/newsfirstlive-kannada/media/post_attachments/wp-content/uploads/2024/11/ROHIT-SHARMA-1.jpg)
ರೋಹಿತ್​ ಶರ್ಮಾ ಆಸ್ಟ್ರೇಲಿಯಾ ಎದುರಿನ ಮೊದಲ ಟೆಸ್ಟ್​ ಆಡ್ತಾರಾ.? ಇಲ್ವಾ.? ಟೀಮ್​ ಇಂಡಿಯಾದ ಅಭಿಮಾನಿಗಳನ್ನ ಕಾಡ್ತಿರೋ ಮಿಲಿಯನ್​ ಡಾಲರ್​ ಪ್ರಶ್ನೆಯಿದು. ಒಂದೆಡೆ, ಮಗನ ಆಗಮನ ರೋಹಿತ್​ ಕುಟುಂಬದ ಸಂತೋಷವನ್ನ ಹೆಚ್ಚಿಸಿದೆ. ಅತ್ತ ಆಘಾತದ ಮೇಲೆ ಆಘಾತ ಎದುರಿಸಿರೋ ಟೀಮ್​ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ. ಈ ಸಂದರ್ಭದಲ್ಲಿ ರೋಹಿತ್​ ಶರ್ಮಾಗೆ ದೇಶ ಮೊದಲಾ.? ಕುಟುಂಬ ಮೊದಲಾ.? ಎಂಬ ಪ್ರಶ್ನೆ ಎಲ್ಲರನ್ನ ಕಾಡ್ತಿದೆ.
ಭಾರತ - ಆಸ್ಟ್ರೇಲಿಯಾ ನಡುವಿನ ಟಫೆಸ್ಟ್​ ಬ್ಯಾಟಲ್​ ಆರಂಭಕ್ಕೆ ಕೆಲ ದಿನಗಳಷ್ಟೇ ಬಾಕಿ. ಗುರುವಾರದಿಂದ ಹೈವೋಲ್ಟೆಜ್​ ಸರಣಿ ಕಿಕ್​ ಸ್ಟಾರ್ಟ್​ ಆಗಲಿದೆ. ತವರಿನಲ್ಲಿ ಹೀನಾಯವಾಗಿ ಸೋತು, ಆಸ್ಟ್ರೇಲಿಯಾಗೆ ಹಾರಿರೋ ಟೀಮ್​ ಇಂಡಿಯಾ ಗೆಲುವಿನ ಟ್ರ್ಯಾಕ್​ಗೆ ಮರಳಲು ಸರ್ಕಸ್​​ ಶುರು ಮಾಡಿದೆ. ಪರ್ತ್​​​ನಲ್ಲಿ ಕಳೆದ 5 ದಿನಗಳಿಂದ ಬೆವರಿಳಿಸ್ತಾ ಇರೋ ಟೀಮ್​ ಇಂಡಿಯಾ ಆಟಗಾರರು, ಯುದ್ಧಕ್ಕೆ ಸಿದ್ಧತೆ ನಡೆಸ್ತಿದ್ದಾರೆ. ಆದರೆ, ದುರಾದೃಷ್ಟ ಟೀಮ್​ ಇಂಡಿಯಾ ಬೆನ್ನು ಬಿದ್ದಂತಿದೆ. ಆಘಾತದ ಮೇಲೆ ಆಘಾತ ಎದುರಾಗ್ತಿದೆ.
/newsfirstlive-kannada/media/post_attachments/wp-content/uploads/2024/11/INJURIES.jpg)
ಕಾಂಗರೂ ನಾಡಲ್ಲಿ ಟೀಮ್​ ಇಂಡಿಯಾಗೆ ಆಘಾತ.!
