ಕೋಚ್ ದ್ರಾವಿಡ್, ಕ್ಯಾಪ್ಟನ್ ರೋಹಿತ್ಗೆ ಏನಾಗಿದೆ?
ಟೀಮ್ ಇಂಡಿಯಾಗೆ 4ನೇ ಕ್ರಮಾಂಕವೇ ‘ಕಂಟಕ’!
ಒಂದು ಸ್ಥಾನಕ್ಕೆ ಹಲವರ ನಡುವೆ ನಡೀತಿದೆ ಫೈಟ್!
ಈ ಹಿಂದೆ ಮಾಡಿದ ತಪ್ಪುಗಳಿಂದ ಟೀಮ್ ಇಂಡಿಯಾ ಕೋಚ್-ಕ್ಯಾಪ್ಟನ್ ಪಾಠ ಕಲಿತಂತೆ ಇಲ್ಲ. ಮಹತ್ವದ ವಿಶ್ವಕಪ್ ಟೂರ್ನಿಗೆ ಕೌಂಟ್ಡೌನ್ ಶುರುವಾಗಿರೋ ಈ ಸಮಯದಲ್ಲಿ, ಇರೋ ಸಮಸ್ಯೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಇದ್ರ ನಡುವೆ ಹೊಸ ಹೊಸ ಸಮಸ್ಯೆಗಳನ್ನ ರೋಹಿತ್ & ದ್ರಾವಿಡ್ ಜೋಡಿ ಸೃಷ್ಟಿಸ್ತಿದೆ.
ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಏನ್ ಮಾಡ್ತಿದೆ? ಮುಂದಿರೋ ಸವಾಲುಗಳಿಗೆ ಉತ್ತರ ಹುಡುಕೋದ್ರ ಬದಲು ಮತ್ತಷ್ಟು ಸಮಸ್ಯೆಗಳನ್ನ ಕ್ರಿಯೇಟ್ ಮಾಡಿಕೊಳ್ತಿದ್ಯಾ? ಸದ್ಯ ಕ್ರಿಕೆಟ್ ವಲಯದಲ್ಲಿ ಚರ್ಚೆಯಾಗ್ತಿರೋ ಹಾಟ್ ಟಾಪಿಕ್ ಇದು! ಟೀಮ್ ಮ್ಯಾನೇಜ್ಮೆಂಟ್ನ ನಡೆಗೆ ಫ್ಯಾನ್ಸ್ ಕಂಗಾಲ್ ಆಗಿದ್ರೆ, ಮಾಜಿ ಕ್ರಿಕೆಟರ್ಸ್ ಕ್ರಿಕೆಟರ್ಸ್ ಕೆಂಡ ಕಾರ್ತಿದ್ದಾರೆ.
2ನೇ ಏಕದಿನದಲ್ಲಿ ನಿಮಗೆ ಸರಿಯಾದ ಬ್ಯಾಲೆನ್ಸ್ ಕಂಡುಕೊಳ್ಳಲು, ಸರಿಯಾದ ಬ್ಯಾಟಿಂಗ್ ಆರ್ಡರ್ ಕಂಡುಕೊಳ್ಳಲು ಮತ್ತೊಂದು ಅವಕಾಶ ಇತ್ತು. ನನ್ನ ಪ್ರಕಾರ ವಿಶ್ವಕಪ್ ಸಿದ್ಧತೆಗೆ ತಡವಾಗುತ್ತಿದೆ –ಸಬಾ ಕರೀಂ, ಮಾಜಿ ಕ್ರಿಕೆಟಿಗ
ವಿಂಡೀಸ್ ಸರಣಿಯಲ್ಲಿ ಬೇಕಿತ್ತಾ ಅನಗತ್ಯ ಪ್ರಯೋಗ.?
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಪ್ರಯೋಗ ಶಾಲೆಯಾಗಿ ಮಾರ್ಪಟ್ಟಿದೆ. ಮೊದಲ ಏಕದಿನ ಪಂದ್ಯದಲ್ಲಿ ಕೇವಲ ಬ್ಯಾಟಿಂಗ್ ಆರ್ಡರ್ನಲ್ಲಿ ಬದಲಾವಣೆ ಆಯ್ತು. ಆದ್ರೆ ಎರಡನೇ ಪಂದ್ಯದಲ್ಲಿ ಇಡೀ ತಂಡವೇ ಚೇಂಜ್ ಆಯ್ತು. ಈ ಬದಲಾವಣೆ ಟೀಮ್ ಇಂಡಿಯಾದಲ್ಲಿರೋ ಸಮಸ್ಯೆಯನ್ನ ಹೆಚ್ಚು ಮಾಡ್ತಿದ್ಯೇ ಹೊರತು ಗೊಂದಲಗಳಿಗೆ ಪರಿಹಾರವನ್ನ ನೀಡ್ತಿಲ್ಲ.
