newsfirstkannada.com

ಸಹ ಆಟಗಾರರಿಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಎಚ್ಚರಿಕೆ; ಯಾವ ವಿಚಾರಕ್ಕೆ ಗೊತ್ತಾ..?

Share :

13-08-2023

  2015-2019 ವೈಫಲ್ಯಕ್ಕೆ ಬ್ರೇಕ್ ಹಾಕಲು ರೋಹಿತ್ ಪಣ

  ಆ ತಪ್ಪು ಮರು ಕಳುಹಿಸದಂತೆ ರೋಹಿತ್ ವಾರ್ನ್​

  ಮಿಡಲ್ ಆರ್ಡರ್​ ಬ್ಯಾಟ್ಸ್​ಮನ್​​​ಗಳಿಗೆ ಎಚ್ಚರಿಕೆ

ಟೀಮ್ ಇಂಡಿಯಾದ ಫಿಟೆಸ್ಟ್ ಕ್ರಿಕೆಟರ್ ವಿರಾಟ್​ ಕೊಹ್ಲಿ.. ಈ ಫಿಟ್ನೆಸ್ ವಿಚಾರದಲ್ಲಿ ಸದಾ ಒಂದಿಲ್ಲೊಂದು ಟೀಕೆಗೆ ಗುರಿಯಾಗುವ ಆಟಗಾರ ಟೀಮ್ ಇಂಡಿಯಾದಲ್ಲಿ ಯಾರಾದ್ರೂ ಇದ್ರೆ ಅದು ರೋಹಿತ್ ಶರ್ಮಾ. ಆದ್ರೀಗ ಫಿಟ್ನೆಸ್​ನ ಸಿರೀಯಸ್ ಆಗಿ ತೆಗೆದುಕೊಂಡಿರುವ ರೋಹಿತ್, ತಾನೊಂದು ಬೆಸ್ಟ್​ ಎಕ್ಸಾಂಪಲ್​ ಸೆಟ್ ಮಾಡೋಕೆ ಹೊರಟಿದ್ದಾರೆ. ಅಷ್ಟೇ ಅಲ್ಲ! ಸಹ ಆಟಗಾರರಿಗೆ ಸ್ಟ್ರಾಂಗ್ ಮೆಸೇಜ್​ ಕೂಡ ಪಾಸ್ ಮಾಡಿದ್ದಾರೆ.

ರೋಹಿತ್ ಶರ್ಮಾ.. ವಿಶ್ವ ಕ್ರಿಕೆಟ್​ನ ಒನ್​ ಆ್ಯಂಡ್ ಒನ್ಲಿ ಹಿಟ್​​ಮ್ಯಾನ್​.. ಏಕದಿನ ಕ್ರಿಕೆಟ್​ನಲ್ಲಿ ಬರೋಬ್ಬರಿ 3 ದ್ವಿಶತಕ ಸಿಡಿಸಿರುವ ಈ ವೀರ.. ಒನ್​ ಆಫ್​ ದಿ ಬೆಸ್ಟ್​ ಸ್ಟ್ರೈಕರ್ ಆಗಿರೋ ರೋಹಿತ್​, ಸಿಡಿದು ನಿಂತರೆ ಖಲ್ಲಾಸ್ ಆಗೋದು ಗ್ಯಾರಂಟಿ. ಹೀಗೆ ಬ್ಯಾಟಿಂಗ್​ನಲ್ಲಿ ಸೂಪರ್ ಹಿಟ್ ಇನ್ನಿಂಗ್ಸ್​ ಕಟ್ಟರೋ ಹಿಟ್​ಮ್ಯಾನ್, ಫಿಟ್​ನೆಸ್ ವಿಚಾರದಲ್ಲಿ ಮಾತ್ರ ಡಲ್ಲು.. ಇದೀಗ ಇದಕ್ಕೆ ಬ್ರೇಕ್​​ ಹಾಕೋಕೆ ಹಿಟ್​ಮ್ಯಾನ್ ರೋಹಿತ್ ಮುಂದಾಗಿದ್ದಾರೆ.

