newsfirstkannada.com

‘ಅವರು ಕೊತ್ವಾಲ್ ರಾಮಚಂದ್ರನ ಶಿಷ್ಯ, ಎಲ್ಲರಿಗೂ ಟ್ರೀಟ್ಮೆಂಟ್ ಕೊಡ್ತಾರೆ’ ಡಿಕೆಶಿ ಹೇಳಿಕೆಗೆ ಸಿ.ಟಿ ರವಿ ತಿರುಗೇಟು

Share :

15-08-2023

  ನನ್ನ ಟಾರ್ಗೆಟ್ ಮಾಡಿ ಸಿಎಂ ಆಗಕ್ಕೆ ಆಗಲ್ಲ

  ನಾನು ಸೋತಿರುವ ಸಾಮಾನ್ಯ ಕಾರ್ಯಕರ್ತ

  ಅಧಿಕಾರ ಮದ ನಿರ್ಮಾಣ ಮಾಡುತ್ತೆ ಎಂದ ಸಿ.ಟಿ ರವಿ

ಚಿಕ್ಕಮಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್​​ ಅವರು ಸಿ.ಟಿ ರವಿಗೆ ಟ್ರೀಟ್ಮೆಂಟ್ ಅಗತ್ಯವಿದೆ ಎಂದು ಹೇಳಿದ್ದರು. ಈ ಹೇಳಿಯ ಮುನ್ನೆಲೆಯಾಗಿ ಚಿಕ್ಕಮಗಳೂರಿನಲ್ಲಿ ಮಾಜಿ ಶಾಸಕ ಸಿ.ಟಿ ರವಿ ಪ್ರತಿಕ್ರಿಯಿಸಿದ್ದಾರೆ. ನಾನು ಸಂಘದ ಸ್ವಯಂ ಸೇವಕ, ಅವರು ಕೊತ್ವಾಲ್ ರಾಮಚಂದ್ರನ ಶಿಷ್ಯ. ಅವರು ಎಲ್ಲರಿಗೂ ಟ್ರೀಟ್ಮೆಂಟ್ ಕೊಡ್ತಾರೆ ಎಂದು ಹೇಳಿದ್ದಾರೆ.

ಕೊತ್ವಾಲ್ ಮಾದರಿ ಟ್ರೀಟ್ಮೆಂಟ್ ಅಂತ ನನಗೆ ಭಯ

ನಂತರ ಮಾತು ಮುಂದುವರಿಸಿದ ಸಿ.ಟಿ ರವಿಯವರು, ಡಿಕೆಶಿಯವರದ್ದು ಕೊತ್ವಾಲ್ ಮಾದರಿ ಟ್ರೀಟ್ಮೆಂಟ್ ಅಂತ ನನಗೆ ಭಯ. ಅದಕ್ಕಾಗಿ ರಕ್ಷಣೆಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡ್ತೀನಿ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ, ಅವರು ದೇಶದ ಶ್ರೀಮಂತ ಶಾಸಕ. ಅವರ ಬಳಿ ಬೆಂಗಳೂರು ಅಭಿವೃದ್ಧಿ, ಉಸ್ತುವಾರಿ, ನೀರಾವರಿ ಎಲ್ಲಾ ಇದೆ. ನಾನು ಸೋತಿದ್ದೀನಿ, ಅವರು ಗೆದ್ದಿದ್ದಾರೆ, ಅಧಿಕಾರ ಮದ ನಿರ್ಮಾಣ ಮಾಡುತ್ತೆ. ಬಹುಶಃ, ಅಧಿಕಾರದ ಅಹಂ ಭಾವದಲ್ಲಿ ಎಲ್ಲರಿಗೂ ಟ್ರೀಟ್ಮೆಂಟ್ ಕೊಡುವ ಹುಮ್ಮಸ್ಸು ಬಂದಿರ್ಬೋದು. ಆ ಹುಮ್ಮಸ್ಸಿನಿಂದಲೇ ನನಗೂ ಟ್ರೀಟ್ಮೆಂಟ್ ಬಗ್ಗೆ ಮಾತನಾಡ್ತಿದ್ದಾರೆ ಎಮದು ಹೇಳಿದ್ದಾರೆ.

ನನ್ನ ಟಾರ್ಗೆಟ್ ಮಾಡಿ ಸಿಎಂ ಆಗಕ್ಕೆ ಆಗಲ್ಲ

ಬಳಿಕ, ನಾನು ಸೋತಿರುವ ಸಾಮಾನ್ಯ ಕಾರ್ಯಕರ್ತ, ನನ್ನ ಟಾರ್ಗೆಟ್ ಮಾಡಿ ಸಿಎಂ ಆಗಕ್ಕೆ ಆಗಲ್ಲ. ನೀವು ಸಿಎಂ ಆಗಕ್ಕೆ ಬೇರೆಯವರನ್ನ ಟಾರ್ಗೆಟ್ ಮಾಡ್ಬೇಕು, ನನ್ನ ಏಕೆ ಮಾಡ್ತೀರಾ ಎಂದು ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಅವರು ಕೊತ್ವಾಲ್ ರಾಮಚಂದ್ರನ ಶಿಷ್ಯ, ಎಲ್ಲರಿಗೂ ಟ್ರೀಟ್ಮೆಂಟ್ ಕೊಡ್ತಾರೆ’ ಡಿಕೆಶಿ ಹೇಳಿಕೆಗೆ ಸಿ.ಟಿ ರವಿ ತಿರುಗೇಟು

https://newsfirstlive.com/wp-content/uploads/2023/08/CT-ravi-2.jpg

Load More