ಉಳಿದಿರೋದು ಕೆಲವೇ ಪಂದ್ಯ, ಫೈನಲ್ ಆಗದ ತಂಡ
ವಿಶ್ವಕಪ್ ಟೂರ್ನಿಗೂ ಮುನ್ನ ಟೀಮ್ ಇಂಡಿಯಾ ಮುಂದಿರೋದು ಕೆಲವೇ ಪಂದ್ಯ ಮಾತ್ರ. ಅಷ್ಟರಲ್ಲಿ ತಂಡವನ್ನ ಫೈನಲ್ ಮಾಡಬೇಕಾದ ಸವಾಲು ಟೀಮ್ ಮ್ಯಾನೇಜ್ಮೆಂಟ್ ಮುಂದಿದೆ. ಟೀಮ್ ಇಂಡಿಯಾದಲ್ಲಿ ಅನಗತ್ಯ ಪ್ರಯೋಗಗಳು ನಡೀತಿವೆ. ವಿಂಡೀಸ್ ವಿರುದ್ಧದ 2ನೇ ಪಂದ್ಯದಲ್ಲಿ ಕೊಹ್ಲಿ-ರೋಹಿತ್ಗೆ ರೆಸ್ಟ್ ನೀಡೋ ಅಗತ್ಯತೆ ಏನಿತ್ತು? ನಮಗೆ ಮಾತ್ರವಲ್ಲ.. ಮಾಜಿ ಕ್ರಿಕೆಟಿಗ, ಸೆಲೆಕ್ಟರ್ ಸಬಾ ಕರೀಂಗೂ ಕೂಡ ಇದು ಅರ್ಥವಾಗದ ಪ್ರಶ್ನೆಯಾಗಿದೆ.
ನಾನು ಈ ಪ್ರಶ್ನೆಯನ್ನೂ ಕೇಳ್ತಾ ಇದ್ದೀನಿ. ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಯಾಕೆ ಆಡ್ತಿಲ್ಲ. ಅವರು ಆಡ್ತಿಲ್ಲ ಅಂದ ಮೇಲೆ ಅವರನ್ನ ಏಕದಿನಕ್ಕೆ ಸೆಲೆಕ್ಟ್ ಮಾಡಿದ್ದು ಯಾಕೆ? ಅದರ ಬದಲು ಫ್ರೆಶ್ ತಂಡವನ್ನ ಕಳುಹಿಸಬಹುದಿತ್ತು. ಈಗ ನಿಮ್ಮ ವಿಶ್ವಕಪ್ನ ಆಡುವ 11 ಅಥವಾ 15 ಮಂದಿ ಆಟಗಾರರು ಸತತವಾಗಿ ಆಡಬೇಕು. ನಿಮ್ಮ ಬಳಿ ಹೆಚ್ಚು ಸಮಯ ಉಳಿದಿಲ್ಲ.
ಸಬಾ ಕರೀಂ, ಮಾಜಿ ಕ್ರಿಕೆಟಿಗ
ಹಿಂದಿನ ತಪ್ಪುಗಳಿಂದ ಪಾಠ ಕಲಿತಿಲ್ವಾ ಕೋಚ್-ಕ್ಯಾಪ್ಟನ್?
ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಟೀಮ್ ಇಂಡಿಯಾದಲ್ಲಿ ತರಹೇವಾರಿ ಪ್ರಯೋಗಗಳು ನಡೆದಿದ್ವು. ಆದ್ರೆ ಅಂತಿಮವಾಗಿ ಆಗಿದ್ದು, ಹೀನಾಯ ಮುಖಭಂಗ. ಇದರಿಂದ ಕೋಚ್ ದ್ರಾವಿಡ್-ಕ್ಯಾಪ್ಟನ್ ರೋಹಿತ್ ಪಾಠ ಕಲಿತಂತಿಲ್ಲ. ಸದ್ಯ ಗಾಯಗೊಂಡು ತಂಡದಿಂದ ಹೊರ ಬಿದ್ದಿರೋ, ಶ್ರೇಯಸ್ ಅಯ್ಯರ್ ಕಮ್ಬ್ಯಾಕ್ ಮಾಡಿದ್ರೆ 4ನೇ ಕ್ರಮಾಂಕದಲ್ಲಿ ಆಡ್ತಾರೆ ಅನ್ನೋದು ಮ್ಯಾನೇಜ್ಮೆಂಟ್ ನಂಬಿಕೆಯಾಗಿದೆ. ಒಂದು ವೇಳೆ ಶ್ರೇಯಸ್, ಕಂಪ್ಲೀಟ್ ಫಿಟ್ ಆಗಲಿಲ್ಲ ಅಂದ್ರೆ ಮುಂದೇನು ಎಂಬ ಪ್ರಶ್ನೆಗೆ ಮಾತ್ರ ಉತ್ತರ ಇಲ್ಲ.