ವೆಸ್ಟ್ ಇಂಡೀಸ್ ಪ್ರವಾಸದ ಬಳಿಕ ವಿಶ್ರಾಂತಿಯಲ್ಲಿರುವ ರೋಹಿತ್, ಏಷ್ಯಾಕಪ್​​ನತ್ತ ಚಿತ್ತ ನೆಟ್ಟಿದ್ದಾರೆ. ಇದಕ್ಕಾಗಿ ಭಾರೀ ಕಸರತ್ತನ್ನೇ ನಡೆಸ್ತಿರುವ ನಾಯಕ ರೋಹಿತ್, ಜಿಮ್​​ನಲ್ಲಿ ಬೆವರು ಸುರಿಸುತ್ತಿದ್ದಾರೆ.

ಏಷ್ಯಾಕಪ್​ನಲ್ಲಿ ಅಬ್ಬರಿಸಲು ರೋಹಿತ್ ಶರ್ಮಾ ತಯಾರಿ!

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಬ್ಯಾಟ್​ ಬೀಸದ ರೋಹಿತ್, ಈಗ ಸಂಪೂರ್ಣ ಚಿತ್ತ ಏಷ್ಯಾಕಪ್​ನತ್ತ ನೆಟ್ಟಿದ್ದಾರೆ. ಈ ಮಹತ್ವದ ಟೂರ್ನಿಯನ್ನ ಸಿರೀಯಸ್ ಆಗಿ ತೆಗೆದುಕೊಂಡಿರುವ ರೋಹಿತ್, ಸಿಕ್ಕ ಬ್ರೇಕ್​ನಲ್ಲಿ ವೇಟ್‌ಲಿಫ್ಟಿಂಗ್, ಲೆಗ್ ವ್ಯಾಯಾಮ ಮಾಡ್ತಾ ಜಿಮ್​ನಲ್ಲಿ ಸಖತ್ ವರ್ಕೌಟ್ ಮಾಡ್ತಿದ್ದಾರೆ. ಏಷ್ಯಾಕಪ್​​ಗೆ ತಯಾರಿ ಆರಂಭಿಸಿರುವ ಹಿಟ್​ಮ್ಯಾನ್​​​​, ತನ್ನದೇ ಆದ ಬೆಸ್ಟ್​ ಎಕ್ಸಾಂಪಲ್​ ಸೆಟ್ ಮಾಡೋಕೆ ಉತ್ಸಾಹದಲ್ಲಿದ್ದಾರೆ. ಈ ನಿಟ್ಟಿನಲ್ಲೇ ಬೆವರು ಹರಿಸ್ತಿರುವ ರೋಹಿತ್, ಸಹ ಆಟಗಾರರಿಗೆ ಎಚ್ಚರಿಕೆ ರವಾನಿಸಿದ್ದಾರೆ.

ಸಹ ಆಟಗಾರರಿಗೆ ಹಿಟ್​ಮ್ಯಾನ್ ವಾರ್ನಿಂಗ್..!

ಮೆಗಾ ಟೂರ್ನಿಗಳನ್ನ ಗೆಲ್ಲೋಕೆ ಹೊರಟಿರುವ ಹಿಟ್​ಮ್ಯಾನ್ ರೋಹಿತ್​ಗೆ ನೂರೊಂದು ಅಡೆತಡೆ ಎದುರಾಗಿದೆ. ಅದರಲ್ಲೂ 4 ಹಾಗೂ 5ನೇ ಕ್ರಮಾಂಕದ ಚಿಂತೆ ಬಹುವಾಗಿ ಕಾಡ್ತಿದೆ. ಈ ನಿಟ್ಟಿನಲ್ಲಿ ಹಲವು ಆಟಗಾರರನ್ನ ಪ್ರಯೋಗಿಸಿರುವ ಟೀಮ್ ಮ್ಯಾನೇಜ್​ಮೆಂಟ್, ಕೆಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆಹಾಕಿದೆ. ಇದೀಗ ಏಷ್ಯಾಕಪ್​​​​​ಗೆ 19 ದಿನಗಳಿರುವಂತೆಯೇ ಏಕದಿನ ವಿಶ್ವಕಪ್​ ರೇಸ್​ನಲ್ಲಿರುವ ಆಟಗಾರರಿಗೆ ಓತ್ತಡದಲ್ಲಿ ಆಡಿ ಅಥವಾ ಜಾಗ ಖಾಲಿ ಮಾಡುವಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಒತ್ತಡದಲ್ಲಿ ಆಡುವವರನ್ನ ಬಯಸುವೆ..!

