ಟೀಮ್ ಇಂಡಿಯಾ ಮತ್ತು ಬಾಂಗ್ಲಾದೇಶ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿ!
ಹೇಗಾದ್ರೂ ಮಾಡಿ ಗೆಲ್ಲಲೇಬೇಕು ಎಂದು ಟೀಮ್ ಇಂಡಿಯಾ ಭಾರೀ ರಣತಂತ್ರ
ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ಯಾರಿಗೆ ಅವಕಾಶ ಅನ್ನೋ ಚರ್ಚೆ
ಟೀಮ್ ಇಂಡಿಯಾ ಮತ್ತು ಬಾಂಗ್ಲಾದೇಶ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿ ಭಾರೀ ಕುತೂಹಲ ಮೂಡಿಸಿದೆ. ಬಾಂಗ್ಲಾದೇಶದ ವಿರುದ್ಧ ಹೇಗಾದ್ರೂ ಗೆಲ್ಲಲೇಬೇಕು ಎಂದು ಟೀಮ್ ಇಂಡಿಯಾ ರಣತಂತ್ರ ರೂಪಿಸಿದೆ. ಈ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ಯಾರಿಗೆ ಅವಕಾಶ ಸಿಗಲಿದೆ ಎಂಬ ಚರ್ಚೆ ನಡೆಯುತ್ತಿದೆ.
ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಸರ್ಫರಾಜ್ ಖಾನ್ ಅಥವಾ ಕೆಎಲ್ ರಾಹುಲ್ ಇಬ್ಬರಲ್ಲಿ ಯಾರಿಗೆ ಅವಕಾಶ ಸಿಗಲಿದೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಫಾರ್ಮ್ ಸಮಸ್ಯೆ ಎದುರಾಗಿದ್ದು, ಈ ಬಗ್ಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಉತ್ತರ ನೀಡಿದ್ದಾರೆ.
ಕ್ಯಾಪ್ಟನ್ ರೋಹಿತ್ ಹೇಳಿದ್ದೇನು?
ಎಲ್ಲರ ಜೀವನದಲ್ಲೂ ಏರಿಳಿತಗಳಿವೆ. ನಾವು ಅದನ್ನು ಅರ್ಥಮಾಡಿಕೊಳ್ಳಬೇಕು. ಕೆಎಲ್ ರಾಹುಲ್ ಅವರಲ್ಲಿರೋ ಗುಣ ಎಲ್ಲರಿಗೂ ಗೊತ್ತು. ಅವರು ಎಲ್ಲಾ ಮಾದರಿ ಕ್ರಿಕೆಟ್ ಆಡಬೇಕು ಎನ್ನುವುದು ನಮ್ಮ ಅಭಿಪ್ರಾಯ. ಕೆ.ಎಲ್ ರಾಹುಲ್ಗೆ ಏನು ಬೇಕು ಎಂದು ಸ್ಪಷ್ಟ ಸಂದೇಶ ನೀಡುವುದು ಮುಖ್ಯ. ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಬಾರಿಸಿ ತಂಡಕ್ಕೆ ವಾಪಸಾದ ಬಳಿಕ ಉತ್ತಮ ಪ್ರದರ್ಶನ ನೀಡಿದರು. ಆದರೆ, ದುರದೃಷ್ಟವಶಾತ್ ಬಳಿಕ ಗಾಯಗೊಂಡು ಸರಣಿಯಿಂದ ದೂರ ಉಳಿದರು. ಹಾಗಾಗಿ ಕೆ.ಎಲ್ ರಾಹುಲ್ ಅವರನ್ನೇ ಆಡಿಸುತ್ತೇವೆ ಎಂದರು.
ಇದನ್ನೂ ಓದಿ: ಆಕ್ಷನ್ಗೆ ಮುನ್ನವೇ ಸಚಿನ್ ಪುತ್ರನಿಗೆ ಬಿಗ್ ಶಾಕ್; ಮುಂಬೈ ಇಂಡಿಯನ್ಸ್ ತಂಡದಿಂದ ಕೊಕ್!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್