newsfirstkannada.com

‘ನಾನು ಆ ಕಾರಣಕ್ಕೆ ಹುಚ್ಚನಾಗಿದ್ದೆ..’- ಅಸಲಿ ಸತ್ಯ ಬಿಚ್ಚಿಟ್ಟ ಕ್ಯಾಪ್ಟನ್​ ರೋಹಿತ್​ ಶರ್ಮಾ!

Share :

Published July 5, 2024 at 5:08pm

Update July 5, 2024 at 5:20pm

    ಬರೋಬ್ಬರಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದ ಟೀಮ್​ ಇಂಡಿಯಾ

    ಮುಂಬೈನ ವಾಂಖೆಡೆಯಲ್ಲಿ ಟಿ20 ವಿಶ್ವಕಪ್​ ವಿಜಯೋತ್ಸವದ ಆಚರಣೆ

    ನಾನು ಈಗ ಹುಚ್ಚನಾಗಿಬಿಟ್ಟಿದ್ದೇನೆ ಎಂದ ಕ್ಯಾಪ್ಟನ್​ ರೋಹಿತ್​ ಶರ್ಮಾ!

2024ರ ಟಿ20 ವಿಶ್ವಕಪ್ ಗೆಲುವು 2007ರ ಟಿ20 ವಿಶ್ವಕಪ್ ಗೆಲುವಿಗಿಂತಲೂ ಹೆಚ್ಚು ವಿಶೇಷ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ರು. ಈ ಸಂಬಂಧ ಮಾತಾಡಿದ ರೋಹಿತ್​ ಶರ್ಮಾ ಅವರು, 2007ರಲ್ಲಿ ಟಿ20 ವಿಶ್ವಕಪ್​ ಗೆದ್ದಾಗ ನನ್ನ ಭಾವನೆ ವಿಭಿನ್ನವಾಗಿತ್ತು. ನಾನು ಯಾವುದೇ ಕಾರಣಕ್ಕೂ ನನ್ನ ಮೊದಲ ವಿಶ್ವಕಪ್ ಗೆಲುವನ್ನು ಮರೆಯಲು ಸಾಧ್ಯವಿಲ್ಲ ಎಂದರು.

ಇನ್ನು, ಅದಕ್ಕಿಂತಲೂ 2024ರ ಗೆಲುವು ಸ್ವಲ್ಪ ಹೆಚ್ಚು ವಿಶೇಷ. ಕಾರಣ ನಾನು ಟೀಮ್​ ಇಂಡಿಯಾ ಕ್ಯಾಪ್ಟನ್​ ಆಗಿದ್ದೇನೆ. ಹಾಗಾಗಿ ಇದು ನನಗೆ ತುಂಬಾ ಹೆಮ್ಮೆಯ ಕ್ಷಣ. ನನ್ನ ಮೊದಲ ವಿಶ್ವಕಪ್​​ ಗೆದ್ದಾಗ ನಾನು ಆಟಗಾರ. ಈಗ ಕ್ಯಾಪ್ಟನ್​ ಆಗಿರೋ ಕಾರಣ ಹುಚ್ಚನಾಗಿಬಿಟ್ಟಿದ್ದೇನೆ. ನಾನು ಎಷ್ಟು ಹುಚ್ಚ ಎಂಬುದು ನನ್ನ ಖುಷಿ ನೋಡೋ ಇಡೀ ಭಾರತಕ್ಕೆ ಅರ್ಥವಾಗಲಿದೆ ಎಂದರು.

ಟೀಮ್​ ಇಂಡಿಯಾ ಫ್ಯಾನ್ಸ್​​​​ಗಳ ಉತ್ಸಾಹ ಹಾಗೂ ಅಪಾರ ಬೆಂಬಲ ನನಗೆ ಸಮಾಧಾನ ತರಿಸಿದೆ. ಅವರಿಗಾಗಿ ನಾವು ಈ ಸಾಧನೆ ಮಾಡಿದ್ದೇವೆ. ಅಭಿಮಾನಿಗಳಿಗೆ ನಾನು ಈ ಟ್ರೋಫಿ ಅರ್ಪಿಸುತ್ತೇನೆ ಎಂದರು.

ಸುಮಾರು 17 ವರ್ಷಗಳ ತಪ್ಪಸ್ಸಿನ ಬಳಿಕ 2024ರ ಐಸಿಸಿ ಟಿ20 ವಿಶ್ವಕಪ್ ಗೆದ್ದ ಟೀಮ್​ ಇಂಡಿಯಾ ತವರಿಗೆ ವಾಪಸ್​ ಆಗಿದೆ. ಭಾರತಕ್ಕೆ ಬಂದಿಳಿದ ಟೀಮ್​ ಇಂಡಿಯಾ ಆಟಗಾರರಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಸಿಕ್ಕಿದೆ. ಬಳಿಕ ಮುಂಬೈನ ವಾಂಖೆಡೆ ಸ್ಟೇಡಿಯಮ್​​ನಲ್ಲಿ ಟಿ20 ವಿಶ್ವಕಪ್​ ವಿಜಯೋತ್ಸವ ಆಚರಿಸಲಾಯ್ತು. ಈ ಸಂದರ್ಭದಲ್ಲಿ ಸಹಸ್ರಾರು ಅಭಿಮಾನಿಗಳು ಟೀಮ್‌ ಇಂಡಿಯಾ ಆಟಗಾರರನ್ನು ನೋಡಿ ಕಣ್ತುಂಬಿಕೊಂಡರು.

ಇದನ್ನೂ ಓದಿ: ‘ವಿಶ್ವಕಪ್​ ಗೆಲ್ಲಲು ಈ ಆಟಗಾರ ಕಾರಣ’- ಲಕ್ಷಾಂತರ ಜನರ ಮುಂದೆ ರೋಹಿತ್​​ ಹೊಗಳಿದ್ದು ಯಾರನ್ನ?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

‘ನಾನು ಆ ಕಾರಣಕ್ಕೆ ಹುಚ್ಚನಾಗಿದ್ದೆ..’- ಅಸಲಿ ಸತ್ಯ ಬಿಚ್ಚಿಟ್ಟ ಕ್ಯಾಪ್ಟನ್​ ರೋಹಿತ್​ ಶರ್ಮಾ!

https://newsfirstlive.com/wp-content/uploads/2024/03/ROHIT-28.jpg

Load More