ಕಳೆದ 4-5 ವರ್ಷಗಳಿಂದ ಗಾಯಗಳ ಶೇಕಡಾವಾರು ಹೆಚ್ಚಿದೆ. ಆಟಗಾರರು ಗಾಯಗೊಂಡು ಅಲಭ್ಯರಿದ್ದಾಗ, ವಿಭಿನ್ನ ಆಟಗಾರರೊಂದಿಗೆ ವಿಭಿನ್ನ ಪ್ರಯೋಗಕ್ಕೆ ಮುಂದಾಗುತ್ತೀರಿ. ನಾನು ಇದನ್ನ ನಂಬರ್​-4 ಸ್ಲಾಟ್​​ ಬಗ್ಗೆ ಹೇಳುತ್ತಿದ್ದೇನೆ. ನಮಗೆ ಉತ್ತರ ಬೇಕಾಗಿರುವ ಬಹಳಷ್ಟು ಪ್ರಶ್ನೆಗಳಿವೆ. ಆದರೆ ಏಷ್ಯಾಕಪ್‌ನಲ್ಲಿ ಒತ್ತಡದಲ್ಲಿ ಬ್ಯಾಟಿಂಗ್ ಮಾಡುವ ಕೆಲ ಆಟಗಾರರನ್ನು ನೋಡಲು ಬಯಸುತ್ತೇನೆ-ರೋಹಿತ್ ಶರ್ಮಾ, ನಾಯಕ

ಹಿಟ್​​ಮ್ಯಾನ್ ರೋಹಿತ್ ಶರ್ಮಾರ ಈ ಮಾತಿನ ಹಿಂದಿನ ಕಾರಣ. ಶ್ರೇಯಸ್ ಅಯ್ಯರ್ ಹಾಗೂ ಕೆ.ಎಲ್.ರಾಹುಲ್ ಇಂಜುರಿಗೆ ತುತ್ತಾಗಿರುವುದು. ಈ ಇಬ್ಬರ ಲಭ್ಯತೆ ಬಗ್ಗೆ ಎಳ್ಳಷ್ಟು ಕ್ಲಾರಿಟಿ ಟೀಮ್ ಮ್ಯಾನೇಜ್​ಮೆಂಟ್​ಗೆ ಇಲ್ಲ. ಹೀಗಾಗಿ ಸಂಜು ಸ್ಯಾಮ್ಸನ್​ ಹಾಗೂ ಸೂರ್ಯಕುಮಾರ್​ ಯಾದವ್​​ರನ್ನ ಪ್ರಯೋಗಿಸಿತ್ತು. ಇವರ ಪರ್ಫಾಮೆನ್ಸ್ ಫ್ಲಾಟ್ ಟ್ರ್ಯಾಕ್​​ಗೆ ಮಾತ್ರವೇ ಸಿಮೀತವಾಗಿತ್ತು. ಇದೇ ಕಾರಣಕ್ಕೆ ಹಿಟ್​ಮ್ಯಾನ್ ರೋಹಿತ್ ಶರ್ಮಾ ಅಂಡರ್ pressureನಲ್ಲಿ ಆಡೋ ಆಟಗಾರರನ್ನೇ ಬಯಸುವೆ ಎಂಬ ಕ್ಲಿಯರ್ ಮೆಸೇಜ್ ಪಾಸ್ ಮಾಡಿದ್ದಾರೆ. ಇನ್​ಫ್ಯಾಕ್ಟ್ ಮಿಡಲ್ ಆರ್ಡರ್​ ಬ್ಯಾಟ್ಸ್​ಮನ್​​​ಗಳಿಗೆ ಎಚ್ಚರಿಕೆ ಕಾರಣ ಹಿಂದಿನ 2 ಏಕದಿನ ವಿಶ್ವಕಪ್​.

ಟಾಪ್-3 ಮೇಲೆಯೇ ನಿಂತಿತ್ತು ವಿಶ್ವಕಪ್​​ಗಳ ಭವಿಷ್ಯ..!

