ಕೆರಿಬಿಯನ್ T20 ಸರಣಿಯಲ್ಲೇ ಬಯಲಾಯಿತು ವೀಕ್ನೆಸ್
ಕೊಹ್ಲಿ-ರೋಹಿತ್ ಶರ್ಮಾಗೆ ಮಣೆ ಹಾಕುತ್ತಾ ಬಿಸಿಸಿಐ..?
ಕಳೆದ ಪಂದ್ಯದಲ್ಲಿ ಯುವ ಆಟಗಾರರ ಬ್ಯಾಟಿಂಗ್ ವೈಫಲ್ಯ
ಯಜಮಾನನಿಲ್ಲದ ಕುಟುಂಬ ಹೇಗಿರುತ್ತೋ ಸದ್ಯ ಟೀಮ್ ಇಂಡಿಯಾದ ಕಥೆನೂ ಹಾಗೇ ಆಗಿದೆ. ಕಿರಿಯರಿಗೆ ತಿದ್ದಿ ಬುದ್ಧಿ ಹೇಳೋರೆ ಇಲ್ಲ. ಯಂಗ್ಸ್ಟರ್ಸ್ ಆಡಿದ್ದೇ ಆಟವಾಗಿದೆ. ಯುವ ಸೈನ್ಯವನ್ನ ಕಟ್ಟಿಕೊಂಡು ವಿಶ್ವಕಪ್ ಗೆಲ್ಲೋಕೆ ಹೊರಟಿರೋ ಬಿಸಿಸಿಐಗೆ ಇದು ದೊಡ್ಡ ಪಾಠವಾಗಿದೆ.
ಟೀಮ್ ಇಂಡಿಯಾ ಒನ್ಡೇ ವಿಶ್ವಕಪ್ ಜೊತೆಗೆ 2024ರ ಟಿ20 ವಿಶ್ವಕಪ್ಗೂ ರಣಕಹಳೆ ಊದಿದೆ. ಚುಟುಕು ದಂಗಲ್ನಲ್ಲಿ ಯುವಸೈನ್ಯ ಕಣಕ್ಕಿಳಿಸೋದು ಬಿಸಿಸಿಐ ಪ್ಲಾನ್. ಅದಕ್ಕೆ ತಕ್ಕಂತೆ ತಂಡದಲ್ಲಿ ಯುವ ಆಟಗಾರರಿಗೆ ಹೆಚ್ಚು ಮಣೆ ಹಾಕಿದೆ. ಆದ್ರೆ ಯಂಗ್ಸ್ಟರ್ಸ್ ನಂಬಿಕೊಂಡೇ ಟಿ20 ವಿಶ್ವಕಪ್ ಗೆಲ್ಲುವ ಬಿಸಿಸಿಐ ಪ್ಲಾನ್ ಆರಂಭದಲ್ಲೇ ಠುಸ್ ಪಟಾಕಿ ಆಗಿದೆ. ಪ್ರಸಕ್ತ ಭಾರತ-ವಿಂಡೀಸ್ ಟಿ20 ಸರಣಿಯಲ್ಲಿ ಅದು ಸಾಬೀತಾಗಿದೆ.
ಯುವಸೈನ್ಯ ಟಿ20 ವಿಶ್ವಕಪ್ ಗೆಲ್ಲೋದು ಕಷ್ಟ ಕಷ್ಟ..!
ಒನ್ಡೇ ಸರಣಿ ಗೆದ್ದ ಕಾನ್ಫಿಡೆಂಟ್ಸ್ನಲ್ಲಿದ್ದ ಟೀಮ್ ಇಂಡಿಯಾ ಟಿ20 ಸರಣಿಯಲ್ಲಿ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿತ್ತು. ಆದ್ರೆ ಈ ಎಲ್ಲ ಲೆಕ್ಕಚಾರವನ್ನ ಕೆರಿಬಿಯನ್ನರು ತಲೆಕೆಳಗಾಗಿಸಿದ್ರು. ಈ ಸೋಲು ಬರೀ ಸೋಲಲ್ಲ. ಇದು ಭಾರತ ತಂಡಕ್ಕೆ ದೊಡ್ಡ ಪಾಠ. ಇಂತಹ ಯುವಸೈನ್ಯ ಕಟ್ಟಿಕೊಂಡು ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಟಿ20 ವಿಶ್ವಕಪ್ ಗೆಲ್ಲೋಕೆ ಸಾಧ್ಯನಾ? ಅನ್ನೋ ದೊಡ್ಡ ಪ್ರಶ್ನೆಯನ್ನ ಹುಟ್ಟುಹಾಕಿದೆ.