ಬಾರ್ಡರ್​​-ಗವಾಸ್ಕರ್​ ಟೆಸ್ಟ್​ ಸರಣಿಗೆ ಸಿದ್ಧತೆ ನಡೆಸ್ತಿರೋವಾಗಲೇ ಟೀಮ್​ ಇಂಡಿಯಾಗೆ ಗಾಯಗಳ ರೂಪದಲ್ಲಿ ಹಿನ್ನಡೆಗಳು ಎದುರಾಗ್ತಿವೆ. ಇನ್ನು ಅಸಲಿ ಯುದ್ಧವೇ ಆರಂಭವಾಗಿಲ್ಲ. ಸಮರಾಭ್ಯಾಸದಲ್ಲೇ ಸೈನಿಕರೆಲ್ಲಾ ಗಾಯಕ್ಕೆ ತುತ್ತಾಗಿದ್ದಾರೆ. ತಂಡದ ಮೇನ್​ ಬ್ಯಾಟರ್​​ ವಿರಾಟ್​ ಕೊಹ್ಲಿ ನಿಗೂಢ ಇಂಜುರಿಗೆ ತುತ್ತಾಗಿ ಸ್ಕ್ಯಾನ್​ಗೆ ಒಳಗಾಗಿದ್ರೆ, ಸರ್ಫರಾಜ್​ ಖಾನ್ ಇನ್ನೂ​ ಇಂಜುರಿಯಿಂದ ಕಂಪ್ಲೀಟ್​ ಚೇತರಿಸಿಕೊಂಡಿಲ್ಲ. ಅದ್ರ ಬೆನ್ನಲ್ಲೇ, ಯಂಗ್​ ಬ್ಯಾಟರ್​​ ಶುಭ್​​ಮನ್​ ಗಿಲ್​ ಇಂಜುರಿಗೆ ತುತ್ತಾಗಿ ಮೊದಲ ಪಂದ್ಯದಿಂದಲೇ ಹೊರಬಿದ್ದಿದ್ದಾರೆ.
/newsfirstlive-kannada/media/post_attachments/wp-content/uploads/2024/11/ROHIT-SHARMA-2.jpg)
ಗಾಯಾಳುಗಳ ಆಘಾತ ಟೆನ್ಶನ್ ಮೇಲೆ ಟೆನ್ಶನ್​.! ಮುಂಬೈನಲ್ಲೇ ಉಳಿದ ಕ್ಯಾಪ್ಟನ್​ ರೋಹಿತ್​.!
ಇಡೀ ತಂಡ ಈಗಾಗಲೇ ಪರ್ತ್​​ ತಲುಪಿ ಅಭ್ಯಾಸ ಆರಂಭಿಸಿದ್ದರೆ, ಕ್ಯಾಪ್ಟನ್​ ರೋಹಿತ್​ ಶರ್ಮಾ ಇನ್ನೂ ಮುಂಬೈನಲ್ಲೇ ಉಳಿದಿದ್ದಾರೆ. 2ನೇ ಮಗುವಿನ ನಿರೀಕ್ಷೆಯಲ್ಲಿದ್ದ ರೋಹಿತ್​, ಕುಟುಂಬದೊಂದಿಗೆ ಇರಲು ನಿರ್ಧರಿಸಿದ್ರು. ಇದೀಗ ಪತ್ನಿ ರಿತಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾಗಿದೆ. ರೋಹಿತ್​ ಕುಟುಂಬಕ್ಕೆ ಹೊಸ ಅತಿಥಿ ಎಂಟ್ರಿಯಾಗಿ 3 ದಿನಗಳಾಯ್ತು. ಆದ್ರೂ, ರೋಹಿತ್​ ಮೊದಲ ಟೆಸ್ಟ್​ ಆಡ್ತಾರಾ.? ಇಲ್ವಾ.? ಅನ್ನೋದು ಇನ್ನೂ ಉತ್ತರ ಸಿಗದ ಪ್ರಶ್ನೆಯಾಗೇ ಉಳಿದಿದೆ.
