ಸಣ್ಣ ತಪ್ಪಿಗೆ ಕ್ಯಾಬ್ ಡ್ರೈವರ್ ರಸ್ತೆಯಲ್ಲಿ ಹುಚ್ಚಾಟ
ಸ್ಥಳೀಯ ಜನರಿಂದ ಮಹಿಳೆಯ ರಕ್ಷಣೆ
ಬೆಳ್ಳಂದೂರು ಠಾಣೆಯ ವ್ಯಾಪ್ತಿಯಲ್ಲಿ ಘಟನೆ
ಬೆಂಗಳೂರಿನ ಬೋಗನಹಳ್ಳಿಯಲ್ಲಿ ಉಬರ್ ಚಾಲಕನೊಬ್ಬ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾನೆ. ಮಗನನ್ನು ಆಸ್ಪತ್ರೆಗೆ ಕರೆದೊಯ್ಯಲು ಮಹಿಳೆ ಕ್ಯಾಬ್ ಬುಕ್ ಮಾಡಿದ್ದರು.
ಮಹಿಳೆ ಬುಕ್ ಮಾಡಿದ್ದ ಸ್ಥಳಕ್ಕೆ ಮತ್ತೊಂದು ಕ್ಯಾಬ್ ಬಂದಿತ್ತು. ಅಂತೆಯೇ ಕ್ಯಾಬ್ ಹತ್ತಿ ಮಹಿಳೆ ಮತ್ತು ಮಗ…ಕೂತಿದ್ದರು. ಕೊನೆಗೆ ತಾವು ಹತ್ತಿರುವ ಕ್ಯಾಬ್ ಅಲ್ಲ ಎಂದು ಗೊತ್ತಾಗಿ ಇಳಿಯಲು ಮುಂದಾಗಿದ್ದಾರೆ. ಈ ವೇಳೆ ಕಾರು ಚಲಾಯಿಸಲು ಚಾಲಕ ಮುಂದಾಗಿದ್ದಾನೆ.
ನಂತರ ಕ್ಯಾಬ್ ಡ್ರೈವರ್ ಬಳಿ ಮಹಿಳೆ ರಿಕ್ವೆಸ್ಟ್ ಮಾಡಿಕೊಂಡಿದ್ದಾಳೆ, ಕನ್ಫ್ಯೂಸ್ ಆಗಿದೆ. ಕಾರನ್ನು ನಿಲ್ಲಿಸಿ ಎಂದು ಕೇಳಿಕೊಂಡಿದ್ದಾಳೆ. ಇದರಿಂದ ಕೋಪಿಸಿಕೊಂಡ ಕ್ಯಾಬ್ ಡ್ರೈವರ್, ನಡು ರಸ್ತೆಯಲ್ಲಿ ಕಾರು ನಿಲ್ಲಿಸಿ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ.
ಏಕಾಏಕಿ ಮಹಿಳೆ ತಲೆಗೆ ಹೊಡೆಯಲು ಚಾಲಕ ಮುಂದಾಗಿದ್ದಾನೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಮಾತ್ರವಲ್ಲ, ಬೆಳ್ಳಂದೂರು ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