newsfirstkannada.com

36 ಗಂಟೆಗಳ ಪರದಾಟ.. ಕೊನೆಗೂ ಸ್ವದೇಶಕ್ಕೆ ಹೊರಟ ಕೆನಡಾ ಪ್ರಧಾನಿ; ದೆಹಲಿಯಲ್ಲಿ 2 ದಿನ ಆಗಿದ್ದೇನು?

Share :

12-09-2023

    ಸೆ. 8ರಂದು ದೆಹಲಿಗೆ ಆಗಮಿಸಿದ್ದ ಕೆನಡಾ ಪ್ರಧಾನಿ ಜಸ್ಟೀನ್ ಟ್ರುಡೋ

    G20 ಶೃಂಗಸಭೆಯ ಹಿನ್ನೆಲೆ ಭಾರತಕ್ಕೆ ಎರಡು ದಿನಗಳ ಪ್ರವಾಸ

    ಕೊನೇ ಕ್ಷಣದಲ್ಲಿ ವಿಮಾನ ಕೈ ಕೊಟ್ಟಿದ್ದರಿಂದ 36 ಗಂಟೆಗಳ ಪರದಾಟ

ನವದೆಹಲಿ: ಕೆನಡಾ ಪ್ರಧಾನಿ ಜಸ್ಟೀನ್ ಟ್ರುಡೋ ಕೊನೆಗೂ ಸ್ವದೇಶಕ್ಕೆ ವಾಪಸ್ ಆಗಿದ್ದಾರೆ. ಸೆಪ್ಟೆಂಬರ್ 8ರಂದು ಜಸ್ಟೀನ್ ಟ್ರುಡೋ G20 ಶೃಂಗಸಭೆಯ ಹಿನ್ನೆಲೆ ಭಾರತ ಪ್ರವಾಸ ಕೈಗೊಂಡಿದ್ದರು. ನವದೆಹಲಿಯಲ್ಲಿ ಸೆಪ್ಟೆಂಬರ್ 9, 10ರಂದು ನಡೆದ ಐತಿಹಾಸಿಕ ಶೃಂಗಸಭೆಯಲ್ಲಿ ಕೆನಡಾ ಪ್ರಧಾನಿ ಜಸ್ಟೀನ್ ಟ್ರುಡೋ ಭಾಗಿಯಾಗಿದ್ದರು. ಶೃಂಗಸಭೆ ಮುಗಿಸಿ ಜಸ್ಟೀನ್ ಟ್ರುಡೋ ಕಳೆದ ಸೆಪ್ಟೆಂಬರ್ 10ರಂದೇ ಕೆನಡಾಕ್ಕೆ ತೆರಳಬೇಕಿತ್ತು. ಆದರೆ ಕೊನೇ ಕ್ಷಣದಲ್ಲಿ ವಿಮಾನ ಕೈ ಕೊಟ್ಟಿದ್ದರಿಂದ ಪ್ರಯಾಣವನ್ನು ಮುಂದೂಡಿದ್ದರು.

ಸೆಪ್ಟೆಂಬರ್‌ 10 ರಂದು ಜಸ್ಟೀನ್ ಟ್ರುಡೋ ಕೆನಡಾದಿಂದ ಆಗಮಿಸಿದ್ದ CFC001 ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಕೆನಡಾ ಪ್ರಧಾನಿ ದೆಹಲಿಯಲ್ಲಿ ಉಳಿದುಕೊಂಡಿದ್ದರು. 36 ಗಂಟೆಗಳ ಬಳಿಕ ಇಂದು ಜಸ್ಟೀನ್ ಟ್ರುಡೋ ಅವರು ಇಂದು ಮಧ್ಯಾಹ್ನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೆನಡಾಕ್ಕೆ ತೆರಳಿದ್ದಾರೆ. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಜಸ್ಟೀನ್ ಟ್ರುಡೋ ಅವರಿಗೆ ಬೀಳ್ಕೊಡುಗೆ ಕೊಟ್ಟಿದ್ದಾರೆ. ವಿಮಾನದ ತಾಂತ್ರಿಕ ದೋಷವನ್ನು ಸರಿಪಡಿಸಲಾಗಿದ್ದು, ದೆಹಲಿಗೆ ಆಗಮಿಸಿದ್ದ ಕೆನಡಾ ನಿಯೋಗ ಸ್ವದೇಶಕ್ಕೆ ಮರಳಿದೆ.