/newsfirstlive-kannada/media/post_attachments/wp-content/uploads/2024/11/ROHIT-SHARMA.jpg)
ನಾಯಕನ ಬರುವಿಕೆಯ ನಿರೀಕ್ಷೆಯಲ್ಲಿ ಮ್ಯಾನೇಜ್​ಮೆಂಟ್.!
I AM ON NATIONAL DUTIES SO EVERYTHING ELSE CAN WAIT.. ಟೀಮ್​ ಇಂಡಿಯಾ ಮಾಜಿ ನಾಯಕ ಎಮ್​​.ಎಸ್​ ಧೋನಿ ಹೇಳಿದ್ದ ಮಾತುಗಳಿವು. ಅದು, 2014ರ ಆಸ್ಟ್ರೇಲಿಯಾ ಪ್ರವಾಸ. ಆಸ್ಟ್ರೇಲಿಯಾ ಧೋನಿ ತಂಡವನ್ನ ಮುನ್ನಡೆಸುತ್ತಾ ಇದ್ದರು, ಭಾರತದಲ್ಲಿ ಪತ್ನಿ ಸಾಕ್ಷಿ, ಝೀವಾಗೆ ಜನ್ಮ ನೀಡಿದ್ರು. ಝೀವಾ ಹುಟ್ಟಿದ ಬಳಿಕ ಪ್ರೆಸ್​ ಕಾನ್ಫರೆನ್ಸ್​ನಲ್ಲಿ ಕೇಳಿದ ಪ್ರಶ್ನೆಗೆ ಧೋನಿ, ದೇಶದ ಕೆಲಸದಲ್ಲಿದ್ದಾಗ ದೇಶವೇ ಮೊದಲು ಎಂಬರ್ಥದ ಮಾತನ್ನಾಡಿದ್ರು.
ಧೋನಿ ಮಗು ಹುಟ್ಟಿದ ಸಂದರ್ಭದಲ್ಲೇ ದೇಶಕ್ಕಾಗಿ ತಂಡದ ಜೊತೆಗಿದ್ದರು. ಇದೀಗ ರೋಹಿತ್​ ಶರ್ಮಾ ಪರಿಸ್ಥಿತಿ ಭಿನ್ನವಾಗಿದೆ. ಮಗು ಹುಟ್ಟಿದ್ದು ಆಗಿದೆ. ತಾಯಿ-ಮಗು ಆರೋಗ್ಯವಾಗಿಯೂ ಇದ್ದಾರೆ. ಇನ್ನೊಂದೆಡೆ ಟೀಮ್​ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ. ನಾಯಕನ ಅಲಭ್ಯತೆ ತಂಡವನ್ನ ಬಹುವಾಗಿ ಕಾಡ್ತಿದೆ. ಆದರೆ, ತಂಡಕ್ಕೆ ತನ್ನ ಬರುವಿಕೆ ಬಗ್ಗೆ ಕ್ಲಾರಿಟಿಯನ್ನೇ ನೀಡದ ರೋಹಿತ್​ ಶರ್ಮಾ ಮುಂಬೈನಲ್ಲೇ ಉಳಿದಿದ್ದಾರೆ.
/newsfirstlive-kannada/media/post_attachments/wp-content/uploads/2024/11/SOURAV-GANGULY.jpg)
ನಾನಾಗಿದ್ರೆ ಪರ್ತ್​ ಟೆಸ್ಟ್​ ಆಡ್ತಿದ್ದೆ.. ಗಂಗೂಲಿ ನೇರ ಮಾತು.!