2011ರ ಏಕದಿನ ವಿಶ್ವಕಪ್​ ಬಳಿಕ ಟೀಮ್ ಇಂಡಿಯಾ ಸೆಮೀಸ್​ನಲ್ಲೇ ಮುಗ್ಗರಿಸ್ತಿದೆ. ಇದಕ್ಕೆ ಕಾರಣ ಮಿಡಲ್ ಆರ್ಡರ್ ವೈಫಲ್ಯವೇ ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲ. 2015 ಹಾಗೂ 2019ರ ಏಕದಿನ ವಿಶ್ವಕಪ್​ ಸೆಮಿಫೈನಲ್​​ನಲ್ಲಿ ಟಾಪ್-3​ ವಿಫಲವಾಗಿತ್ತು. ಒತ್ತಡದ ಪರಿಸ್ಥಿತಿಯಗೆ ಸಿಲುಕಿದ್ದ ಮಿಡಲ್ ಆರ್ಡರ್​ ಗೆಲುವಿನ ಹಳಿಗೇರಿಸುವಲ್ಲಿ ವಿಫಲವಾಗಿತ್ತು. ಇಂಟರೆಸ್ಟಿಂಗ್ ವಿಚಾರ ಅಂದ್ರೆ ಈ ಎರಡು ಏಕದಿನ ವಿಶ್ವಕಪ್​​ಗಳಲ್ಲಿ ಭಾರತ ಪರ 12 ಶತಕಗಳು ಮೂಡಿಬಂದಿವೆ. ಇವೆಲ್ಲವೂ ಟಾಪ್​​-3 ಬ್ಯಾಟರ್​ಗಳ ಕೊಡುಗೆ.

2019ರಲ್ಲಿ ಇಂಗ್ಲೆಂಡ್​ ಗೆಲುವಿನ ಸಿಕ್ರೇಟ್ ಮಿಡಲ್ ಆರ್ಡರ್​..!

ಮಿಡಲ್ ಆರ್ಡರ್​ ವೈಫಲ್ಯದಿಂದ ಟೀಮ್ ಇಂಡಿಯಾದ ವಿಶ್ವಕಪ್​​​​​ ಕನಸು ಛಿದ್ರಗೊಂಡರೆ, ಇದೇ ಮಿಡಲ್ ಆರ್ಡರ್​ನ ಸಕ್ಸಸ್​ನಿಂದಾಗಿ ಇಂಗ್ಲೆಂಡ್ ವಿಶ್ವಕಿರೀಟಕ್ಕೆ ಮುತ್ತಿಟ್ಟಿತ್ತು. ಬೆನ್ ಸ್ಟೋಕ್ಸ್​, ಇಯಾನ್ ಮಾರ್ಗನ್, ಜೋಶ್ ಬಟ್ಲರ್​​ ಅಮೋಘ ಬ್ಯಾಟಿಂಗ್​​ನ ಪ್ರತಿಫಲ ಚಾಂಪಿಯನ್ ಪಟಕ್ಕೇರಿತ್ತು. ಇದೇ ಕಾರಣಕ್ಕೆ ಒತ್ತಡದ ಪರಿಸ್ಥಿತಿಗಳನ್ನ ಮೆಟ್ಟಿನಿಲ್ಲುವ ಆಟಗಾರರಿಗೆ ಚಾನ್ಸ್ ನೀಡುವ ಬಯಕೆಯ ಮರ್ಮವಾಗಿದೆ. ಅದೇನೇ ಆಗಲಿ..! ಏಷ್ಯಾಕಪ್​ಗೆ ಸಜ್ಜಾಗ್ತಿರುವ ಕ್ಯಾಪ್ಟನ್​ ರೋಹಿತ್, ಮೆಗಾ ಟೂರ್ನಿ ಗೆಲ್ಲುವ ಪಣ ತೊಟ್ಟಿದ್ದು. ಸಹ ಆಟಗಾರರಿಗೆ ಎಚ್ಚರಿಕೆಯ ಸಂದೇಶ ರವಾನಿಸ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್

ಸಹ ಆಟಗಾರರಿಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಎಚ್ಚರಿಕೆ; ಯಾವ ವಿಚಾರಕ್ಕೆ ಗೊತ್ತಾ..?

https://newsfirstlive.com/wp-content/uploads/2023/07/Rohit-sharma.jpg

Load More