‘ಪಕ್ಷದಲ್ಲಿ ಹಿರಿಯರಿದ್ರೂ ಕಿರಿಯನಾದ ನನಗೆ ಅಧ್ಯಕ್ಷ ಸ್ಥಾನ ನೀಡಿದ್ದಾರೆ’
‘ನಾನು ನಮ್ಮ ಪಕ್ಷದ ಕಾರ್ಯಕರ್ತರಿಗೆ ಉತ್ತರದಾಯಿ ಆಗಿದ್ದೇನೆ’
ಪರೋಕ್ಷವಾಗಿ ತಮ್ಮ ಪಕ್ಷದಲ್ಲಿನ ವಿರೋಧಿಗಳಿಗೆ ವಿಜಯೇಂದ್ರ ಟಾಂಗ್!
ಬೆಂಗಳೂರು: ನಾನು ಯಾವುದೋ ನಾಯಕರ ಮೆಚ್ಚಿಸಲು, ಅವರಿಗೆ ಸಹಾಯ ಮಾಡಲು ರಾಜ್ಯಾಧ್ಯಕ್ಷ ಆಗಿಲ್ಲ. ನಿಮ್ಮೆಲ್ಲರ ಪರಿಶ್ರಮ ಇದ್ದರೆ ಮಾತ್ರ ಪಕ್ಷದ ಬಲವರ್ಧನೆ ಸಾಧ್ಯ ಅನ್ನೋ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸ್ವಪಕ್ಷದಲ್ಲಿನ ವಿರೋಧಿಗಳಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ನಿಮ್ಮೆಲ್ಲರ ಪರಿಶ್ರಮ ಇದ್ದರೆ ಮಾತ್ರ ಪಕ್ಷದ ಬಲವರ್ಧನೆ
ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನದ ಪರಿಶೀಲನಾ ಸಭೆ ನಡೆಯಿತು. ಈ ವೇಳೆ ಮಾತನಾಡಿರುವ ವಿಜಯೇಂದ್ರ, ಇಲ್ಲಿರುವ ಕಾರ್ಯಕರ್ತರಿಗೆ ನಾನು ಹೇಳಲು ಬಯಸೋದು ಏನೆಂದರೆ ಪಕ್ಷ ಸಂಘಟನೆಗಾಗಿ ದಿನಕ್ಕೆ ಎರಡು ಗಂಟೆಯಾದ್ರೂ ಮೀಸಲು ಇಡಿ. ನಿಮ್ಮ ನಿಮ್ಮ ಬೂತ್ ಮಟ್ಟದಲ್ಲಿ ನಿತ್ಯ ಸದಸ್ಯತ್ವ ಅಭಿಯಾನ ಕೈಗೊಳ್ಳಿ. ನಾವು ನಿತ್ಯ ಕೆಲಸ ಮಾಡಿದಾಗ ಮಾತ್ರ ನಿರ್ದಿಷ್ಟ ಗುರಿ ತಲುಪಲು ಸಾಧ್ಯ. ಯಡಿಯೂರಪ್ಪ ಅವರು ಕೇಂದ್ರದ ಮಂತ್ರಿ ಸ್ಥಾನದ ಆಫರ್ ತ್ಯಜಿಸಿ ಪಕ್ಷಕ್ಕಾಗಿ ತನು-ಮನ ಧನ-ಸಹಾಯ ಮಾಡಿದ್ದಾರೆ. ಪಕ್ಷದಲ್ಲಿ ಎಲ್ಲಾ ಹಿರಿಯರಿದ್ರೂ ಕಿರಿಯನಾದ ನನಗೆ ಅಧ್ಯಕ್ಷ ಸ್ಥಾನವನ್ನು ವರಿಷ್ಠರು ನೀಡಿದ್ದಾರೆ. ನಾನು ಪಕ್ಷದ ಕಾರ್ಯಕರ್ತರಿಗೆ ಉತ್ತರದಾಯಿ ಆಗಿದ್ದೇನೆ. ನಾನು ಯಾವುದೋ ನಾಯಕರ ಮೆಚ್ಚಿಸಲು, ಅವರಿಗೆ ಸಹಾಯ ಮಾಡಲು ರಾಜ್ಯಾಧ್ಯಕ್ಷ ಆಗಿಲ್ಲ. ನಿಮ್ಮೆಲ್ಲರ ಪರಿಶ್ರಮ ಇದ್ದರೆ ಮಾತ್ರ ಪಕ್ಷದ ಬಲವರ್ಧನೆ ಸಾಧ್ಯ ಎಂದಿದ್ದಾರೆ.
