newsfirstkannada.com

ಕ್ಯಾಪ್ಟನ್ಸಿಗೆ ರೋಹಿತ್ ಶರ್ಮಾ ಗುಡ್​ಬೈ ಹೇಳ್ತಾರಾ? ಹಿಟ್​ಮ್ಯಾನ್ ನಾಯಕತ್ವ ತಂಡಕ್ಕೆ ಯಾಕೆ ಬೇಕು ಅಂದರೆ..!

Share :

21-11-2023

    ವಿಶ್ವಕಪ್​ ಫೈನಲ್​​ನಲ್ಲಿ ಟೀಮ್​ ಇಂಡಿಯಾಗೆ ಸೋಲು

    2 ವರ್ಷವಾದ್ರೂ ರೋಹಿತ್​ ತಂಡವನ್ನು ಮುನ್ನಡೆಸಲೇಬೇಕು

    ರೋಹಿತ್​ ನಿವೃತ್ತಿ ಹೇಳಿದರೆ ತಂಡಕ್ಕೆ ದೊಡ್ಡ ನಷ್ಟ ಆಗಲಿದೆ

ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಸೋತ ಬೆನ್ನಲ್ಲೇ, ಕ್ಯಾಪ್ಟನ್ ರೋಹಿತ್​ ಶರ್ಮಾ ಭವಿಷ್ಯದ ಚರ್ಚೆ ಎದ್ದಿದೆ. ರೋಹಿತ್​ ಶರ್ಮಾ ನಾಯಕತ್ವಕ್ಕೆ ಗುಡ್​ ಬೈ ಹೇಳ್ತಾರೆ ಅನ್ನೋ ಪ್ರಿಡಿಕ್ಷನ್​ ನಡೀತಿದೆ. ಒಂದು ವೇಳೆ ರೋಹಿತ್​ ನಿವೃತ್ತಿ ಹೇಳಿದ್ರೆ, ಟೀಮ್​ ಇಂಡಿಯಾಗೆ ಬಿಗ್​ ಲಾಸ್​. ಮುಂದಿನ 2 ವರ್ಷವಾದ್ರೂ ರೋಹಿತ್​ ತಂಡವನ್ನು ಮುನ್ನಡೆಸಲೇಬೇಕು.

ಒಂದೂವರೆ ತಿಂಗಳಿಂದ ರಂಜಿಸಿದ ವಿಶ್ವಕಪ್​ ಟೂರ್ನಿಗೆ ತೆರೆ ಬಿದ್ದಿದೆ. ಫೈನಲ್​ ಫೈಟ್​ನಲ್ಲಿ ಆಸ್ಟ್ರೇಲಿಯಾದ ಅಬ್ಬರದ ನಡುವೆ ಟೀಮ್​ ಇಂಡಿಯಾದ ಕಪ್​ ಗೆಲುವಿನ ಕನಸು ಕೊಚ್ಚಿ ಹೋಗಿದೆ. ತಂಡವನ್ನು ಯಶಸ್ಸಿಯಾಗಿ ಟೂರ್ನಿ ಯುದ್ದಕ್ಕೂ ಮುನ್ನಡೆಸಿದ ಕ್ಯಾಪ್ಟನ್​ ರೋಹಿತ್​ ಶರ್ಮಾ, ಫೈನಲ್​ನಲ್ಲಿ ಫೇಲ್​ ಆಗಿ ಬಿಟ್ರು. ಫೈನಲ್​ ಕದನದ ಸೋಲು ಹಿಟ್​ಮ್ಯಾನ್​ರನ್ನ ಮೌನಕ್ಕೆ ಶರಣಾಗುವಂತೆ ಮಾಡಿಬಿಟ್ಟಿದೆ. ನಾಯಕತ್ವಕ್ಕೆ ಗುಡ್​ ಬೈ ಹೇಳುವ ಹಂತಕ್ಕೂ ಕರೆದೊಯ್ದಿದೆ.

