ಶಾಸಕಾಂಗ ಸಭೆಯಲ್ಲಿ ಭಾಗವಹಿಸದೇ ಹೊರ ಬಂದಿದ್ದ ರಮೇಶ್ ಜಾರಕಿಹೋಳಿ
ಕೇಂದ್ರ ಬಿಜೆಪಿ ವೀಕ್ಷಕರ ಎದುರು ತಮ್ಮ ಅಭಿಪ್ರಾಯ ಹೇಳಿಕೊಂಡ ಮಾಜಿ ಸಚಿವ
ವೀಕ್ಷಕರ ಮುಂದೆ ವಿಜಯೇಂದ್ರ ನೇಮಕ ಬಗ್ಗೆ ಆಕ್ರೋಶ ಹೊರ ಹಾಕಿದ ರಮೇಶ್
ಬೆಳಗಾವಿ: ನೂತನ ಬಿಜೆಪಿ ರಾಜ್ಯ ಅಧ್ಯಕ್ಷರಾಗಿ ವಿಜಯೇಂದ್ರ ನೇಮಕ ಮಾಡಿದ ಹಿನ್ನೆಲೆಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಕೇಂದ್ರದಿಂದ ಆಗಮಿಸಿದ್ದ ಬಿಜೆಪಿ ವೀಕ್ಷಕರ ಮುಂದೆ ವಿಜಯೇಂದ್ರ ನೇಮಕದ ಕುರಿತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆಕ್ರೋಶವನ್ನು ಹೊರ ಹಾಕಿದ್ದಾರಂತೆ. ನಮಗಿಂತ ಕಿರಿಯ ವಯಸ್ಸಿನ ವಿಜಯೇಂದ್ರ ಕೆಳಗೆ ನಾವು ಕೆಲಸ ಮಾಡೋದು ಹೇಗೆ?. ಬಿಎಸ್ವೈಗೆ ರಾಜಾಧ್ಯಕ್ಷ ಸ್ಥಾನ ನೀಡಿದ್ದರೇ ಒಪ್ಪಿಕೊಳ್ಳುತ್ತಿದ್ದೇವು. ಆ ಸ್ಥಾನಕ್ಕೆ ಪಕ್ಷದಲ್ಲಿನ ಇತರೆ ಹಿರಿಯರನ್ನ ಪರಿಗಣಿಸಬೇಕಿತ್ತು. ನಮಗಿಂತ ಕಿರಿಯರ ಮುಂದೆ ನಾವು ಕೆಲಸ ಮಾಡುವುದು ಹೇಗೆ ಎಂದು ಸಾಹುಕಾರ ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ, ಪ್ರತಿಪಕ್ಷ ನಾಯಕನ ನೇಮಕ ವಿಚಾರವಾಗಿ ಮುನಿಸಿಕೊಂಡ ರಮೇಶ್ ಜಾರಕಿಹೊಳಿ ನಿನ್ನೆ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದೆ ಬಸನಗೌಡ ಪಾಟೀಲ್ ಯತ್ನಾಳ್ ಜೊತೆ ಹೊರಬಂದಿದ್ದರು. ಬಳಿಕ ಇಬ್ಬರು ಒಂದೇ ಕಾರಿನಲ್ಲಿ ವಾಪಸಾಗಿದ್ದರು. ಕೇಂದ್ರ ಬಿಜೆಪಿ ವೀಕ್ಷಕರ ಎದುರು ತಮ್ಮ ಅಭಿಪ್ರಾಯ ಹೇಳಿ ರಮೇಶ್ ಜಾರಕಿಹೋಳಿ ಹೊರ ಬಂದಿದ್ದರು.
ಬಿಜೆಪಿ ಶಾಸಕಾಂಗ ಸಭೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಗೈರು ಹಾಜರಾಗಿ ಗೋಕಾಕ್ನ ಎನ್ಎಸ್ಎಫ್ನಲ್ಲಿ ಇದ್ದಾರೆ. ವಿಜಯೇಂದ್ರ ಅವರು ಅಧ್ಯಕ್ಷರಾಗಿ ನೇಮಕವಾಗಿದ್ದರಿಂದ ಸ್ಥಳೀಯ ಕಾರ್ಯಕ್ರಮವೊಂದರ ನೆಪವೊಡ್ಡಿ ಬಾಲಚಂದ್ರ ಅವರು ಸಭೆಯಿಂದ ದೂರ ಉಳಿದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