ಶೃಂಗಸಭೆ ಮುಗಿದ ಬಳಿಕ ಕೆನಡಾಕ್ಕೆ ಹೊರಟಿದ್ದ ಜಸ್ಟೀನ್ ಟ್ರುಡೋ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಭಾರೀ ಚರ್ಚೆಗೆ ಗುರಿಯಾಗಿದೆ. ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದಕ್ಕೆ ಕೆನಡಾ ಪ್ರಧಾನಿ ಇರುಸುಮುರುಸು ಅನುಭವಿಸಿದ್ದಾರೆ. ಜಿ-20 ಶೃಂಗಸಭೆಯ ಹಿನ್ನೆಲೆ ದೆಹಲಿಗೆ ಬಂದಿದ್ದ ಕೆನಡಾ ಪ್ರಧಾನಿಗೆ ಭಾರತ ಸರ್ಕಾರ ದೆಹಲಿಯಲ್ಲೇ ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಿತ್ತು. ಶಿಷ್ಟಾಚಾರದ ಪ್ರಕಾರ ಸೆಪ್ಟೆಂಬರ್ 11 ಹಾಗೂ 12ರಂದು 2 ದಿನಗಳ ಕಾಲ ದೆಹಲಿಯಲ್ಲಿ ತಂಗಲು ಶಿಷ್ಟಾಚಾರದ ಪ್ರಕಾರ ಎಲ್ಲ ಸೌಲಭ್ಯಗಳನ್ನು ನೀಡಲಾಗಿತ್ತು.

ಇದನ್ನೂ ಓದಿ: 20 ಗಂಟೆ ಬುಲೆಟ್‌ ಪ್ರೂಫ್‌ ರೈಲಿನ ಪ್ರಯಾಣ; ಅಮೆರಿಕ ಎಚ್ಚರಿಕೆ ನಡುವೆಯೂ ರಷ್ಯಾ ತಲುಪಿದ ಕಿಮ್ ಜಾಂಗ್ ಉನ್

ಕೆನಡಾ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಭಾರತ ಮತ್ತೊಂದು ಅವಕಾಶ ನೀಡಿತ್ತು. ಏರ್ ಪೋರ್ಸ್ ಒನ್ ವಿಮಾನದಲ್ಲಿ ಕೆನಡಾಗೆ ತೆರಳಲು ವಿಮಾನ ನೀಡುವುದಾಗಿ ಹೇಳಿತ್ತು. ಆದರೆ ಭಾರತ ಸರ್ಕಾರದ ವಿಮಾನದಲ್ಲಿ ತೆರಳಲು ಕೆನಡಾ ಪ್ರಧಾನಿ ಜಸ್ಟೀನ್ ಟ್ರೂಡೋ ನಿರಾಕರಣೆ ಮಾಡಿದ್ದಾರೆ ಎನ್ನಲಾಗಿದೆ. ಕೊನೆಗೆ ತಾಂತ್ರಿಕ ಸಮಸ್ಯೆಯನ್ನ ಸರಿಪಡಿಸಿಕೊಂಡ ಬಳಿಕ ಕೆನಡಾ ಸರ್ಕಾರದ ವಿಮಾನದಲ್ಲೇ ಜಸ್ಟೀನ್ ಟ್ರುಡೋ ಸ್ವದೇಶಕ್ಕೆ ವಾಪಸ್ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

36 ಗಂಟೆಗಳ ಪರದಾಟ.. ಕೊನೆಗೂ ಸ್ವದೇಶಕ್ಕೆ ಹೊರಟ ಕೆನಡಾ ಪ್ರಧಾನಿ; ದೆಹಲಿಯಲ್ಲಿ 2 ದಿನ ಆಗಿದ್ದೇನು?

https://newsfirstlive.com/wp-content/uploads/2023/09/Canada-PM-Trudeau.jpg

Load More