newsfirstkannada.com

ಕೊಹ್ಲಿ ವಿರುದ್ಧ ಅಸಮಾಧಾನ ಹೊರಹಾಕಿದ ಕ್ಯಾಪ್ಟನ್​ ರೋಹಿತ್​ ಶರ್ಮಾ.. ಅಸಲಿಗೆ ಆಗಿದ್ದೇನು?

Share :

Published June 27, 2024 at 7:59pm

    ಇಂಗ್ಲೆಂಡ್​​ ವಿರುದ್ಧ ಪಂದ್ಯಕ್ಕೆ ಮುನ್ನ ಮಾತಾಡಿದ ಕ್ಯಾಪ್ಟನ್​ ರೋಹಿತ್​ ಶರ್ಮಾ

    ವಿರಾಟ್​ ಕೊಹ್ಲಿ ರೋಲ್​ ಬಗ್ಗೆ ಸತ್ಯ ಬಾಯ್ಬಿಟ್ಟ ಟೀಮ್​ ಇಂಡಿಯಾ ಕ್ಯಾಪ್ಟನ್​​​!

    ಇಂದಾದ್ರೂ ಕೊಹ್ಲಿ ಆಡಲಿ ಎಂದು ಕ್ಯಾಪ್ಟನ್​ ರೋಹಿತ್​ ಶರ್ಮಾ ಅಸಮಾಧಾನ

ಇಂದು ಗಯಾನಾ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯಲಿರೋ 2024ರ ಟಿ20 ವಿಶ್ವಕಪ್​​ ಸೆಮಿ ಫೈನಲ್ ಹೈವೋಲ್ಟೇಜ್​ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಹೈವೋಲ್ಟೇಜ್​ ಪಂದ್ಯದಲ್ಲಿ ಇಂಗ್ಲೆಂಡ್​​, ಟೀಮ್​ ಇಂಡಿಯಾ ಮುಖಾಮುಖಿ ಆಗಲಿವೆ. ಈ ಪಂದ್ಯದಲ್ಲಿ ಹೇಗಾದ್ರೂ ಮಾಡಿ ಗೆಲ್ಲಲೇಬೇಕು ಎಂದು ಟೀಮ್​ ಇಂಡಿಯಾ ಭರ್ಜರಿ ತಯಾರಿ ನಡೆಸಿಕೊಂಡಿದೆ.

ಇನ್ನು, ಇಂಗ್ಲೆಂಡ್​ ವಿರುದ್ಧ ಗೆಲ್ಲಲು ಟೀಮ್​ ಇಂಡಿಯಾ ತಯಾರಿ ಬಗ್ಗೆ ಮಾತಾಡಿದ ಕ್ಯಾಪ್ಟನ್​ ರೋಹಿತ್​​ ಶರ್ಮಾ ವಿರಾಟ್​ ಕೊಹ್ಲಿ ರೋಲ್​​ ಬಗ್ಗೆ ಸತ್ಯ ಬಾಯ್ಬಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಟೀಮ್​ ಇಂಡಿಯಾ ಪರ ಕೊಹ್ಲಿ ಓಪನಿಂಗ್​ ಮಾಡುತ್ತಿರೋ ಹಿಂದಿನ ರೀಸನ್​ ಕೂಡ ಹೇಳಿದ್ದಾರೆ.

ವಿರಾಟ್​​ ಕೊಹ್ಲಿ ಅದ್ಭುತ ಕ್ರಿಕೆಟರ್​​. 2024ರ ಸೀಸನ್​ನಲ್ಲೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ ಓಪನರ್​ ಆಗಿ ಅದ್ಭುತ ಬ್ಯಾಟಿಂಗ್​ ಮಾಡಿದ್ರು. ಯುಎಸ್​​ ಮತ್ತು ವೆಸ್ಟ್​ ಇಂಡೀಸ್​ನಲ್ಲಿ ಡ್ರಾಪ್​​-ಇನ್​ ಪಿಚ್​ ಆಗಿರೋ ಕಾರಣ ಹೊಸಬರಿಗೆ ಆಡಲು ಕಷ್ಟ. ಇಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಆಡಲು ಎಲ್ಲಾ ಫಾರ್ಮೇಟ್​ ಪ್ಲೇಯರ್​ನಿಂದ ಮಾತ್ರ ಸಾಧ್ಯ. ಅದಕ್ಕೆ ಕೊಹ್ಲಿ ಓಪನಿಂಗ್​ ಮಾಡುತ್ತಿದ್ದಾರೆ. ವಿಕೆಟ್​ ಬೀಳದೆ ವೇಗವಾಗಿ ಸ್ಕೋರ್​ ಮಾಡಲು ಕೊಹ್ಲಿ ಬೇಕು. ಯಾವಾಗಲೂ ಫೋರ್​ ಮತ್ತು ಸಿಕ್ಸರ್​ಗಳು ಮಾತ್ರವಲ್ಲ ಸಿಂಗಲ್​ ಡಬಲ್ಸ್​ ಕೂಡ ಅಷ್ಟೇ ಇಂಪಾರ್ಟೆಂಟ್​. ಒತ್ತಡದಲ್ಲೂ ಬ್ಯಾಟ್​ ಬೀಸಲು ಕೊಹ್ಲಿ ಬೇಕು. ಕಳೆದ ಐದಾರು ಪಂದ್ಯಗಳಲ್ಲಿ ಕೊಹ್ಲಿ ಹೇಳಿಕೊಳ್ಳುವಷ್ಟು ಪ್ರದರ್ಶನ ನೀಡಲಿಲ್ಲ. ಆದ್ರೂ ಟೀಮ್​ ಇಂಡಿಯಾ ಸೆಮಿ ಫೈನಲ್​ಗೆ ಬಂದಿದೆ. ಇಂದಾದ್ರೂ ಕೊಹ್ಲಿ ಆಡಲೇಬೇಕು ಎಂದರು.

ಇದನ್ನೂ ಓದಿ: ಇಂಗ್ಲೆಂಡ್​​, ಟೀಮ್​ ಇಂಡಿಯಾ ನಡುವಿನ ಪಂದ್ಯ ದಿಢೀರ್​ ರದ್ದು? ಕಾರಣವೇನು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕೊಹ್ಲಿ ವಿರುದ್ಧ ಅಸಮಾಧಾನ ಹೊರಹಾಕಿದ ಕ್ಯಾಪ್ಟನ್​ ರೋಹಿತ್​ ಶರ್ಮಾ.. ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/06/Kohli_Rohit.jpg

Load More