newsfirstkannada.com

ಈ ವಾರದ ಕಿಚ್ಚನ ಚಪ್ಪಾಳೆ ಡ್ರೋನ್​​​​ಗೆ ಸಿಗುತ್ತಾ; ಪ್ರತಾಪ್​ ಕಿಲಾಡಿ ಆಟಕ್ಕೆ ಸಿಗುತ್ತಾ ಮನ್ನಣೆ?

Share :

10-11-2023

    ಬಿಗ್​ಬಾಸ್​ ಮನೆಯಲ್ಲಿ ಯಾವಾಗ ಏನು ಬೇಕಾದರೂ ಬದಲಾಗಬಹುದು!

    ಬಿಗ್​ಬಾಸ್ ಮನೆಯಲ್ಲಿ ಮತ್ತೊಮ್ಮೆ ಕಮಾಲ್​ ಮಾಡಿದ ಡ್ರೋನ್ ಪ್ರತಾಪ್​​

    ಡ್ರೋನ್​ ಪ್ರತಾಪ್ ನಾಯಕತ್ವಕ್ಕೆ ಮನಸೋತ ಕರ್ನಾಟಕದ ಜನತೆ, ಏನಂದ್ರು?

ಸಾಮಾಜಿಕ ಜಾಲತಾಣದಲ್ಲಿ ಡ್ರೋನ್​ ಪ್ರತಾಪ್​ ಪರ ಅಭಿಯಾನವೊಂದು ಶುರುವಾಗಿದೆ. ಈ ವಾರದ ಕಿಚ್ಚನ ಚಪ್ಪಾಳೆ ಪ್ರತಾಪ್​ಗೆ ಸಿಗಬೇಕು ಎಂದು ಅಭಿಮಾನಿಗಳು ಕಾಮೆಂಟ್​ ಮಾಡುತ್ತಿದ್ದಾರೆ. ಹೌದು ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​ಬಾಸ್​ಗೆ ಡ್ರೋನ್​ ಪ್ರತಾಪ್​​ ಎಂಟ್ರಿ ಕೊಟ್ಟಿದ್ದರು. ಬಿಗ್​​ಬಾಸ್​ ಸೀಸನ್​​ 10ಕ್ಕೆ ಎಂಟ್ರಿ ಕೊಟ್ಟು ಈಗ ಐದನೇ ವಾರ ಕಾಲಿಟ್ಟಿದ್ದಾರೆ.

ಬಿಗ್​ಬಾಸ್​ ಮನೆಯಲ್ಲಿ ಯಾವಾಗ ಏನು ಬೇಕಾದರೂ ಬದಲಾಗಬಹುದು ಅನ್ನೋದಕ್ಕೆ ಬೆಸ್ಟ್ ಎಕ್ಸಾಂಪಲ್​ ಅಂದರೆ ಅದು ಡ್ರೋನ್​ ಪ್ರತಾಪ್.​ ಹಲವು ವಿಚಾರಗಳಿಗೆ ಡ್ರೋನ್​ ಪ್ರತಾಪ್​ ಅವರ ಹೆಸರು ಸದ್ದು ಮಾಡಿತ್ತಿತ್ತು. ಇಂದಿಗೂ ಸಹ ಎಲ್ಲಿ ನೋಡಿದರು ಪ್ರತಾಪ್​ ಬಗ್ಗೆಯೇ ಮಾತುಕತೆ. ಡ್ರೋನ್​ ವಿಷಯವಾಗಿ ಸಾಧನೆಯ ಕನಸು ಕಂಡಿದ್ದ ಪ್ರತಾಪ್​ಗೆ ನೆಗೆಟಿವ್​ ಪಾಸಿಟಿವ್​ ಎರಡು ಮುಖಗಳನ್ನ ಅನುಭಿಸೋ ಪರಿಸ್ಥಿತಿಗಳು ಎದುರಾದವು. ಕೆಲವೇ ಕೆಲವು ವರ್ಷಗಳಲ್ಲಿ ಡ್ರೋನ್​ ಪ್ರತಾಪ್​ ಅನ್ನೋ ಹೆಸರು ಗಲ್ಲಿಗಲ್ಲಿಯಲ್ಲೂ ಸುದ್ದಿಯಾಯ್ತು. ಅವರು ಮಾಡಿದ್ದು ತಪ್ಪೋ ಸರಿನೋ ಅದನ್ನು ಕಾಲ ನಿರ್ಧಾರ ಮಾಡುತ್ತೆ. ಆದರೆ ಬಿಗ್​ಬಾಸ್​ ಮನೆ ಪ್ರತಾಪ್​ ಲೈಫ್​ಗೆ ವರವಾಗಿದೆ.

