ಉಗ್ರ ನಿಜ್ಜರ್ ಹತ್ಯೆ ವಿಚಾರದಲ್ಲಿ ಭಾರತದ ಮೇಲೆ ಗೂಬೆ
ಕೊಲೆ ಹಿಂದೆ ಭಾರತದ ಪ್ರತಿನಿಧಿಗಳ ಕೈವಾಡ ಎಂದು ಆರೋಪ
ಮತ್ತಷ್ಟು ಹದಗೆಟ್ಟ ಭಾರತ ಕೆನಡಾ ಸಂಬಂಧ
ಖಲಿಸ್ತಾನಿ ಉಗ್ರ, ಕೆನಡಾ ನಾಗರಿಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಹಿಂದೆ ಭಾರತದ ಕೈವಾಡ ಇದೆ ಎಂದು ಕೆನಾಡ ಪ್ರಧಾನಿ ಜಸ್ಟಿನ್ ಟ್ರುಡೊ ಗಂಭೀರ ಆರೋಪ ಮಾಡಿದ್ದಾರೆ. ಆರೋಪ ಬೆನ್ನಲ್ಲೇ, ಪ್ರತಿಕಾರವಾಗಿ ಕೆನಡಾ ಸರ್ಕಾರ ಭಾರತದ ರಾಯಭಾರಿಯನ್ನು ಹೊರ ಹಾಕಿದೆ.
ಕೆನಡಾ ವಿದೇಶಾಂಗ ಮಂತ್ರಿ ಮೇಲಾನಿ ಜೋಲಿ, ಸರ್ಕಾರದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಕೆನಡಾ ಸರ್ಕಾರದಿಂದ ಕೆನಡಾದಲ್ಲಿದ್ದ ಭಾರತದ ರಾಜತಾಂತ್ರಿಕ ಅಧಿಕಾರಿಯನ್ನು ಭಾರತಕ್ಕೆ ವಾಪಸ್ ಕಳುಹಿಸಲು ನಿರ್ಧಾರ ಮಾಡಲಾಗಿದೆ. ನಮ್ಮ ನಾಗರಿಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ವಿದೇಶಿ ಸರ್ಕಾರದ ಪ್ರತಿನಿಧಿಯ ಪಾತ್ರ ಇದೆ. ಇದು ಕಳವಳಕಾರಿ ಮಾತ್ರವಲ್ಲದೇ ಸಂಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ ಎಂದು ಭಾರತದತ್ತ ಬೊಟ್ಟು ಮಾಡಿದ್ದಾರೆ.
ಕೆನಡಾದ ನೆಲದಲ್ಲಿ ಕೆನಡಾ ನಾಗರಿಕನ ಹತ್ಯೆ ಆಗಿದೆ. ಒಂದು ವೇಳೆ ಅದು ಸಾಬೀತಾದರೆ ನಮ್ಮ ಸಾರ್ವಭೌಮತ್ವದ ಉಲಂಘನೆ. ಜೊತೆಗೆ ಒಂದು ದೇಶ, ಮತ್ತೊಂದು ದೇಶದ ಜೊತೆಗೆ ಹೇಗೆ ವ್ಯವಹರಿಸಬೇಕು ಎಂಬ ಪ್ರಾಥಮಿಕ ನಿಯಮದ ಉಲಂಘನೆ. ನಾವು ವಿದೇಶಿ ಹಸ್ತಕ್ಷೇಪವನ್ನು ಸಹಿಸಲ್ಲ. ನಾವು ಮೂರು ತತ್ವಗಳ ಆಧಾರದ ಮೇಲೆ ನಡೆಯುತ್ತೇವೆ. ನಮಗೆ ಸತ್ಯ ಗೊತ್ತಾಗಬೇಕು ಎಂದು ಕಿಡಿಕಾರಿದ್ದಾರೆ. ನಾವು ಎಲ್ಲ ಸಮಯದಲ್ಲೂ ಕೆನಡಾ ನಾಗರಿಕರ ರಕ್ಷಣೆ ಮಾಡುತ್ತೇವೆ. ಜೊತೆಗೆ ಕೆನಡಾದ ಸಾರ್ವಭೌಮತ್ವದ ರಕ್ಷಣೆ ಮಾಡುತ್ತೇವೆ.
ಇದನ್ನೂ ಓದಿ: ಲಿಸ್ತಾನಿ ಭಯೋತ್ಪಾದಕನ ಹತ್ಯೆ ಹಿಂದೆ ಭಾರತದ ಕೈವಾಡ ಇದೆ -ಭಾರತದ ಮೇಲೆ ಕೆನಡಾ ಗೂಬೆ
ಭಾರತದ ನನ್ನ ಸಹೋದ್ಯೋಗಿ ವಿದೇಶಾಂಗ ಮಂತ್ರಿಗೆ ಈ ವಿಚಾರವನ್ನು ನಾವು ತಿಳಿಸಿದ್ದೇವೆ. ಈ ಘಟನೆಯ ಸಂಪೂರ್ಣ ಸತ್ಯ ನಮಗೆ ಗೊತ್ತಾಗಬೇಕು. ಈ ಹತ್ಯೆ ಪರಿಣಾಮ ಭಾರತದ ರಾಜತಾಂತ್ರಿಕ ಅಧಿಕಾರಿಯನ್ನು ಕೆನಡಾದಿಂದ ವಾಪಸ್ ಕಳಿಸುತ್ತಿದ್ದೇವೆ ಎಂದು ಮೇಲಾನಿ ಜೋಲಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