ಉತ್ತರ ಪ್ರದೇಶದ ಬಿಜ್ನೋರ್ನಲ್ಲಿ ಭಯಾನಕ ಕೃತ್ಯ
2 ಕೆಜಿ ಬಳ್ಳಿ, 1.5 ಲಕ್ಷ ಹಣ, ಸ್ಕೂಟರ್ ದೋಚಿದ್ರು
ಅಕ್ಟೋಬರ್ 19 ರಂದು ನಡೆದಿತ್ತಂತೆ ಮನೆ ದರೋಡೆ
ಉತ್ತರ ಪ್ರದೇಶದ ಬಿಜ್ನೋರ್ನಲ್ಲಿ ಭಯಾನಕ ಕೃತ್ಯವೊಂದು ನಡೆದಿದ್ದು, ಉದ್ಯಮಿ ಒಬ್ಬರ ಮನೆಗೆ ನುಗ್ಗಿರುವ ದರೋಡೆಕೋರರು ಅವರ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಮನೆಯಲ್ಲಿದ್ದ ಚಿನ್ನಾಭರಣವನ್ನು ದರೋಡೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಉದ್ಯಮಿ ತಮ್ಮ ತಾಯಿ ಹಾಗೂ ಇಬ್ಬರು ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಕೃತ್ಯ ನಡೆದಿದೆ ಎನ್ನಲಾಗಿದೆ. ಪೊಲೀಸರಿಗೆ ಉದ್ಯಮಿ ನೀಡಿರುವ ದೂರಿನ ಪ್ರಕಾರ, ಐವರು ನೇತೃತ್ವದ ಗ್ಯಾಂಗ್ ಉದ್ಯಮಿ ಮನೆಗೆ ನುಗ್ಗಿದೆ. ಮನೆಯಲ್ಲಿದ್ದ ಉದ್ಯಮಿ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಬಳಿಕ ಮನೆಯಲ್ಲಿಯೇ ಮದ್ಯಪಾನ ಮಾಡಿ, ಸಿಗರೇಟ್ ಸೇದಿದ್ದಾರೆ. ಸಿಗರೇಟಿನ ಬೆಂಕಿಯಿಂದ ಪತ್ನಿ ಮೈ ಸುಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಅಲ್ಲದೇ ಮನೆಯಲ್ಲಿದ್ದ ಚಿನ್ನಾಭರಣ, 2 ಕೆಜಿ ಬಳ್ಳಿ, 1.5 ಲಕ್ಷ ಹಣ, ಸ್ಕೂಟರ್, ಎಲ್ಇಡಿ ಟಿವಿಯನ್ನು ಹೊತ್ತುಕೊಂಡು ಹೋಗಿದ್ದಾರೆ ಎಂದು ಉದ್ಯಮಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಉದ್ಯಮಿ ಇನ್ನೊಂದು ಸ್ಟೇಟ್ಮೆಂಟ್ ಕೂಡ ನೀಡಿದ್ದಾರೆ. ಅಕ್ಟೋಬರ್ 19 ರಂದು ನಮ್ಮ ಮನೆಯಲ್ಲಿ ರಾಬರಿ ನಡೆದಿತ್ತು. ಈ ವೇಳೆ 80 ಸಾವಿರ ರೂಪಾಯಿ ಹಣವನ್ನು ಕದ್ದಿದ್ದರು ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