ಈ ಐಷಾರಾಮಿ ವಿಲ್ಲಾ ಖರೀದಿ ಮಾಡಿದ್ರೆ ಸಿಗಲಿದೆ ಐಷಾರಾಮಿ ಗಿಫ್ಟ್, ಏನದು?
26 ಕೋಟಿ ರೂಪಾಯಿ ಬಂಗಲೆ ಖರೀದಿ ಮಾಡಿದ್ರೆ ಲ್ಯಾಂಬೋರ್ಗಿನಿ ಕಾರ್ ಫ್ರೀ
ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ ಈ ಹೊಸ ಆಫರ್
ಮಾರ್ಕೆಟಿಂಗ್ ಅನ್ನೋದೇ ಒಂದು ತಂತ್ರ. ಗ್ರಾಹಕರನ್ನು ಸೆಳೆಯಲು ಹಲವಾರು ಆಫರ್ಗಳನ್ನ ನೀಡಲಾಗುತ್ತದೆ. ಈಗ ಅದು ರಿಯಲ್ ಎಷ್ಟೇಟ್ ಉದ್ಯಮದೊಳಗೂ ಕೂಡ ಸಣ್ಣದಾಗಿ ಪ್ರವೇಶಿಕೆ ಪಡೆದಿದೆ. ಅದಕ್ಕೆ ನಿದರ್ಶನವೇ ನೋಯ್ಡ್ದಲ್ಲಿ ನೀಡಲಾಗಿರುವ ಒಂದು ಭರ್ಜರಿ ಆಫರ್. ಜಯ್ಪೀ ಗ್ರೀನ್ಸ್ ಎಂಬ ರಿಯಲ್ ಎಸ್ಟೇಟ್ ಡೆವಲಪರ್ಸ್ ತಾವು ನಿರ್ಮಿಸಿದ ಐಷಾರಾಮಿ ವಿಲ್ಲಾ ಖರೀದಿಸಿದವರಿಗೆ ಮತ್ತೊಂದು ಐಷಾರಾಮಿ ಉಡುಗೊರೆಯನ್ನು ಫ್ರೀಯಾಗಿ ನೀಡಲು ಸಜ್ಜಾಗಿದೆ ಆ ಐಷಾರಾಮಿ ಉಡುಗೊರೆ ಅಂದ್ರೆ ಬರೊಬ್ಬರಿ 4 ಕೋಟಿ ರೂಪಾಯಿ ಬೆಲೆ ಬಾಳುವ ಲ್ಯಾಂಬೊರ್ಗಿನಿ ಕಾರ್
ಇದನ್ನೂ ಓದಿ:Golden time: ಚಿನ್ನದ ಮೇಲಿನ ಹೂಡಿಕೆಯಿಂದ ಭಾರೀ ಲಾಭ; ತಜ್ಞರ ಸಲಹೆ ಏನು ಗೊತ್ತಾ?
ಗೌರವ್ ಗುಪ್ತಾ ಎಂಬುವವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಮಾಹಿತಿ ಈಗ ಎಲ್ಲೆಡೆ ಹರಿದಾಡುತ್ತಿದೆ. ಅವರು ಹೇಳುವ ಪ್ರಕಾರ ಜಯ್ಪೀ ಗ್ರೀನ್ಸ್ನ ಒಂದು ವಿಲ್ಲಾದ ಬೆಲೆ ಬರೋಬ್ಬರಿ 26 ಕೋಟಿ ರೂಪಾಯಿಗಳು. 26 ಕೋಟಿ ರೂಪಾಯಿಗಳನ್ನು ಕೊಟ್ಟು ಈ ವಿಲ್ಲಾ ಖರೀದಿಸಿದವರಿಗೆ 4 ಕೋಟಿ ರೂಪಾಯಿ ಬೆಲೆ ಬಾಳುವ ಲ್ಯಾಂಬೋರ್ಗಿನಿ ಕಾರ್ ಉಚಿತವಾಗಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಪ್ರತಿ ವಿಲ್ಲಾಗೂ ಒಂದೊಂದು ಲ್ಯಾಂಬೋರ್ಗಿನಿ ಕಾರ್ ಉಚಿತವಾಗಿ ನೀಡುವ ಆಫರ್ ಇದಾಗಿದೆ. 26 ಕೋಟಿರ ರೂಪಾಯಿಗೆ ವಿಲ್ಲಾ ಖರೀದಿ ಮಾಡಿದ ನಂತರವೂ ಕೂಡ ಹಲವು ಹೆಚ್ಚುವರಿ ಶುಲ್ಕವನ್ನು ಕೂಡ ಖರೀದಿದಾರರು ಕೊಡಬೇಕು ಪಾರ್ಕಿಂಗ್ ಶುಲ್ಕ 30 ಲಕ್ಷ, ಪವರ್ ಬ್ಯಾಕ್ಅಪ್ಗೆ 7.5 ಲಕ್ಷ ಹಾಗೂ ಕ್ಲಬ್ ಮೇಂಬರ್ಶಿಪ್ಗೆ 7.5 ಲಕ್ಷ ರೂಪಾಯಿ ಕೂಡ ಈ ಮನೆ ಖರೀದಿ ಮಾಡುವುದಕ್ಕೆ ನೀಡಬೇಕು ಎಂದು ಹೇಳಲಾಗಿದೆ.
ಇದನ್ನೂ ಓದಿ: VIDEO: ಕೇರಳ ಸಿಎಂ ಚಲಿಸುತ್ತಿದ್ದ ಕಾರಿಗೆ ಬೆಂಗಾವಲು ವಾಹನಗಳ ಡಿಕ್ಕಿ; ಭಯಾನಕ ದೃಶ್ಯ ಸೆರೆ!
ಸಾಮಾಜಿಕ ಜಾಲತಾಣಗಳಲ್ಲಿ ಈ ಒಂದು ಐಷಾರಾಮಿ ಆಫರ್ಗೆ ಮಿಶ್ರಿ ಪ್ರತಿಕ್ರಿಯೆಗಳು ಬರುತ್ತಿವೆ. ಒಂದೇ ರೀತಿಯ ವಿಲ್ಲಾ ಹಾಗೂ ಎಲ್ಲರ ಬಳಿ ಒಂದೆ ರೀತಿಯ ಕಾರ್ ಇರುವುದಾದ್ರೆ ನಿಜಕ್ಕೂ ಇದು ವಿಶೇಷವಾದದ್ದು ಅಂತ ಕೆಲವರು ಹೇಳಿದ್ರೆ. ಇನ್ನೂ ಕೆಲವರು ಕಾರ್ ರೇಟ್ ಸೇರಿಸಿಯೇ ವಿಲ್ಲಾದ ರೇಟ್ ಫಿಕ್ಸ್ ಮಾಡಲಾಗಿರುತ್ತದೆ ಎಂದು ಕೂಡ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