ಮೊದಲೇ ಇರುವ ಸಮಸ್ಯೆಗಳು ಖಾಯಂ ಆಟಗಾರರಿಂದ ಪರಿಹಾರ ಆದರೆ ಮಾತ್ರ ಪ್ರಯೋಗ ನಡೆಸಬಹುದು. ಆ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ ಅಂದ್ರೆ? ಈಗ ನಾವು ಶ್ರೇಯಸ್ ಅಯ್ಯರ್ ಫಿಟ್ ಆಗಿ 4ನೇ ಕ್ರಮಾಂಕದಲ್ಲಿ ಆಡಲಿ ಅನ್ನುತ್ತಿದ್ದೇವೆ. ಅವರಿಗೂ ಹೆಚ್ಚು ಸಮಯ ಬೇಕು. ಶ್ರೇಯಸ್ ಅಯ್ಯರ್ ಫಿಟ್ ಆಗಲಿಲ್ಲ ಅಂದ್ರೆ 4ನೇ ಕ್ರಮಾಂಕದಲ್ಲಿ ನಿಮ್ಮ ಬ್ಯಾಕ್ ಅಪ್ ಪ್ಲೇಯರ್ ಯಾರು? –ಸಬಾ ಕರೀಂ, ಮಾಜಿ ಕ್ರಿಕೆಟಿಗ
ಟೀಮ್ ಇಂಡಿಯಾಗೆ 4ನೇ ಕ್ರಮಾಂಕವೇ ‘ಕಂಟಕ’.!
ಟೀಮ್ ಇಂಡಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಬಹುಷಃ ಅತಿ ಹೆಚ್ಚು ಪ್ರಯೋಗಕ್ಕೆ ಒಳಗಾದ ಸ್ಲಾಟ್ ಇದ್ರೆ ಅದು 4ನೇ ಕ್ರಮಾಂಕ..! ಆದ್ರೆ, ಪರಿಹಾರ ಮಾತ್ರ ಸಿಕ್ಕಿಲ್ಲ. ಕಳೆದೊಂದು ವರ್ಷದ ರೆಕಾರ್ಡ್ ತೆಗೆದು ನೋಡಿದ್ರೆ, ವಿಶ್ವದ ಉಳಿದೆಲ್ಲಾ ತಂಡಗಳಿಗಿಂತ 4ನೇ ಕ್ರಮಾಂಕದಲ್ಲಿ ಟೀಮ್ ಇಂಡಿಯಾದ ಸರಾಸರಿ ತೀವ್ರ ಕಳಪೆಯಾಗಿದೆ. 11 ಪಂದ್ಯದಿಂದ ಕೇವಲ 16.2ರ ಸರಾಸರಿಯಲ್ಲಿ ಮಾತ್ರ ರನ್ ಬಂದಿದೆ. ನಿಜಕ್ಕೂ ಪ್ರಯೋಗ ನಡೆಸಿ ಉತ್ತರ ಕಂಡುಕೊಳ್ಳಬೇಕಿರೋದು ಈ ಸ್ಲಾಟ್ಗೆ..!
ಒಂದು ಸ್ಥಾನಕ್ಕೆ ಹಲವರ ನಡುವೆ ಫೈಟ್..!
ತಂಡದಲ್ಲಿರೋ ಸಂಜು ಸ್ಯಾಮ್ಸನ್, ಸೂರ್ಯ ಕುಮಾರ್ ಯಾದವ್ ಹಾಗೂ ಇಶಾನ್ ಕಿಶನ್ಗೆ 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸೋ ಸಾಮರ್ಥ್ಯವಿದೆ. ದೀಪಕ್ ಹೂಡರನ್ನ ಕೂಡ ಆಯ್ಕೆಗೆ ಪರಿಗಣಿಸಬಹುದಾಗಿದೆ. ಇವರಲ್ಲಿ ಒಬ್ಬರನ್ನ ಬ್ಯಾಕ್ ಅಪ್ ಪ್ಲೇಯರ್ ಆಗಿ ಆಯ್ಕೆ ಮಾಡಿಕೊಳ್ಳಬೇಕಿದೆ.
ಒಟ್ಟಿನಲ್ಲಿ ಮುಂದಿನ ಪಂದ್ಯದಿಂದಾದ್ರೂ ಟೀಮ್ ಮ್ಯಾನೇಜ್ಮೆಂಟ್ ಪ್ರಯೋಗವನ್ನು ನಿಲ್ಲಿಸಬೇಕಿದೆ. ವಿಶ್ವಕಪ್ನಲ್ಲಿ ಆಡೋ ಆಟಗಾರರಿಗೆ ಮಣೆ ಹಾಕಬೇಕಿದೆ. ಸರಿಯಾದ ಸ್ಲಾಟ್ನಲ್ಲಿ ಆಡಿಸಬೇಕಿದೆ. ಪ್ರಯೋಗವನ್ನೆ ಮುಂದುವರೆಸಿದ್ರೆ, ಸಂಕಷ್ಟ ತಪ್ಪಿದ್ದಲ್ಲ.
ವಿಶೇಷ ವರದಿ: ವಸಂತ್ ಮಳವತ್ತಿ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್