ಒಂದು ಬಸ್ಗೆ ಬೆಂಕಿ ತಗುಲಿದ್ರೆ ನಂದಿಸೋದು ಕಷ್ಟ. ಮೂವತ್ತು ಬಸ್ ಅಂದ್ರೆ ಬೆಂಕಿಯ ತೀವ್ರತೆ ಹೇಗಿರಬೇಡ. ಹೌದು ಅಗ್ನಿ ದುರಂತ ನಡೆದ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸೋಕೆ ಹರಸಾಹಸ ಪಡಬೇಕಾಯ್ತು. 10ಕ್ಕೂ ಹೆಚ್ಚು ಅಗ್ನಿಶಾಮಕ ವಾಹನದಿಂದ ಬೆಂಕಿ ನಂದಿಸಿದ್ರೂ ಬೆಂಕಿಯ ತೀವ್ರತೆ ಮಾತ್ರ ಹತೋಟಿಗೆ ಬಂದಿರಲಿಲ್ಲ. ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ ಬಳಿಕದ ದೃಶ್ಯವಂತೂ ಭೀಕರವಾಗಿತ್ತು. ಬೆಂಕಿಯ ತೀವ್ರತೆಗೆ ಬಸ್ನ ಯಾವ ಭಾಗವೂ ಉಳಿದಿರಲಿಲ್ಲ. ಎಲ್ಲವೂ ಸುಟ್ಟು ಕರಕಲಾಗಿದ್ವು. 30 ಕ್ಕೂ ಹೆಚ್ಚು ಬಸ್ಗಳ ಅವಶೇಷಗಳು ಮಾತ್ರ ಕಾಣುತ್ತಿದ್ದವು. ದುರಂತ ಏನಂದ್ರೆ ಈ ಜಾಗದಲ್ಲಿ ಸುಮಾರು 30 ರಿಂದ 40 ಜನ ಕೆಲ ಮಾಡುತ್ತಿದ್ದರು. ಬಸ್ಗಳಿಗೆ ಟಾಪ್ ಕಟ್ಟೋದು ಸೇರಿದಂತೆ ವೆಲ್ಡಿಂಗ್ ಕೆಲಸ ಮಾಡಿದ್ದರು. ಬಸ್ಗಳಿಗೆ ಬೆಂಕಿ ಹೊತ್ತಿಕೊಳ್ತಿದ್ದಂತೆ ಸಿಬ್ಬಂದಿ ಹೊರಗೆ ಓಡಿ ಬಂದಿದ್ದಾರೆ. ಹೀಗಾಗಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.
ಇನ್ನೂ ಈ ಘಟನೆ ನಡೆದ ಸ್ಥಳದಲ್ಲಿ ಎಲ್ಪಿಜಿ ಸಿಲಿಂಡರ್ಗಳು ಇರೋದು ಕಂಡು ಬಂದಿದೆ. ಒಂದ್ವೆಳೆ ಸಿಲಿಂಡರ್ ಸ್ಪೋಟಗೊಂಡಿದ್ರೆ ಬೆಂಕಿ ಸುತ್ತಮುತ್ತಲಿನ ಪ್ರದೇಶಕ್ಕೆ ಆವರಿಸಿ ಮತ್ತೊಂದಿಷ್ಟು ಅನಾಹುತ ಸಂಭವಿಸಿರೋದು. ಬೆಂಕಿ ಅನಾಹುತದಿಂದಾಗಿ ಕೆಲ ಕಾಲ ಆತಂಕದ ವಾತವರಣ ನಿರ್ಮಾಣವಾಗಿತ್ತು. ಹೀಗಾಗಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಾಗಿತ್ತು. ಒಟ್ಟಿನಲ್ಲಿ ಬೆಂಗಳೂರಲ್ಲಿ ಪದೇ ಪದೇ ಬೆಂಕಿ ಅವಘಡ ಸಂಭವಿಸ್ತಿರೋದು ಸಿಟಿ ಜನರಿಗೆ ಆತಂಕ ತಂದೊಡ್ಡಿದ್ದವು. ಅದ್ಯಾವಾಗ ಏನಾಗುತ್ತೋ ಅನ್ನೋ ಭಯದಲ್ಲೇ ಜನ ಕಾಲ ಕಳೆಯುವಂತಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