ರೋಹಿತ್​ ಶರ್ಮಾ ನಿವೃತ್ತಿ ಹೇಳೋದು ಬೇಡವೆ ಬೇಡ

ವಿಶ್ವಕಪ್​ ಫೈನಲ್​ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾ ನಾಯಕತ್ವಕ್ಕೆ ರೋಹಿತ್​ ಶರ್ಮಾ ನಿವೃತ್ತಿ ಹೇಳ್ತಾರೆ ಅನ್ನೋ ಸುದ್ದು ಹಲ್​​ಚಲ್​ ಎಬ್ಬಿಸಿದೆ. ನಿಜಕ್ಕೂ ರೋಹಿತ್​ ಶರ್ಮಾ ನಾಯಕತ್ವಕ್ಕೆ ಗುಡ್​ ಬೈ ಹೇಳಬೇಕಾ? ಯಾವುದೇ ಕಾರಣಕ್ಕೂ ಹಿಟ್​​ಮ್ಯಾನ್​ ನಿವೃತ್ತಿ ಹೇಳಬಾರದು ಅಂತಿವೆ ಈ ಕಾರಣಗಳು.

ಮುಂದಿನ 2 ವರ್ಷದಲ್ಲಿವೆ 3 ಐಸಿಸಿ ಟ್ರೋಫಿ ಟೂರ್ನಮೆಂಟ್​

ಏಕದಿನ ವಿಶ್ವಕಪ್​ ಟೂರ್ನಿಯ ಸೋಲು ಈಗ ಮುಗಿದ ಅಧ್ಯಾಯ. ಆ ನೋವನ್ನು ಮರೆಯಲು ಮುಂದಿನ 2 ವರ್ಷಗಳಲ್ಲಿ ಬರೋಬ್ಬರಿ 3 ಐಸಿಸಿ ಟೂರ್ನಿಗಳಿವೆ. 2024 ರ ಟಿ 20 ವಿಶ್ವಕಪ್​, 2025ರ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಹಾಗೂ ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​​ ಟೂರ್ನಿಗಳಿವೆ. ಈ ಮೂರು ಟೂರ್ನಿಗಳಲ್ಲಿ ಗೆದ್ದು ಐಸಿಸಿ ಟ್ರೋಫಿ ಜಯಿಸೋ ಅವಕಾಶ ಟೀಮ್​ ಇಂಡಿಯಾಗಿದೆ. ಇದಕ್ಕೆ ರೋಹಿತ್​ ನಾಯಕತ್ವದ ಅಗತ್ಯತೆ ತಂಡಕ್ಕಿದೆ.

3 ಮಾದರಿಯಲ್ಲಿ ತಂಡ ಮುನ್ನಡೆಸೋ ಸಮರ್ಥ ನಾಯಕನಿಲ್ಲ

2007ರಲ್ಲಿ ದ್ರಾವಿಡ್​ ನಾಯಕತ್ವ ತೊರೆದಾಗ ಎಮ್​.ಎಸ್​ ಧೋನಿ ರಿಪ್ಲೇಸ್​ಮೆಂಟ್​ ಆಯ್ಕೆಯಾಗಿದ್ದರು. ಕೊಹ್ಲಿ ನಾಯಕತ್ವದ ಪಟ್ಟುಗಳನ್ನು ಕಲಿತ ಮೇಲೆ ಧೋನಿ ಗುಡ್​ ಬೈ ಹೇಳಿದ್ರು. ಕೊಹ್ಲಿ ಕ್ಯಾಪ್ಟನ್ಸಿ ಪಟ್ಟ ತ್ಯಜಿಸಿದಾಗ ರೋಹಿತ್​ ಶರ್ಮಾ ಸ್ಥಾನ ತುಂಬಲು ಸಿದ್ಧರಾಗಿದ್ರು. ಈಗ ರೋಹಿತ್​ ನಾಯಕತ್ವ ತ್ಯಜಿಸಿಬಿಟ್ಟರೇ ಅಷ್ಟು ಸಮರ್ಥವಾಗಿ ಮೂರೂ ಫಾರ್ಮೆಟ್​ನಲ್ಲಿ ತಂಡವನ್ನು ಮುನ್ನಡೆಸೋ ಆಟಗಾರರೇ ಇಲ್ಲ.
ಹಾರ್ದಿಕ್​ ಪಾಂಡ್ಯರನ್ನ ಭವಿಷ್ಯದ ನಾಯಕ ಎನ್ನಲಾಗ್ತಿದ್ದರೂ ಆಲ್​​ರೌಂಡರ್​ ಫಿಟ್​ನೆಸ್​ ಮತ್ತು ಫಾರ್ಮ್​ ಸಮಸ್ಯೆಯಾಗಿದೆ. ಏಕದಿನ ವಿಶ್ವಕಪ್​ನಲ್ಲಿ ಉಪನಾಯಕನಾಗಿದ್ದ ಹಾರ್ದಿಕ್, ಟೂರ್ನಿ ಮದ್ಯೆಯೇ ತಂಡದಿಂದ ಹೊರಬಿದ್ರು. ಕೆ.ಎಲ್​ ರಾಹುಲ್​, ಜಸ್​​ಪ್ರಿತ್​ ಬೂಮ್ರಾ ನಾಯಕತ್ವವನ್ನು ಸಮರ್ಥವಾಗಿ ನಿರ್ವಹಿಸಿಲ್ಲ.

