newsfirstkannada.com

ವಿಂಡೀಸ್​​ ವಿರುದ್ಧ ಅಭೂತಪೂರ್ವ ಗೆಲುವು.. ಸಚಿನ್​​ ದಾಖಲೆ ಮುರಿದ ಕ್ಯಾಪ್ಟನ್​​ ರೋಹಿತ್!​​

Share :

16-07-2023

    ವೆಸ್ಟ್​​ ಇಂಡೀಸ್​​ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ ಗೆಲುವು

    ಟೀಂ ಇಂಡಿಯಾ ಪರ ದಾಖಲೆ ಬರೆದ ಕ್ಯಾಪ್ಟನ್​​ ರೋಹಿತ್..!

    ಟೆಸ್ಟ್​ ಕ್ಯಾಪ್ಟನ್ಸಿಯಲ್ಲಿ ಸಚಿನ್​ ದಾಖಲೆ ಮುರಿದ ಹಿಟ್​ಮ್ಯಾನ್​​

ವೆಸ್ಟ್​​ ಇಂಡೀಸ್​​ ವಿರುದ್ಧ ಮೊದಲ ಟೆಸ್ಟ್​ ಪಂದ್ಯದಲ್ಲಿ 140ಕ್ಕೂ ಹೆಚ್ಚು ರನ್​​ಗಳ ಗೆಲುವು ದಾಖಲಿಸಿದ ಟೀಂ ಇಂಡಿಯಾ ಪರ ಕ್ಯಾಪ್ಟನ್​​ ರೋಹಿತ್​​ ಶರ್ಮಾ ಇತಿಹಾಸ ಬರೆದಿದ್ದಾರೆ. ಈ ಮೂಲಕ ರೋಹಿತ್ ಶರ್ಮಾ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ.

ರೋಹಿತ್​​ ಶರ್ಮಾ ಟೆಸ್ಟ್​ ಫಾರ್ಮೇಟ್​​ನಲ್ಲಿ ಟೀಂ ಇಂಡಿಯಾವನ್ನು 8 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಈ ಪೈಕಿ 5 ಪಂದ್ಯಗಳನ್ನು ಟೀಂ ಇಂಡಿಯಾಗೆ ಗೆಲ್ಲಿಸಿಕೊಟ್ಟಿದ್ದಾರೆ. ಸಚಿನ್ ತೆಂಡೂಲ್ಕರ್ ಕ್ಯಾಪ್ಟನ್​ ಆಗಿದ್ದ 25 ಪಂದ್ಯಗಳಲ್ಲಿ ಕೇವಲ ನಾಲ್ಕು ಮ್ಯಾಚ್​​​ ಮಾತ್ರ ಗೆದ್ದಿದ್ದರು.

ಸದ್ಯ 68 ಟೆಸ್ಟ್ ಪಂದ್ಯಗಳಲ್ಲಿ 40 ಗೆಲುವಿನೊಂದಿಗೆ ವಿರಾಟ್ ಕೊಹ್ಲಿ ಭಾರತದ ಯಶಸ್ವಿ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಎಂಎಸ್ ಧೋನಿ 27 ಟೆಸ್ಟ್​​ ಗೆಲುವಿನೊಂದಿಗೆ 2ನೇ ಸ್ಥಾನದಲ್ಲಿದ್ದರೆ, ಸೌರವ್​ ಗಂಗೂಲಿ 21 ಟೆಸ್ಟ್ ಪಂದ್ಯಗಳ ಗೆಲುವು ಸಾಧಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ಇನ್ನು, ಮೊದಲ ಟೆಸ್ಟ್​ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಅದ್ಭುತ ಬ್ಯಾಟಿಂಗ್​ ಮಾಡಿ ಶತಕ ಸಿಡಿಸಿದರು. ಜತೆಗೆ ಮಾಜಿ ನಾಯಕ ವಿರಾಟ್ ಕೊಹ್ಲಿ 182 ಎಸೆತಗಳಲ್ಲಿ 76 ರನ್ ಗಳಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಂಡೀಸ್​​ ವಿರುದ್ಧ ಅಭೂತಪೂರ್ವ ಗೆಲುವು.. ಸಚಿನ್​​ ದಾಖಲೆ ಮುರಿದ ಕ್ಯಾಪ್ಟನ್​​ ರೋಹಿತ್!​​

https://newsfirstlive.com/wp-content/uploads/2023/07/Rohit_Test.jpg

Load More