ಇನ್ನೂ ಡ್ರೋನ್​ ಪ್ರತಾಪ್​ ಪರ ಅವರ ಅಭಿಮಾನಿಗಳು ಈ ವಾರ ಕಿಚ್ಚನ ಚಪ್ಪಾಳೆ ಇವರಿಗೆ ಸಿಗಬೇಕು ಎಂದು ಹೇಳುತ್ತಿದ್ದಾರೆ. ಈ ಬಾರಿ ಪ್ರತಾಪ್​ ಅವರು ಗಂಧದ ಗುಡಿ ತಂಡಕ್ಕೆ ನಾಯಕನಾಗಿ ಆಯ್ಕೆಯಾಗಿದ್ದರು. ಜೊತೆಗೆ ತಮ್ಮ ಟೀಮ್​ ಅನ್ನು ಗೆಲ್ಲಿಸಿ ನಾಮಿನೇಷ್​ನಿಂದ ಸಂಗೀತಾ, ತನಿಶಾ ಹಾಗೂ ಭಾಗ್ಯಶ್ರೀ ಅವರನ್ನು ಸೇವ್​ ಮಾಡಿದ್ದಾರೆ. ಬಿಗ್​ಬಾಸ್​ ಕೊಟ್ಟ ಎಲ್ಲ ಟಾಸ್ಕ್​​​ಗಳಿಗೆ ನ್ಯಾಯಯುತವಾದ ಅಂಕವನ್ನು ನೀಡಿದ್ದಾರೆ. ಹೀಗಾಗಿ ಅಭಿಮಾನಿಗಳಿಗೆ ಡ್ರೋನ್​ ಪ್ರತಾಪ್​ ಅವರ ನಾಯಕತ್ವ ಇಷ್ಟವಾಗಿದೆ. ಜೊತೆಗೆ ಬಿಗ್​ಬಾಸ್​ ಮನೆಯ ಉಳಿದ ಸ್ಪರ್ಧಿಗಳು ಕೂಡ ಪ್ರತಾಪ್​​​ ಆಟ ನೋಡಿ ಶಾಕ್​ ಆಗಿದ್ದಾರೆ.

ಇದೇ ಕಾರಣಕ್ಕೆ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಅಭಿಮಾನಿಗಳು ಬಗೆ ಬಗೆಯಾಗಿ ಕಾಮೆಂಟ್​ ಮಾಡುತ್ತಿದ್ದಾರೆ. ಈ ವಾರದ ಆಟ ಚೆನ್ನಾಗಿ ಇತ್ತು. ತಂಡದ ನಾಯಕನಾಗಿ ನಡೆಸಿ ಕೊಟ್ಟಿದ್ದಕ್ಕೆ ಕಿಚ್ಚನ ಚಪ್ಪಾಳೆ ಡ್ರೋಣ್ ಪ್ರತಾಪ್​​ ಅವರಿಗೆ ಬರಬೇಕು ಎಂದು ಕಾಮೆಂಟ್​ ಮಾಡುತ್ತಿದ್ದಾರೆ. ಸದ್ಯ ಭಾನುವಾರದ ಎಪಿಸೋಡ್​ನಲ್ಲಿ ಕಿಚ್ಚ ಸುದೀಪ್ ಚಪ್ಪಾಳೆ ಯಾರಿಗೆ ಸಿಗುತ್ತದೆ ಎಂದು ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ವಾರದ ಕಿಚ್ಚನ ಚಪ್ಪಾಳೆ ಡ್ರೋನ್​​​​ಗೆ ಸಿಗುತ್ತಾ; ಪ್ರತಾಪ್​ ಕಿಲಾಡಿ ಆಟಕ್ಕೆ ಸಿಗುತ್ತಾ ಮನ್ನಣೆ?

https://newsfirstlive.com/wp-content/uploads/2023/11/bigg-boss-2023-11-10T091311.440.jpg

Load More