ಯಾಕಂದ್ರೆ ವಿಂಡೀಸ್, ಭಾರತ ಗೆಲುವಿಗೆ 150 ರನ್ ಗುರಿ ನೀಡಿತ್ತು. ಚೇಸಿಬಲ್ ಸ್ಕೋರ್ ಅನ್ನ ಪಾಂಡ್ಯ ಬಾಯ್ಸ್ ಈಸಿಯಾಗಿ ಚೇಸ್ ಮಾಡ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ರು. ಆದ್ರೆ ಎಲ್ಲ ನಿರೀಕ್ಷೆ ಹುಸಿಯಾಯ್ತು. ತಂಡದಲ್ಲಿ ಟಿ20 ಸ್ಪೆಷಲಿಸ್ಟ್, ಬಿಗ್ ಹಿಟ್ಟರ್, ಗೇಮ್ ಚೇಂಜರ್ಸ್ಗಳಿದ್ರೂ ವಿಂಡೀಸ್ ವಿರುದ್ಧ ಮಕಾಡೆ ಮಲಗಿದ್ರು. ಇದಕ್ಕೆ ಕಾರಣ ಯಂಗ್ಸ್ಟರ್ಸ್ಗಳ ನೆಗ್ಲಿಜೆನ್ಸಿ ಬ್ಯಾಟಿಂಗ್..
ಯುವ ಆಟಗಾರರಲ್ಲಿ ಗಂಭೀರತೆ, ತಾಳ್ಮೆ ಇಲ್ಲವೇ ಇಲ್ಲ
ಫ್ಯೂಚರ್ ದೃಷ್ಟಿಯಿಂದ ತಂಡದಲ್ಲಿ ಯಂಗ್ಸ್ಟರ್ಸ್ ಇರಬೇಕು ನಿಜ. ಹಾಗಂತ ಇಡೀ ಟೀಮೆ ಯುವ ಆಟಗಾರರರಿಂದ ಕೂಡಿರಬಾರದು. ಕೂಡಿದ್ರೆ ಏನಾಗುತ್ತೆ ಅನ್ನೋದಕ್ಕೆ ಟ್ರಿನಿಡಾಡ್ ಮ್ಯಾಚ್ ರಿಸಲ್ಟ್ ಬೆಸ್ಟ್ ಎಕ್ಸಾಂಪಲ್. ಶುಭ್ಮನ್ ಗಿಲ್, ಇಶಾನ್ ಕಿಶನ್ ರಂತ ಯಂಗ್ಗನ್ಸ್ ದಿವ್ಯ ನಿರ್ಲಕ್ಷ ತೋರಿದ್ರು. ಕಣ್ಣ ಮುಂದೆ ಈಸಿ ಟಾರ್ಗೆಟ್ ಇದ್ರೂ ಸಿಲ್ಲಿಯಾಗಿ ವಿಕೆಟ್ ಒಪ್ಪಿಸಿದ್ರು. ಇನ್ನು ಡೆಬ್ಯುಡಾಂಟ್ ತಿಲಕ್ ವರ್ಮಾ ಡಿಸೆಂಟ್ ಇನ್ನಿಂಗ್ಸ್ ಕಟ್ಟಿದ್ರೂ ಫಿನಿಶಿಂಗ್ ಟಚ್ ನೀಡುವಲ್ಲಿ ಫೇಲಾದ್ರು.
