newsfirstkannada.com

ಉದ್ಯಮಿ ಗ್ರೇಟ್​ ಎಸ್ಕೇಪ್​.. ತಮಿಳುನಾಡಿನಿಂದ ತಪ್ಪಿಸಿಕೊಂಡು ಬೆಂಗಳೂರಿನಲ್ಲಿ ಕೇಸ್​ ದಾಖಲಿಸಿದ್ದೆ ರೋಚಕ

Share :

10-09-2023

    ಬೆಂಗಳೂರಿನಲ್ಲಿ ಕಿಡ್ನಾಪ್ ಮಾಡಿ ತಮಿಳುನಾಡಿಗೆ ಶಿಫ್ಟ್ ಮಾಡಿದ್ದರು.!

    ಉದ್ಯಮಿಯನ್ನ ಕಿಡ್ನಾಪ್ ಮಾಡಿ ₹50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಗ್ಯಾಂಗ್

    ​ಫಾರಂ ಹೌಸ್​ನಲ್ಲಿಟ್ಟು ಉದ್ಯಮಿ ಮೇಲೆ ಹಲ್ಲೆ ಮಾಡಿದ್ದ ದುಷ್ಕರ್ಮಿಗಳು

ಬೆಂಗಳೂರು: ಉದ್ಯಮಿಯೊಬ್ಬರನ್ನು ಕಿಡ್ನಾಪ್ ಮಾಡಿ 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಗ್ಯಾಂಗ್ ಅನ್ನ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಪ್ರಕರಣ ಸಂಬಂಧ ರೌಡಿ ಶೀಟರ್ ಸೇರಿ ಮೂವರು ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ.

ಆರೋಪಿಗಳಾದ ರೌಡಿ ಶೀಟರ್ ಅರುಣ್, ಕಿರಣ್ ಕುಮಾರ್, ಸೋಮಶೇಖರ್ ಬಂಧಿತರು. ಮತ್ತೋರ್ವ ಆರೋಪಿ ಎಸ್ಕೇಪ್ ಆಗಿದ್ದು ಪೊಲೀಸರು ಹುಡುಕಾಟ ನಡೆಸಿದ್ದ್ದಾರೆ. ತಮ್ಮ ಮೇಲಿದ್ದ ಕೇಸ್​ಗಳನ್ನು ಇತ್ಯರ್ಥ ಮಾಡಿಕೊಳ್ಳಲು ಉದ್ಯಮಿ ಸಂದೀಪ್ ಕುಮಾರ್ ಎನ್ನುವರನ್ನು ಈ ನಾಲ್ವರು ಸೇರಿ ಕಿಡ್ನಾಪ್ ಮಾಡಿದ್ದರು.

ಬೆಳಗಿನ ಜಾವ ಸಂದೀಪ್ ಕುಮಾರ್​ನನ್ನ​ ಕಿಡ್ನಾಪ್ ಮಾಡಿದ್ದ ಆರೋಪಿಗಳು 

ಬೆಂಗಳೂರಿನ ಇಟ್ಟಮಡುವಿನ ಬಳಿ ಆಗಸ್ಟ್​ 31 ರ ಬೆಳಗಿನ ಜಾವ 2:30ಕ್ಕೆ ಸಂದೀಪ್ ಕುಮಾರ್​ನನ್ನ​ ಆರೋಪಿಗಳು ಕಿಡ್ನಾಪ್ ಮಾಡಿ ಬಳಿಕ ತಮಿಳುನಾಡಿಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಡೆಂಕಣಿ ಕೋಣೆ ಫಾರಂ ಹೌಸ್​ನಲ್ಲಿಟ್ಟು ಉದ್ಯಮಿ ಮೇಲೆ ಮನ ಬಂದಂತೆ ಹಲ್ಲೆ ಮಾಡಿದ್ದಾರೆ. ನಂತರ 50 ಲಕ್ಷ ರೂಪಾಯಿಗೆ ಡಿಮ್ಯಾಂಡ್ ಮಾಡಿದ್ದಾರೆ. ಒಂದು ವೇಳೆ ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ.

ಮರುದಿನ ಮತ್ತೊಂದು ಜಾಗಕ್ಕೆ ಶಿಫ್ಟ್ ಮಾಡುವ ವೇಳೆ ಆರೋಪಿಗಳಿಂದ ಉದ್ಯಮಿ ತಪ್ಪಿಸಿಕೊಂಡಿದ್ದಾರೆ. ಬಳಿಕ ತಮಿಳುನಾಡಿನ ಅಚ್ಚಿತಾ ಪೊಲೀಸರ ಸಹಾಯ ಪಡೆದು ಬೆಂಗಳೂರಿಗೆ ವಾಪಸ್ ಬಂದು ನಾಲ್ವರು ಆರೋಪಿಗಳ ವಿರುದ್ಧ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಈ ಸಂಬಂಧ ಪೊಲೀಸರು ಮೂವರನ್ನು ಅರೆಸ್ಟ್ ಮಾಡಿದ್ದು ಇನ್ನೊಬ್ಬನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉದ್ಯಮಿ ಗ್ರೇಟ್​ ಎಸ್ಕೇಪ್​.. ತಮಿಳುನಾಡಿನಿಂದ ತಪ್ಪಿಸಿಕೊಂಡು ಬೆಂಗಳೂರಿನಲ್ಲಿ ಕೇಸ್​ ದಾಖಲಿಸಿದ್ದೆ ರೋಚಕ

https://newsfirstlive.com/wp-content/uploads/2023/09/BNG_KIDNAP_CASE.jpg

Load More