ರೋಹಿತ್​ ಶರ್ಮಾಗೆ ಬಂದಿದೆ ‘24 X 7 ಕ್ಯಾಪ್ಟನ್’​​ ಎಂಬ ಬಿರುದು.. ಯಾಕೆಂದು ನಿಮಗಿದು ಗೊತ್ತಾ?

author-image
Ganesh
Updated On
Breaking News: ಟಾಸ್ ಗೆದ್ದ ಕ್ಯಾಪ್ಟನ್ ರೋಹಿತ್ ಶರ್ಮಾ; ಪ್ಲೇಯಿಂಗ್-11ನಲ್ಲಿ 2 ಮುಖ್ಯ ಬದಲಾವಣೆ..!
Advertisment
  • ರೋಹಿತ್​ ಶರ್ಮಾ ಈಗ ಜಗ ಮೆಚ್ಚಿದ ನಾಯಕ
  • ಆಟಗಾರರಿಂದ ​ ಔಟ್​ ಆಫ್​ ಹಂಡ್ರೆಡ್ ಮಾರ್ಕ್ಸ್
  • ಪ್ಲೇಯುರ್ಸ್​ ಕ್ಯಾಪ್ಟನ್ ಎಂದು ನಿರೂಪಿಸಿದ ಶರ್ಮಾ

ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮಾ ಈಗ ಜಗ ಮೆಚ್ಚಿದ ನಾಯಕ. ಆಟಗಾರರಂತೂ ಕ್ಯಾಪ್ಟನ್​ ರೋಹಿತ್​ಗೆ ಹಂಡ್ರೆಡ್​ ಔಟ್​ ಆಫ್​ ಹಂಡ್ರೆಡ್​ ನೀಡ್ತಿದ್ದಾರೆ. ರೋಹಿತ್​ ಶರ್ಮಾನ 24 X 7 ಕ್ಯಾಪ್ಟನ್​​ ಅನ್ನೋ ಬಿರುದನ್ನೇ ನೀಡಿದ್ದಾರೆ.

ವಿಶ್ವಕಪ್ ಮೆಗಾ​ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಟ್ರೋಫಿ ಗೆಲ್ಲುವಲ್ಲಿ ಮುಗ್ಗರಿಸಿತು. ಆದ್ರೆ, ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ ಮಾತ್ರ ಎಲ್ಲರ ಮನಗೆದ್ದರು. ಅಬ್ಬರದ ಬ್ಯಾಟಿಂಗ್​ ಜೊತೆಗೆ ಚಾಣಾಕ್ಷ ನಾಯಕತ್ವ ಎಲ್ಲರ ಗಮನ ಸೆಳೆಯಿತು. ಇಡೀ ಜಗತ್ತು ರೋಹಿತ್​ ನಾಯಕತ್ವನ್ನ ಮೆಚ್ಚಿತು. ಟೀಮ್​ ಇಂಡಿಯಾ ಆಟಗಾರರು ಕೂಡ ರೋಹಿತ್​ ಶರ್ಮಾ ನಾಯಕತ್ವಕ್ಕೆ ಬಹುಪರಾಕ್​ ಅಂತಿದ್ದಾರೆ.

ವಿಶ್ವಕಪ್​ ಮಾತ್ರವಲ್ಲ.. ರೋಹಿತ್​ ಶರ್ಮಾ ಸದಾ ಪ್ಲೇಯುರ್ಸ್​ ಕ್ಯಾಪ್ಟನ್​ ಅನ್ನೋ ಮಾತನ್ನು ತಂಡದ ಆಟಗಾರರೇ ಹೇಳ್ತಿದ್ದಾರೆ. ಆಟಗಾರರು ಏನನ್ನೇ ಮಾತನಾಡಬೇಕು ಅಂದ್ರೂ ರೋಹಿತ್​ ರೂಮ್​ ಸದಾ ತೆರೆದಿರುತ್ತಂತೆ. ಆಟಗಾರರಿಗೆ ಸದಾ ಲಭ್ಯ ಇರೋ ಮುಂಬೈಕರ್​, ಆಟಗಾರರಿಗೆ ಯಾವುದೇ ಅನುಮಾನವಿದ್ರೂ ಪರಿಹರಿಸ್ತಾರಂತೆ.

ಜೊತೆಗೆ ಆಟಗಾರರ ಬೆಂಬಲಕ್ಕೆ ಸದಾ ನಿಲ್ಲುವ ರೋಹಿತ್​ ಶರ್ಮಾ ತಪ್ಪುಗಳನ್ನ ತಿಳಿಸಿ ಹೇಳಿ ತಿದ್ದುತ್ತಾರಂತೆ. ನೀವು ನಂಬಲ್ಲ.. ಆಟಗಾರರೊಬ್ಬರು ಯಾವುದೋ ವಿಚಾರವಾಗಿ ಮಾತನಾಡಲು ರಾತ್ರಿ ಮೂರು ಗಂಟೆಗೆ ಕಾಲ್​ ಮಾಡಿದ್ರೂ, ರೋಹಿತ್​ ಸಮಸ್ಯೆಯನ್ನು ತಾಳ್ಮೆಯಿಂದ ಕೇಳಿದ್ರಂತೆ. ಹೀಗಾಗಿ ಎಲ್ಲರೂ ರೋಹಿತ್​ರನ್ನ 24* 7 ಕ್ಯಾಪ್ಟನ್​​ ಎಂದು ಕರೆಯುತ್ತಿದ್ದಾರಂತೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment