ಸಿ-ವೋಟರ್ ಚುನಾವಣಾ ಪೂರ್ವ ಸಮೀಕ್ಷೆ ಬಹಿರಂಗ
ಮೋದಿ ಸರ್ಕಾರಕ್ಕೆ ಹ್ಯಾಟ್ರಿಕ್ ಗೆಲುವಿನ ಭವಿಷ್ಯ, ಆದರೆ
ಕರ್ನಾಟಕದಲ್ಲಿ ಕೇಸರಿ ಪಡೆಯ ಬಲ ಕಡಿಮೆ ಆಗುವ ಲೆಕ್ಕ
2024ರ ಲೋಕಸಭಾ ಚುನಾವಣೆಗೆ ಕೇವಲ 8 ತಿಂಗಳು ಬಾಕಿ ಉಳಿದಿದೆ. ಪ್ರಧಾನಿ ಮೋದಿ ಸಾರಥ್ಯದ ಎನ್‌ಡಿಎ ಮತ್ತೊಮ್ಮೆ ಗೆಲುವು ಸಾಧಿಸಿ ಹ್ಯಾಟ್ರಿಕ್ ಜಯದ ಸಾಧನೆ ಮಾಡುವ ರಣೋತ್ಸಹದಲ್ಲಿದೆ. ಇತ್ತ, ವಿರೋಧ ಪಕ್ಷಗಳು ಕೂಟ ಕೂಡ ತಯಾರಿ ನಡೆಸುತ್ತಿವೆ. ನಾವೂ ಯಾರಿಗೂ ಕಮ್ಮಿ ಇಲ್ಲ ಎಂಬಂತೆ ದೋಸ್ತಿ ಪಕ್ಷಗಳ ಬಲದೊಂದಿಗೆ ತಂತ್ರಗಾರಿಕೆಯಲ್ಲಿ ತೊಡಗಿದೆ. ಈ ಹೊತ್ತಲ್ಲಿ ಸಿ-ವೋಟರ್ ನಡೆಸಿದ ಸಮೀಕ್ಷೆ ಹೊರಬಿದ್ದಿದ್ದು, ದೇಶದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ್ ಅನ್ನೋ ಭವಿಷ್ಯ ನುಡಿದಿದೆ.
ಮೋದಿ ಸರ್ಕಾರಕ್ಕೆ ಹ್ಯಾಟ್ರಿಕ್ ಗೆಲುವಿನ ಭವಿಷ್ಯ
2024ರ ಚುನಾವಣೆಯಲ್ಲೂ ಮತ್ತೊಂದು ಅವಧಿಗೆ ಎನ್‌ಡಿಎ ಅಭೂತಪೂರ್ವ ಗೆಲುವು ಸಾಧಿಸಲಿದೆ ಎಂದು ಸಿ-ವೋಟರ್ ಸಮೀಕ್ಷೆ ಭವಿಷ್ಯ ನುಡಿದಿದೆ. ಮೋದಿ ಸರ್ಕಾರಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ರೂ, ಕಮಲ ಪಡೆಗೆ ಈ ಸಮೀಕ್ಷೆಯಿಂದ ಎಚ್ಚರಿಕೆ ಸಂದೇಶವೂ ರವಾನೆಯಾಗಿದೆ.
