Advertisment

ಬೈಕ್​ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಉರುಳಿ ಬಿದ್ದ ಬಸ್​; 12 ಜನರ ದುರಂತ ಅಂತ್ಯ!

author-image
Gopal Kulkarni
Updated On
ಬೈಕ್​ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಉರುಳಿ ಬಿದ್ದ ಬಸ್​; 12 ಜನರ ದುರಂತ ಅಂತ್ಯ!
Advertisment
  • ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆ ಬಳಿ ಭಾರೀ ಅಪಘಾತ, 9 ಸಾ*ವು
  • ಎದುರಿಗೆ ಬಂದ ಬೈಕ್​ನ್ನು ತಪ್ಪಿಸಲು ಹೋದ ಚಾಲಕನಿಂದ ಯಡವಟ್ಟು
  • ಅಪಘಾತದ ಬಳಿಕ ಓಡಿ ಹೋದ ಚಾಲಕ, ಪೊಲೀಸರಿಂದ ಪ್ರಕರಣ ದಾಖಲು

ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್​ ಏಕಾಏಕಿ ಎದುರಿಗೆ ಬಂದಿದ್ದ ಬೈಕ್​ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ನೆಲಕ್ಕೆ ಬಿದ್ದಿದೆ. ಪರಿಣಾಮ 9 ಜನರು ಸ್ಥಳದಲ್ಲಿಯೇ ಮೃತಪಟ್ಟು ಹಲವಾರು ಜನರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಗೊಂಡಿಯಾ ಜಿಲ್ಲೆಯ ಕೊಹ್ಮಾರಾ ರಾಜ್ಯ ಹೆದ್ದಾರಿಯ ಖಾಜ್ರಿ ಎಂಬ ಗ್ರಾಮದ ಬಳಿ ಈ ಭೀಕರ ಅಪಘಾತ ಸಂಭವಿಸಿದ್ದು 9 ಜನರು ಪ್ರಾಣ ಕಳೆದುಕೊಂಡಿದ್ದಾರೆ.

Advertisment

ಎದುರಿಗೆ ಸಡನ್ ಆಗಿ ಬಂದ ಬೈಕ್​ಗೆ ಗುದ್ದುವುದನ್ನು ತಪ್ಪಿಸಲು ಹೋಗಿ ಬೇರೆ ಕಡೆ ತಿರುಗಿದ ಬಸ್​ ಅಪಘಾತಕ್ಕೆ ಈಡಾಗಿದೆ. ಎಂದು ಹೇಳಲಾಗುತ್ತಿದೆ. ದುರ್ಘಟನೆಯನ್ನು ನೋಡಿದ ಸ್ಥಳೀಯರು ಕೂಡಲೇ ಸಂಬಂಧಪಟ್ಟ ಇಲಾಖೆಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳೀಯರ ಸಹಾಯದೊಂದಿಗೆ ಘಟನೆಯಲ್ಲಿ ಗಾಯಗೊಂಡಿರುವ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ಇದನ್ನೂ ಓದಿ: ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಮತ್ತೆ ಇಡಿ ಶಾಕ್​! ಜುಹು ನಿವಾಸದ ಇಂಚಿಂಚೂ ಜಾಲಾಡುತ್ತಿರುವ ಆಫೀಸರ್ಸ್‌!

ಇನ್ನು ಅಪಘಾತ ಆಗುತ್ತಿದ್ದಂತೆ ಬಸ್ ಚಾಲಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು ತನಿಖೆಯನ್ನು ಶುರು ಮಾಡಿದ್ದಾರೆ. ಉರುಳಿ ಬಿದ್ದ ಬಸ್​ನ್ನು ಕ್ರೇನ್ ಸಹಾಯದ ಮೂಲಕ ಮೇಲಕ್ಕೆ ಎತ್ತಿ ಉಳಿದ ವಾಹನಗಳು ಓಡಾಡಲು ರಸ್ತೆಯನ್ನು ಕ್ಲೀಯರ್ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment