newsfirstkannada.com

ಉದ್ಯಮಿ ವಿಜಯ್‌ ಮಲ್ಯ ಈಸ್ ಬ್ಯಾಕ್‌.. ದಸರಾ ಹಬ್ಬಕ್ಕೆ ವಿಶ್‌ ಮಾಡಿದ್ದಕ್ಕೆ ಫುಲ್‌ ಟ್ರೋಲ್‌!

Share :

24-10-2023

  ಲಿಕ್ಕರ್ ಕಿಂಗ್‌, ದಿ ಮ್ಯಾನ್ ಆಫ್ ಗುಡ್‌ ಟೈಮ್ಸ್, ಉದ್ಯಮಿ ವಿಜಯ್ ಮಲ್ಯ

  ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು ಅಂತ ಟ್ವೀಟ್ ಮಾಡಿದ ಮಲ್ಯ!

  ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆದ ಮಲ್ಯ ಮೇಮ್ಸ್‌

ಉದ್ಯಮಿ ವಿಜಯ್‌ ಮಲ್ಯ ಎಂದ ತಕ್ಷಣ ನೆನಪಿಗೆ ಬರೋದು ಕಿಂಗ್‌ಫಿಶರ್. ಲಿಕ್ಕರ್ ಕಿಂಗ್‌, ದಿ ಮ್ಯಾನ್ ಆಫ್ ಗುಡ್‌ ಟೈಮ್ಸ್ ಎಂದು ಕರೆಸಿಕೊಳ್ತಿದ್ದ ವಿಜಯ್ ಮಲ್ಯ ಅವರು ಸದ್ಯ ಭಾರತದಿಂದ ಪಲಾಯನ ಮಾಡಿದ್ದಾರೆ. ಭಾರತೀಯ ಬ್ಯಾಂಕ್‌ಗಳಲ್ಲಿ 9000 ಕೋಟಿ ರೂಪಾಯಿ ಸಾಲ ಮಾಡಿರುವ ವಿಜಯ್ ಮಲ್ಯ ಅವರು ಲಂಡನ್‌ನಲ್ಲಿ ನೆಲೆಸಿದ್ದಾರೆ.

ದೇಶ ಬಿಟ್ಟು ಹೋದರೂ ಉದ್ಯಮಿ ವಿಜಯ್ ಮಲ್ಯ ಅವರಿಗೆ ಭಾರತದ ಬಂಧ ಬಿಗಿಯಾಗಿದೆ. ದಸರಾ ಹಬ್ಬದ ವೇಳೆ ಅವರು ಮಾಡಿರೋ ಒಂದೇ ಒಂದು ವಿಶ್ ಮತ್ತೊಮ್ಮೆ ಅವರು ಸುದ್ದಿಯಾಗುವಂತೆ ಮಾಡಿದೆ. ಇಂದು ಸೋಷಿಯಲ್ ಮೀಡಿಯಾ Xನಲ್ಲಿ ವಿಜಯ್ ಮಲ್ಯ ಅವರು ಪ್ರತ್ಯಕ್ಷರಾಗಿದ್ದಾರೆ. ಈ ಬಾರಿಯೂ ಅವರು ಎಂದಿನಂತೆ ಹಬ್ಬದ ಶುಭಾಶಯ ಕೋರಿದ್ದು ಸಖತ್ ಟ್ರೋಲ್ ಆಗಿದೆ.

ಉದ್ಯಮಿ ವಿಜಯ್ ಮಲ್ಯ ಅವರು ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು ಅಂತ ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಅಂತಹದೇನೂ ವಿಶೇಷವಿಲ್ಲ. ಆದರೆ ವಿಜಯ್ ಮಲ್ಯ ಅವರು ಈ ಹಿಂದೆ ಗಣೇಶ ಚತುರ್ಥಿ, ಕೃಷ್ಣ ಜನ್ಮಾಷ್ಟಮಿ, ಓಣಂ ಹೀಗೆ ಭಾರತೀಯ ಹಬ್ಬದ ದಿನದಂದು ಮಾತ್ರವೇ ಶುಭಾಶಯ ಕೋರಿದ್ದಾರೆ. ವಿಜಯ್ ಮಲ್ಯ ಅವರು ಹೀಗೆ ವಿಶ್ ಮಾಡಿರೋ ದಿನವೇ ಭಾರತೀಯ ಬ್ಯಾಂಕ್‌ಗಳಿಗೂ ರಜೆ ಇದೆ. ಹೀಗಾಗಿ ಬ್ಯಾಂಕ್ ರಜೆ ಇರೋ ದಿನ ಮಾತ್ರವೇ ವಿಜಯ್ ಮಲ್ಯ ಅವರು ಟ್ವೀಟ್ ಮಾಡಿರೋದು ನೆಟ್ಟಿಗರ ಗಮನ ಸೆಳೆದಿದೆ.

ವಿಜಯ್‌ ಮಲ್ಯ ಅವರ ಈ ಟ್ವೀಟ್‌ಗಳನ್ನು ಟ್ಯಾಗ್‌ ಮಾಡಿರೋ ನೆಟ್ಟಿಗರು ಸಖತ್ ಟ್ರೋಲ್ ಮಾಡಿದ್ದಾರೆ. ಕೆಲವೊಂದು ಮೇಮ್ಸ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಉದ್ಯಮಿ ವಿಜಯ್‌ ಮಲ್ಯ ಈಸ್ ಬ್ಯಾಕ್‌.. ದಸರಾ ಹಬ್ಬಕ್ಕೆ ವಿಶ್‌ ಮಾಡಿದ್ದಕ್ಕೆ ಫುಲ್‌ ಟ್ರೋಲ್‌!

https://newsfirstlive.com/wp-content/uploads/2023/10/Vijaymallya-Wishes.jpg

Load More