newsfirstkannada.com

ಕವಿಗೋಷ್ಠಿಗೆ ಎಂದು ಕರ್ನಾಟಕಕ್ಕೆ ಬಂದಿದ್ದ ಕೆನಡಾದ ಕವಿ ನಿಧನ

Share :

20-11-2023

  ಟೆಕ್ನೋಕ್ರಾಟ್ಸ್, ಸಾಹಿತ್ಯಾಭಿಮಾನಿಗಳ ಸಂಘದಿಂದ ಕಾರ್ಯಕ್ರಮ

  ಕಾರ್ಯಕ್ರಮಕ್ಕೂ ಮೊದಲೇ ಕವಿಗೆ ಎದೆನೋವು ಕಾಣಿಸಿಕೊಂಡಿತ್ತು

  ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಆಗದೆ ಕೆನಾಡದ ಕವಿ ಕೊನೆಯುಸಿರು

ಬೀದರ್: ಉತ್ತರ ಪ್ರದೇಶದ ಅಲಿಗಢ ಮೂಲದ ಕೆನಡಾದಲ್ಲಿ ವಾಸವಾಗಿರುವ ಉರ್ದು ಕವಿ ಹಾಗೂ ಸಾಹಿತಿ ತಾರೀಕ್ ಫಾರೂಕ್ (78) ಜಿಲ್ಲೆಯ ಬಸವ ಕಲ್ಯಾಣದಲ್ಲಿ ನಿಧನರಾಗಿದ್ದಾರೆ.

ಬಸವ ಕಲ್ಯಾಣ ನಗರದ ತೇರು ಮೈದಾನದಲ್ಲಿನ ಸಭಾ ಭವನದಲ್ಲಿ ಟೆಕ್ನೋಕ್ರಾಟ್ಸ್ ಹಾಗೂ ಸಾಹಿತ್ಯಾಭಿಮಾನಿಗಳ ಸಂಘದಿಂದ ಮುಷಾಯಿರಾ ಹಾಗೂ ಕವಿಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಭಾಗವಹಿಸಲು ಕವಿ ತಾರೀಕ್ ಫಾರೂಕ್ ಆಗಮಿಸಿದ್ದರು. ಮುಷಾಯಿರಾ ಹಾಗೂ ಕವಿಗೋಷ್ಠಿ ಕಾರ್ಯಕ್ರಮಕ್ಕೂ ಮುನ್ನ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು.

ಇದೇ ವೇಳೆ ತಾರೀಕ್​ ಫಾರೂಕ್​ರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಉತ್ತರಪ್ರದೇಶದ ಅಲಿಗಢ್‌‌ಗೆ ಪಾರ್ಥಿವ ಶರೀರವನ್ನ ರವಾನಿಸಿಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕವಿಗೋಷ್ಠಿಗೆ ಎಂದು ಕರ್ನಾಟಕಕ್ಕೆ ಬಂದಿದ್ದ ಕೆನಡಾದ ಕವಿ ನಿಧನ

https://newsfirstlive.com/wp-content/uploads/2023/11/BGK_KENADA_KAVI.jpg

Load More