ಸಿ ವೋಟರ್ ಸಮೀಕ್ಷೆ
ಪಕ್ಷವಾರು ಸ್ಥಾನಗಳ ಲೆಕ್ಕಾಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಗೆ ಎಷ್ಟು ಸ್ಥಾನಗಳ ಸಿಗಬಹುದು ಅನ್ನೋ ವಿವರ ಇಲ್ಲಿದೆ. ಬಿಜೆಪಿ ಪಕ್ಷವು 2019ರ ಲೋಕಸಭೆ ಚುನಾವಣೆಯಲ್ಲಿ 303 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು. ಆದ್ರೆ, 2024ರ ಚುನಾವಣಾಪೂರ್ವ ಸಮೀಕ್ಷೆ ನೋಡಿದ್ರೆ, 287 ಸ್ಥಾನಗಳಿಗೆ ತೃಪ್ತಿ ಪಟ್ಟಿಕೊಳ್ಳಬಹುದು. ಅದೇ ರೀತಿ ಕಾಂಗ್ರೆಸ್ 2019ರ ಚುನಾವಣೆಯಲ್ಲಿ ಬರೀ 52 ಸೀಟಿಗೆ ಮಾತ್ರ ತೃಪ್ತಿ ಪಟ್ಟಿಕೊಂಡಿತ್ತು. 2024ರ ಚುನಾವಣೆಯಲ್ಲಿ 74 ಸ್ಥಾನಗಳು ಕಾಂಗ್ರೆಸ್ಗೆ ತೆಕ್ಕೆಗೆ ಬೀಳಬಹುದು ಎಂದು ಅಂದಾಜಿಸಲಾಗಿದೆ. 2019ಕ್ಕಿಂತ 2024ರ ಚುನಾವಣೆಯಲ್ಲಿ ಕೇಸರಿ ಪಡೆ ತನ್ನ ಬಲವನ್ನು ಸ್ವಲ್ಪ ಕಳೆದುಕೊಳ್ಳಬಹುದು.. ಕೈ ಬಲ ಹೆಚ್ಚಾಗಬಹುದು ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಬ್ಬರಿಸಿತ್ತು. ಮೋದಿ ಅಲೆಯಲ್ಲಿ ತೇಲಿ ಹೋಗಿದ್ದ ಕರ್ನಾಟಕದಲ್ಲಿ ಕಮಲದ ಸುನಾಮಿ ವ್ಯಾಪಿಸಿತ್ತು. ರಾಜ್ಯದ ಒಟ್ಟು 28 ಲೋಕಸಭಾ ಕ್ಷೇತ್ರಗಳ ಪೈಕಿ ಬರೋಬ್ಬರಿ 25 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ ಕೇವಲ ಒಂದು ಸ್ಥಾನಕ್ಕೆ ಸೀಮಿತ ವಾಗಿತ್ತು. ಈ ಬಾರಿ ಗ್ಯಾರೆಂಟಿ ಎಫೆಕ್ಟ್ನಿಂದ ರಾಜ್ಯದಲ್ಲಿ ಪರಿಸ್ಥಿತಿ ಭಿನ್ನವಾಗುವಂತೆ ಕಂಡು ಬರ್ತಿದೆ.
ಸಿ ವೋಟರ್ ಸಮೀಕ್ಷೆ
2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನಗಳಲ್ಲಿ ಅರಳಿತ್ತು. 2024ರ ಚುನಾವಣೆಗೆ 2 ಸ್ಥಾನ ಕಳೆದುಕೊಳ್ಳಬಹುದು ಅಂದ್ರೆ, 23 ಸ್ಥಾನ ಸಿಗಬಹುದು ಎಂದು ಸಮೀಕ್ಷೆ ಹೇಳುತ್ತಿದೆ. ಕಾಂಗ್ರೆಸ್ ಲಾಭ ಗ್ಯಾರೆಂಟಿ ಅನ್ನೋ ಸುಳಿವು ಸಿಕ್ಕಿದೆ. 2019ರ ಚುನಾವಣೆಯಲ್ಲಿ ಕೇವಲ 1 ಕ್ಷೇತ್ರ ಗೆದ್ದಿದ್ದ ಕಾಂಗ್ರೆಸ್, 2024ರ ಚುನಾವಣೆಯಲ್ಲಿ 05 ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಇನ್ನು 2019ರಲ್ಲಿ 1 ಕ್ಷೇತ್ರದ ಗೆದ್ದಿ ಜೆಡಿಎಸ್, 2024ರ ಚುನಾವಣೆಯಲ್ಲಿ ಅದನ್ನು ಕಳೆದುಕೊಳ್ಳುವ ಲಕ್ಷಣಗಳು ಇವೆ ಎನ್ನಲಾಗ್ತಿದೆ.
ವೋಟು ಗಳಿಕೆಯ ಶೇಕಡಾವಾರು ಅಂಕಿ ಅಂಶ ಗಮನಸಿದ್ರೆ ಎನ್‌ಡಿಎ ಮತ ಗಳಿಕೆ ಶೇ. 43ಕ್ಕೆ ಸೀಮಿತ ಆಗುವ ಸಂಭವ ಇದೆ. ಇಂಡಿಯಾ ಮೈತ್ರಿ ಕೂಟದ ಮತ ಗಳಿಕೆ ಶೇ. 41ಕ್ಕೆ ಏರಿಕೆ ಆಗುವ ಸಾಧ್ಯತೆ ಇದೆ. ಅದೇನೆ ಇರಲಿ, ಲೋಕಸಭೆ ಚುನಾವಣೆಗೆ ಇನ್ನು ಏಳೆಂಟು ತಿಂಗಳು ಕಾಲಾವಕಾಶ ಇದೆ. ಅಷ್ಟರಲ್ಲಿ ಸಮೀಕ್ಷೆಗಳ ಲೆಕ್ಕಾಚಾರವೆಲ್ಲ ತಲೆಕೆಳಗಾಗಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