newsfirstkannada.com

ಸ್ಮಾರ್ಟ್​ಫೋನ್​ ಕೊಂಡರೆ 2 KG ಟೊಮ್ಯಾಟೋ ಉಚಿತ! ಎಂಥಾ ಐಡಿಯಾ ಗುರು

Share :

10-07-2023

  2 KG ಟೊಮ್ಯಾಟೋ ಉಚಿತ ಕೊಡುವ ಮೊಬೈಲ್​ ಮಳಿಗೆಯ ಮಾಲೀಕ

  ಟೊಮ್ಯಾಟೋ ಕಳ್ಳರ ಕಾಟದ ನಡುವೆ ಇದೆಂಥಾ ಆಫರ್​ ಕೊಟ್ರು

  ಟೊಮ್ಯಾಟೋಗೆ ದೇಶದೆಲ್ಲೆಡೆ ಡಿಮ್ಯಾಂಡ್​ಪ್ಪೋ ಡಿಮ್ಯಾಂಡ್​

ತರಕಾರಿಗಳಲ್ಲಿ ಸದ್ಯ ಟೊಮ್ಯಾಟೋದ ಹವಾ ಜೋರಾಗಿಯೇ ಇದೆ. ಮಾತ್ರವಲ್ಲದೆ ಅಷ್ಟೇ ಬೇಡಿಕೆಯನ್ನು ಟೊಮ್ಯಾಟೋ ಸೃಷ್ಟಿಸಿದೆ. ಒಂದು ಲೀಟರ್​ ಪೆಟ್ರೋಲ್ ಬೆಲೆಗಿಂತಲೂ ಟೊಮ್ಯಾಟೋ ದುಬಾರಿಯಾಗಿದೆ. ಆದರೆ ಈ ದುಬಾರಿಯಾಗಿರುವ ಟೊಮ್ಯಾಟೋವನ್ನು ಇಟ್ಟುಕೊಂಡು ಇಲ್ಲೊಬ್ಬ ಮೊಬೈಲ್​ ಅಂಗಡಿ ಮಾಲೀಕ ಸ್ಮಾರ್ಟ್​ಸೆನ್ಸ್​ನಲ್ಲಿ ವ್ಯಾಪಾರ ಮಾಡಲು ಮುಂದಾಗಿದ್ದಾನೆ.

ಹೌದು. ಮೊಬೈಲ್​ ಅಂಗಡಿ ಮಾಲೀಕನೊಬ್ಬ ಸ್ಮಾರ್ಟ್​ ಫೋನ್​ ಖರೀದಿಸಿದರೆ 2 ಕೆ.ಜಿ ಟೊಮ್ಯಾಟೋ ಉಚಿತ ಎಂಬ ಜಾಹೀರಾತನ್ನು ನೀಡಿದ್ದಾನೆ. ಮಾತ್ರವಲ್ಲದೆ ಈ ವಿಚಿತ್ರ ಜಾಹೀರಾತು ಕಂಡು ಗ್ರಾಹಕರು ಕೂಡ ಆತನ ಅಂಗಡಿಗೆ ಬರುತ್ತಿದ್ದಾರಂತೆ.

ಅಂದಹಾಗೆಯೇ ಮಧ್ಯಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ಅಶೋಕ್​ ನಗರದ ಮೊಬೈಲ್​ ಶೋ ರೂಂನ ಮಾಲೀಕ ಅಭಿಷೇಕ್ ಅಗರ್ವಾಲ್​ ಸ್ಮಾರ್ಟ್​ಫೋನ್​ ಕೊಂಡೊವರಿಗೆ  2 ಕೆ.ಜಿ ಉಚಿತ ಟೊಮ್ಯಾಟೋ ಉಚಿತವಾಗಿ ನೀಡುತ್ತಿದ್ದಾನೆ.

ಸದ್ಯ ಮಧ್ಯಪ್ರದೇಶದಲ್ಲಿ ಟೊಮ್ಯಾಟೋ ಬೆಲೆ 160 ರೂಪಾಯಿ ದಾಟಿದೆ.  ಹೀಗಿರುವಾಗ ಕಳ್ಳರ ಕಾಟ ಹೆಚ್ಚಾಗುತ್ತಿದೆ. ಒಂದೆಡೆ ರೈತರು ಟೊಮ್ಯಾಟೋ ಕಳ್ಳರಿಂದ ಕಂಗಲಾಗಿ ಸಿಸಿ ಕ್ಯಾಮೆರಾ ಅಳವಡಿಸಿದರೆ, ಮತ್ತೋರ್ವ ರೈತ ಇಬ್ಬರು ಬಾಡಿಗಾರ್ಡ್​ಗಳನ್ನು ನೇಮಿಸಿದ್ದಾನೆ. ಅಷ್ಟರಮಟ್ಟಿಗೆ ಟೊಮ್ಯಾಟೋ ದೇಶದಾದ್ಯಂತ ಬೇಡಿಕೆ ಸೃಷ್ಟಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಮಾರ್ಟ್​ಫೋನ್​ ಕೊಂಡರೆ 2 KG ಟೊಮ್ಯಾಟೋ ಉಚಿತ! ಎಂಥಾ ಐಡಿಯಾ ಗುರು

https://newsfirstlive.com/wp-content/uploads/2023/07/Tomatto.jpg

Load More