newsfirstkannada.com

ಕರ್ನಾಟಕಕ್ಕಿಂತಲೂ ಕಾಂಗ್ರೆಸ್ಸಿಗೆ ಹೊರ ರಾಜ್ಯದ ಮೇಲೆ ಹೆಚ್ಚು ಪ್ರೀತಿ- ಬಿಜೆಪಿ ಶಾಸಕ ವಿಜಯೇಂದ್ರ ಕಿಡಿ

Share :

18-06-2023

    ರಾಗಿ, ಗೋಧಿ, ಅಕ್ಕಿ ಮತ್ತಿತರ ಅಗತ್ಯ ವಸ್ತುಗಳನ್ನು ರೈತರಿಂದಲೇ ಖರೀದಿಸಬೇಕು

    ಕೊಟ್ಟ ಮಾತಿನಂತೆ ಕಾಂಗ್ರೆಸ್​​​ ಪ್ರತಿಯೊಬ್ಬ ವ್ಯಕ್ತಿಗೂ 10 ಕೆಜಿ ಅಕ್ಕಿ ನೀಡಬೇಕು..!

    ಯಾವುದೇ ಕಾರಣಕ್ಕೂ ಡೈವರ್ಟ್​ ಮಾಡಬಾರದು ಎಂದು BY ವಿಜಯೇಂದ್ರ ಕಿಡಿ

ಶಿವಮೊಗ್ಗ: ಕರ್ನಾಟಕಕ್ಕಿಂತಲೂ ಕಾಂಗ್ರೆಸ್ಸಿಗೆ ಹೊರ ರಾಜ್ಯದ ಮೇಲೆಯೇ ಹೆಚ್ಚು ಪ್ರೀತಿ ಎಂದು ಬಿಎಸ್​​ ಯಡಿಯೂರಪ್ಪ ಪುತ್ರ ಬಿಜೆಪಿ ಶಾಸಕ ಬಿ.ವೈ ವಿಜಯೇಂದ್ರ ಕೆಂಡಕಾರಿದ್ದಾರೆ.

ಇನ್ನು ಈ ಕುರಿತು ಸುದ್ದಿಗಾರರೊಂದಿಗೆ ಮಾತಾಡಿದ ಶಾಸಕ ಬಿ.ವೈ ವಿಜಯೇಂದ್ರ, ಕಾಂಗ್ರೆಸ್‌ ಚುನಾವಣೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ 10 ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿತ್ತು. ಈಗ ಕೇಂದ್ರ ನೀಡುವ 5 ಕೆಜಿಯೊಂದಿಗೆ 5 ಕೆಜಿ ಸೇರಿಸಿ ಒಟ್ಟು ಹತ್ತು ಕೆಜಿ ಕೊಡುವುದಾಗಿ ಹೇಳುತ್ತಿದೆ. ಚುನಾವಣೆ ಸಂದರ್ಭದಲ್ಲಿ ಹೇಳಿದಂತೆ ಕಾಂಗ್ರೆಸ್​ ಸರ್ಕಾರ 10 ಕೆಜಿ ಕೊಟ್ಟರೆ, ಕೇಂದ್ರದ 5 ಮತ್ತು ರಾಜ್ಯದ 10 ಒಟ್ಟು 15 ಕೆಜಿ ನೀಡಬೇಕು ಎಂದರು. ಹಾಗೆಯೇ ರಾಗಿ, ಗೋಧಿ, ಅಕ್ಕಿ ಮತ್ತಿತರ ಅಗತ್ಯ ವಸ್ತುಗಳನ್ನು ರೈತರಿಂದಲೇ ಖರೀದಿಸಬೇಕು ಎಂದು ಆಗ್ರಹಿಸಿದರು.

ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಭರವಸೆ ಈಡೇರಿಸುವುದಾಗಿ ಕಾಂಗ್ರೆಸ್‌ ಹೇಳಿತ್ತು. ಆದರೆ ಪಠ್ಯ ಪರಿಷ್ಕರಣೆ, ಮತಾಂತರ ಕಾಯ್ದೆ ವಾಪಸ್​​ ಸೇರಿ ಹತ್ತಾರು ವಿಷಯಗಳ ಮೂಲಕ ಜನರ ಗಮನ ಬೇರೆಡೆಗೆ ಸೆಳೆಯುತ್ತಿದೆ. ಲೋಕಸಭಾ ಚುನಾವಣೆಯಾಗಲೀ, ಕಾಂಗ್ರೆಸ್​ 20 ಸೀಟ್​ ಗೆಲ್ಲಲಿ. ಅದಾದ ಮೇಲೆ ನೋಡಿ ಸರ್ಕಾರದ ಪರಿಸ್ಥಿತಿ ಏನಾಗುತ್ತದೆ ಎಂದು ಶಾಸಕ ಬಿ.ವೈ ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕರ್ನಾಟಕಕ್ಕಿಂತಲೂ ಕಾಂಗ್ರೆಸ್ಸಿಗೆ ಹೊರ ರಾಜ್ಯದ ಮೇಲೆ ಹೆಚ್ಚು ಪ್ರೀತಿ- ಬಿಜೆಪಿ ಶಾಸಕ ವಿಜಯೇಂದ್ರ ಕಿಡಿ

https://newsfirstlive.com/wp-content/uploads/2023/06/bs-vijayendra-2.jpg

Load More