ರೋಹಿತ್​ ಅಗತ್ಯತೆ ತಂಡಕ್ಕಿದೆ ಅನ್ನೋದು ಹೊರ ಜಗತ್ತಿಗೂ ಗೊತ್ತಾಗಿದೆ. ಫ್ಯಾನ್ಸ್ ರೋಹಿತ್​​ ಆಸ್ಟ್ರೇಲಿಯಾ ತೆರಳುವಂತೆ ಒತ್ತಾಯಿಸ್ತಿದ್ದಾರೆ. ಟೀಮ್​ ಇಂಡಿಯಾ ಮಾಜಿ ಕ್ಯಾಪ್ಟನ್​ ಸೌರವ್​ ಗಂಗೂಲಿ ಕೂಡ ರೋಹಿತ್​ ಬಹುಬೇಗ ತಂಡ ಕೂಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ರೋಹಿತ್​ ಶರ್ಮಾ ಬೇಗ ಹೋಗ್ತಾರೆ ಅಂತಾ ಅಂದುಕೊಂಡಿದ್ದೇನೆ. ತಂಡಕ್ಕೆ ನಾಯಕನ ಅಗತ್ಯತೆ ಇದೆ. ರೋಹಿತ್​ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ರು ಎಂದು ಕೇಳಿದ್ದೇನೆ. ರೋಹಿತ್​​ ಹೊರಡ್ತಾರೆ ಎಂಬ ನಂಬಿಕೆಯಿದೆ. ನಾನು ಅವರ ಜಾಗದಲ್ಲಿ ಇದ್ದಿದ್ದರೆ, ಪರ್ತ್​ ಟೆಸ್ಟ್​ನಲ್ಲಿ ಆಡ್ತಿದ್ದೆ. 22ಕ್ಕೆ ಪಂದ್ಯವಿದೆ. ಒಂದು ವಾರ ಸಮಯವಿದೆ. ಇದೊಂದು ದೊಡ್ಡ ಸರಣಿ. ಮತ್ತೆ ಆಸ್ಟ್ರೇಲಿಯಾಗೆ ಹೋಗಲು ಆಗಲ್ಲ. ರೋಹಿತ್​ ಅತ್ಯುತ್ತಮವಾದ ನಾಯಕ. ಆರಂಭದಲ್ಲೇ ಭಾರತಕ್ಕೆ ನಾಯಕನ ಅಗತ್ಯವಿದೆ. ಎಂದು ಸೌರವ್ ಗಂಗೂಲಿ ಹೇಳಿದ್ದಾರೆ
ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ ಫೈನಲ್​ ದೃಷ್ಟಿಯಿಂದ ಈ ಸರಣಿ ಟೀಮ್​ ಇಂಡಿಯಾ ಪಾಲಿಗೆ ಮಹತ್ವದ್ದಾಗಿದೆ. ತವರಿನಲ್ಲಿ ನ್ಯೂಜಿಲೆಂಡ್​ ವಿರುದ್ಧ ಹೋದ ಮಾನವನ್ನ ಕಾಂಗರೂ ನಾಡಲ್ಲಿ ಮರಳಿ ಪಡೆಯೋ ಬಿಗ್​ ಚಾಲೆಂಜ್​ ಕೂಡ ತಂಡದ ಮುಂದಿದೆ. ಇಂತಾ ಮಹತ್ವದ ಸೀರಿಸ್​ಗೆ ಸಜ್ಜಾಗಿರೋ ತಂಡಕ್ಕೆ ಸಾರಥಿಯೇ ಇಲ್ಲದಂತಾಗಿದೆ. ಇಂಜುರಿಯ ಆಘಾತ ಎದುರಿಸಿರುವ ಟೀಮ್​ ಮ್ಯಾನೇಜ್​ಮೆಂಟ್​ ನಾಯಕನ ಬರುವಿಕೆಗೆ ಕಾದು ಕುಳಿತಿದೆ. ಆದ್ರೆ, ರೋಹಿತ್​ ಈ ವಿಚಾರದಲ್ಲಿ ಮೌನಕ್ಕೆ ಜಾರಿದ್ದು, ಏನು ನಿರ್ಧಾರ ತೆಗೆದುಕೊಳ್ತಾರೆ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us