ಇದನ್ನೂ ಓದಿ:ಹಿಂದೂ ಧಾರ್ಮಿಕ ಆಚಾರ, ವಿಚಾರಗಳ ದಮನಕ್ಕೆ ಷಡ್ಯಂತ್ರ ನಡೀತಿದೆ -ರಾಜ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ವಾಗ್ದಾಳಿ
ಸದಸ್ಯತ್ವ ಅಭಿಯಾನದ ಅಂಕಿ-ಸಂಖ್ಯೆ ನೋಡಿದಾಗ ನನಗೆ ಸ್ವಲ್ಪ ಗಾಬರಿ ಆಗುತ್ತಿದೆ. ಕಾರ್ಯಕರ್ತರಲ್ಲಿ ಉತ್ಸಾಹದ ಕೊರತೆ ಎದ್ದು ಕಾಣ್ತಿದೆ. ಸದಸ್ಯತ್ವ ಅಭಿಯಾನ ಸ್ವಲ್ಪ ಮಂದಗತಿಯಲ್ಲಿ ಇರುವುದು ಕಾಣ್ತಿದೆ. ಸದಸ್ಯತ್ವ ಮಂದಗತಿಯಲ್ಲಿ ಹೋಗ್ತಿದೆ ಎಂದರೆ ಅದಕ್ಕೆ ಕಾರಣ ಬಿಜೆಪಿ ಶಾಸಕರು ಹಾಗೂ ಬಿಜೆಪಿ ಮುಖಂಡರು. ನಮ್ಮ ಯಡಿಯೂರಪ್ಪ ಸಿಎಂ ಇದ್ದಾಗಲೇ ಬಿಬಿಎಂಪಿ ಚುನಾವಣೆ ಮಾಡಬೇಕಿತ್ತು. ಆದರೆ ಚುನಾವಣೆ ಮಾಡಲು ಅವಕಾಶ ಕೊಡಲಿಲ್ಲ ಅಂತಾ ಬೇಸರ ವ್ಯಕ್ತಪಡಿಸಿದರು.
ಅಧಿಕಾರದ ಸ್ಥಾನಮಾನ ಯಾವತ್ತೂ ಶಾಸ್ವತ ಅಲ್ಲ
ನನ್ನ ಶಾಸಕ, ನನ್ನ ಮಂತ್ರಿ ಅಧಿಕಾರ ಸಿಕ್ಕಾಗ ಹೇಗೆ ನಡೆದುಕೊಂಡಿದ್ದಾರೆ ಅಂತಾನೂ ಕಾರ್ಯಕರ್ತರು ನೋಡ್ತಾರೆ. ಖಂಡಿತ ನನಗೆ ಯಡಿಯೂರಪ್ಪ ಬಲ ಇದೆ ಎಂಬ ಹೆಮ್ಮೆ ಇದೆ. ಯಡಿಯೂರಪ್ಪ, ಅನಂತ್ ಕುಮಾರ್, ರಾಮಚಂದ್ರೇಗೌಡ ಅವರ ಶಕ್ತಿ ಇನ್ನೂ ಪಕ್ಷಕ್ಕೆ ಇದೆ. ಯಡಿಯೂರಪ್ಪ ಸೋತಾಗ ಕಥೆಯೇ ಮುಗಿಯಿತು ಅಂತ ಬಹಳಷ್ಟು ಜನ ಹೇಳ್ತಿದ್ದರು. ಯಡಿಯೂರಪ್ಪ ಅಧಿಕಾರದ ಹಿಂದೆ ಓಡಿ ಹೋಗಿದ್ದಾರೆ ಅಂತ ಹೇಳ್ತಿದ್ದರು. ಅಧಿಕಾರದ ಸ್ಥಾನಮಾನ ಯಾವತ್ತೂ ಶಾಸ್ವತ ಅಲ್ಲ. ಕಾರ್ಯಕರ್ತರ ಹುದ್ದೆಯ ನಮಗೆ ಶಾಶ್ವತ. ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಗೆಲ್ಲಬೇಕು ಅಂದರೆ ಸದಸ್ಯತ್ವ ಅಭಿಯಾನದಲ್ಲಿ ಮೆಂಬರ್ಗಳನ್ನು ಸೇರಿಸಬೇಕು. ಪಕ್ಷದಲ್ಲಿ ಕಾರ್ಯಕರ್ತರಿಗೆ ಅವಕಾಶ ಸಿಗಬೇಕು, ಹಣ ಒಂದೇ ಚುನಾವಣೆಯ ಮಾನದಂಡ ಆಗಬಾರದು. ಪ್ರಾಮಾಣಿಕವಾಗಿ ದುಡಿದವರ ಗುರುತಿಸುವ ಕೆಲಸ ಆಗಬೇಕು ಎಂದರು.
ಇದನ್ನೂ ಓದಿ:ಗವರ್ನರ್‌ಗೆ ಸಿಎಂ ಠಕ್ಕರ್; ಕುಲಪತಿಗಳ ನೇಮಕ ಮಾಡುವ ಅಧಿಕಾರವನ್ನೇ ಕಸಿದುಕೊಂಡ ಸಿದ್ದರಾಮಯ್ಯ..!
ನರೇಂದ್ರ ಮೋದಿ ಹೆಸರು ಹೇಳಿದಾಗ ಘೋಷಣೆ ಕೂಗ್ತೀವಿ. ಜೈ ಶ್ರೀರಾಮ್ ಎಂದು ಕೂಗಿದಾಗ ಎಲ್ಲರೂ ಜೋರಾಗಿ ಕೂಗಿದ್ವಿ. ಆದರೆ ನಮ್ಮ ಮನಸ್ಸಿನಲ್ಲಿರುವ ಭಾವನೆ ಬದಲಾಗಬೇಕು. ಆ ಭಾವನೆ ಹೇಗೆ ವ್ಯಕ್ತ ಆಗಬೇಕು ಎಂದರೆ ಪಕ್ಷ ಕೊಟ್ಟಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದಾಗ ಮಾತ್ರ. ಸದಸ್ಯತ್ವ ಅಭಿಯಾನದಲ್ಲಿ ಪಕ್ಷದ ಮುಖಂಡರು ಕೂಡ ಭಾಗಿ ಆಗಬೇಕು. ಮುಖಂಡರು ಫೋನ್ ಮೂಲಕ ಮಾತನಾಡಿ, ಭಾಷಣ ಮಾಡೋದು ಸದಸ್ಯತ್ವ ಅಭಿಯಾನ ಅಲ್ಲ. ನಾವು ಎಷ್ಟು ಮನೆಗೆ ಹೋಗಿದ್ದೇವೆ ಅನ್ನೋದು ಮುಖ್ಯ ಅಂತಾ ಕಿವಿ ಮಾತು ಹೇಳಿದ್ದಾರೆ.
ಜಿಲ್ಲಾ ಅಧ್ಯಕ್ಷ ಹಾಗೂ ಜಯನಗರ ಶಾಸಕ ಸಿ.ಕೆ ರಾಮಮೂರ್ತಿ ನೇತೃತ್ವದಲ್ಲಿ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ, ಶಾಸಕರಾದ ರವಿ ಸುಬ್ರಹ್ಮಣ್ಯ, ಕೃಷ್ಣಪ್ಪ, ಎನ್ ರವಿಕುಮಾರ್, ನಟಿ ತಾರಾ ಅನುರಾಧಾ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯ ಪದಾಧಿಕಾರಿಗಳು ಭಾಗಿಯಾಗಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