ಎಲ್ಲಾ ಮಾದರಿಯಲ್ಲಿ ರೋಹಿತ್​ ಬೊಂಬಾಟ್​​ ಆಟ

ಕಳೆದ 3 ವರ್ಷಗಳಲ್ಲಿ ರೋಹಿತ್​ ಶರ್ಮಾ ಬೆಸ್ಟ್​ ಟೆಸ್ಟ್​ ಬ್ಯಾಟ್ಸ್​ಮನ್​ ಆಗಿ ರೂಪುಗೊಂಡಿದ್ದಾರೆ. ಟಿ20 ಫಾರ್ಮೆಟ್​ನಲ್ಲಿ ರೋಹಿತ್​, ಡಿಸ್ಟ್ರಕ್ಟಿವ್​ ಬ್ಯಾಟ್ಸ್​ಮನ್​ ಅನ್ನೋದನ್ನು ಜಗವೇ ಒಪ್ಪಿದೆ. ಓನ್​ ಡೇಯಲ್ಲಿ ನೀಡ್ತಿರೋ ಪರ್ಫಾಮೆನ್ಸ್​​ಗೆ ವಿಶ್ವಕಪ್​ ಟೂರ್ನಿಯೇ ಉದಾಹರಣೆ ಆಗಿದೆ. ನಾಯಕತ್ವದ ಜೊತೆ ಬ್ಯಾಟಿಂಗ್​ನಲ್ಲೂ ಅಬ್ಬರಿಸುತ್ತಿರುವಾಗ ನಿವೃತ್ತಿ ಹೇಳಿದ್ರೆ ತಂಡಕ್ಕೇ ನಷ್ಟ.

ಮೆಂಟರ್​​ ರೋಹಿತ್​ ಅಗತ್ಯತೆ ತಂಡಕ್ಕೆ ಬೇಕೆಬೇಕು

ಆಟಗಾರರನ್ನು ಸಮರ್ಥವಾಗಿ ಹ್ಯಾಂಡಲ್​ ಮಾಡುವ ಮ್ಯಾನ್​ ಮ್ಯಾನೇಜ್​ಮೆಂಟ್ ಸ್ಕಿಲ್​ ನಾಯಕಕ್ಕೆ ಬೇಕಾದ ಫಸ್ಟ್​ ಕ್ವಾಲಿಟಿ. ಈ ಕ್ವಾಲಿಟಿ ರೋಹಿತ್​ಗಿದೆ. ಜೂನಿಯರ್​​, ಸೀನಿಯರ್​ ಅನ್ನೋ ಬೇದಭಾವವಿಲ್ಲದೇ ತಂಡವನ್ನು ಒಗ್ಗೂಡಿಸಿಕೊಂಡು ಹೋಗುವ ಸಾಮರ್ಥ ರೋಹಿತ್​ಗಿದೆ. ಜೂನಿಯರ್​ ಆಟಗಾರರ ಪಾಲಿನ ಬೆಸ್ಟ್​ ಮೆಂಟರ್​ ಆಗಿ ಕಾರ್ಯನಿರ್ವಹಿಸೋ ರೋಹಿತ್​ ಅಗತ್ಯತೆ ಭವಿಷ್ಯದ ದೃಷ್ಟಿಯಿಂದ ಟೀಮ್​ ಇಂಡಿಯಾಗೆ ಇದ್ದೇ ಇದೆ.

ವಿಶೇಷ ವರದಿ: ವಸಂತ್​ ಮಳವತ್ತಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕ್ಯಾಪ್ಟನ್ಸಿಗೆ ರೋಹಿತ್ ಶರ್ಮಾ ಗುಡ್​ಬೈ ಹೇಳ್ತಾರಾ? ಹಿಟ್​ಮ್ಯಾನ್ ನಾಯಕತ್ವ ತಂಡಕ್ಕೆ ಯಾಕೆ ಬೇಕು ಅಂದರೆ..!

https://newsfirstlive.com/wp-content/uploads/2023/11/Rohit-Sharma-1.jpg

Load More