ಅನುಭವಿ ಸೂರ್ಯಕುಮಾರ್ ಯಾದವ್, ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್ ಹಾಗೂ ಅಕ್ಷರ್ ಪಟೇಲ್ ತಂಡದಲ್ಲಿದ್ರೂ ಪ್ರಯೋಜನಕ್ಕೆ ಬರಲಿಲ್ಲ. ತಾಳ್ಮೆ ಮರೆತು ಬಂದ ಪುಟ್ಟ ಹೋದ ಪುಟ್ಟ ರೀತಿಯಲ್ಲಿ ಪೆವಿಲಿಯನ್ ಸೇರಿಕೊಂಡ್ರು. ಇಂತಹ ಅನಾನುಭವಿ ಮತ್ತು ತಾಳ್ಮೆ ಹೊಂದಿಲ್ಲದ ಆಟಗಾರರಿಂದ ಟಿ20 ವಿಶ್ವಕಪ್ ಗೆಲ್ಲೋದು ನಿಜಕ್ಕೂ ಕಷ್ಟ ಕಷ್ಟ..
ಭಾರತಕ್ಕೆ ಕಾಡ್ತಿದೆ ಸೀನಿಯರ್ ಪ್ಲೇಯರ್ಸ್ ಅಲಭ್ಯತೆ
ತಂಡಕ್ಕೆ ಒಬ್ಬ ಯಜಮಾನ ಅನ್ನೋರು ಇರಬೇಕು. ಆದ್ರೆ ಈಗಿರೋ ಭಾರತ ಟಿ20 ತಂಡದಲ್ಲಿ ಯಜಮಾನ ಅನ್ನೋರೆ ಇಲ್ಲ. ಅಪಾರ ಅನುಭವಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾರನ್ನ ಟಿ20 ಫಾಮ್ಯಾಟ್ನಿಂದ ಕಡೆಗಣಿಸಿದೆ. ಟಿ20 ವಿಶ್ವಕಪ್ಗೂ ಪರಿಗಣಿಸಿಲ್ಲ ಎಂದು ಹೇಳಿದೆ. ಸದ್ಯ ಇವರಿಬ್ಬರ ಅಗತ್ಯತೆ ತಂಡಕ್ಕಿದೆ. ಅದು ವಿಂಡೀಸ್ ವಿರುದ್ಧ ಮೊದಲ ಟಿ20 ಪಂದ್ಯದ ಸೋಲಿನಿಂದ ಗೊತ್ತಾಗಿದೆ.
ಒಂದು ವೇಳೆ ಇಬ್ಬರು ದಿಗ್ಗಜರ ಪೈಕಿ ತಂಡದಲ್ಲಿ ಒಬ್ಬರಾದ್ರು ಇದ್ದಿದ್ರೆ ಟೀಮ್ ಇಂಡಿಯಾ ಪಂದ್ಯ ಸೋಲ್ತಿರ್ಲಿಲ್ಲ. ಕಿಂಗ್ ಕೊಹ್ಲಿ-ರೋಹಿತ್ ಶರ್ಮಾ ತಾಳ್ಮೆ ಹಾಗೂ ಜಾಗರೂಕತೆಯಿಂದ ಬ್ಯಾಟಿಂಗ್ ನಡೆಸಿ ತಂಡವನ್ನ ಗೆಲುವಿನ ದಡ ಸೇರಿಸುತ್ತಿದ್ದರು. ವಿಂಡೀಸ್ ಮೈಲುಗೈಗೆ ಅವಕಾಶವೇ ನೀಡುತ್ತಿರಲಿಲ್ಲ.
ಇನ್ನು ಕಾಲ ಮಿಂಚಿಲ್ಲ. ಬಿಸಿಸಿಐ ಇನ್ನಾದರೂ ಮನಸ್ಸು ಬದಲಿಸಿ ಮತ್ತೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಟಿ20 ತಂಡದಲ್ಲಿ ಚಾನ್ಸ್ ಕೊಡಲಿ. ಇಲ್ಲವಾದಲ್ಲಿ ಯಂಗ್ಸ್ಟರ್ಗಳನ್ನೇ ನಂಬಿಕೊಂಡು 2024 ಟಿ20 ವಿಶ್ವಕಪ್ ಗೆಲ್ಲುವ ಬಿಗ್ ಡ್ರೀಮ್ ಕಮರಿ ಹೋದ್ರು ಅಚ್ಚರಿಯಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